ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಅವರ ನೇಮಕವನ್ನು ರದ್ದು ಮಾಡಿ, ಆ ಸ್ಥಾನಕ್ಕೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಡಿಜಿಪಿ ಎ.ಆರ್. ಇನ್ಫೆಂಟ್ ಅವರನ್ನು ನೇಮಿಸುವಂತೆ ಕೇಂದ್ರ ಆಡಳಿತ ನ್ಯಾಯಮಂಡಳಿ ನೀಡಿದ್ದ ಆದೇಶಕ್ಕೆ ತಡೆ ನೀಡಿರುವ ಹೈಕೋರ್ಟ್, ಸದ್ಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಂಗಳವಾರ ಆದೇಶಿಸಿದೆ.

ಈ ತಿಂಗಳ 30ರವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಮೂರ್ತಿ ದಿಲೀಪ್ ಬಿ.ಭೋಸಲೆ ನೇತೃತ್ವದ ವಿಭಾಗೀಯ ಪೀಠ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಬಿದರಿ ಈ ತಿಂಗಳ ಅಂತ್ಯದವರೆಗೆ ನಿರಾಳ.

ಇದೇ 16ರಂದು ನ್ಯಾಯಮಂಡಳಿ (ಸಿಎಟಿ) ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಪೀಠ ಸುಮಾರು ಎರಡೂವರೆ ಗಂಟೆಗಳ ಕಾಲ ನಡೆಸಿತು. ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಎಸ್. ವಿಜಯಶಂಕರ್ ವಾದ ಮಂಡಿಸಿ ಸಿಎಟಿ ತನ್ನ ವ್ಯಾಪ್ತಿ ಮೀರಿ ಆದೇಶ ನೀಡಿದೆ ಎಂದರು.

`ಡಿಜಿಪಿ ಹುದ್ದೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರನ್ನು ಶಿಫಾರಸು ಮಾಡುವಂತೆ ಕೇಂದ್ರ ಲೋಕಸೇವಾ ಆಯೋಗ ಸೂಚಿಸಿತ್ತು. ಇತರ ಅಧಿಕಾರಿಗಳ ಜೊತೆ ಬಿದರಿ ಅವರ ಹೆಸರನ್ನೂ ಕಳುಹಿಸಲಾಗಿತ್ತು. ಎಲ್ಲ ಪ್ರಕ್ರಿಯೆಗಳ ನಂತರ ಬಿದರಿ ಅವರ ನೇಮಕ ನಡೆದಿದೆ. ಈ ನೇಮಕವನ್ನು ಇನ್ಫೆಂಟ್ ಸಿಎಟಿ ಮುಂದೆ ಪ್ರಶ್ನಿಸಿದ್ದರೇ ವಿನಾ ಲೋಕಸೇವಾ ಆಯೋಗಕ್ಕೆ ಬಿದರಿ ಅವರ ಹೆಸರನ್ನೂ ಸೇರ್ಪಡೆ ಮಾಡಿರುವುದನ್ನು ಅವರು ಪ್ರಶ್ನಿಸಿರಲಿಲ್ಲ.

`ಆದರೆ ಅಚ್ಚರಿ ಎಂಬಂತೆ ಸಿಎಟಿ, ಬಿದರಿ ಅವರ ಹೆಸರನ್ನು ಸೇರ್ಪಡೆ ಮಾಡಿರುವುದನ್ನೇ ರದ್ದು ಮಾಡಿದೆ. ಅರ್ಜಿಯಲ್ಲಿ ಮಾಡದ ಮನವಿಗೂ ಅದು ಆದೇಶ ಹೊರಡಿಸಿದ್ದು, ಇದು ಕಾನೂನುಬಾಹಿರ~ ಎಂದರು.

`ಯಾವುದೇ ಒಬ್ಬ ಅಧಿಕಾರಿಯನ್ನು ಸರ್ಕಾರ ನೇಮಕ ಮಾಡುವ ಸಂದರ್ಭದಲ್ಲಿ, ಆ ನೇಮಕವು ಕಾನೂನುಬದ್ಧವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡುವುದಷ್ಟೇ ನ್ಯಾಯಮಂಡಳಿಗಳ ಕೆಲಸ. ಆ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕು ಎಂದು ನಿರ್ಣಯಿಸಲು ನೇಮಕಾತಿ ಸಮಿತಿ ಇದೆ. ಇದರ ಮಧ್ಯೆ ಪ್ರವೇಶ ಮಾಡುವ ಅಧಿಕಾರ ನ್ಯಾಯಮಂಡಳಿಗಳಿಗೆ ಇಲ್ಲ~ ಎಂದರು.

`ಲೋಕಸೇವಾ ಆಯೋಗಕ್ಕೆ ಬಿದರಿ ಹೆಸರು ಶಿಫಾರಸು ಮಾಡುವಾಗ ಕೆಲವೊಂದು ಸತ್ಯಾಂಶ ಮುಚ್ಚಿಡಲಾಗಿದೆ ಎಂದು ಸಿಎಟಿ ಅಭಿಪ್ರಾಯಪಟ್ಟಿದೆ. ಆದರೆ ಇದು ನಿಜವಲ್ಲ. ಈ ವಿಷಯದ ಬಗ್ಗೆ ಸಿಎಟಿ ಮುಂದೆ ಯಾವುದೇ ವಾದ, ಪ್ರತಿವಾದ ನಡೆದಿಲ್ಲ.

ಒಂದು ವೇಳೆ ನಡೆದಿದ್ದರೆ, ಸರ್ಕಾರ ತನ್ನ ಕ್ರಮ ಸಮರ್ಥಿಸಿಕೊಳ್ಳುತ್ತಿತ್ತು. ಆದರೆ ವಿಚಾರಣೆಯನ್ನೇ ನಡೆಸದೆ, ಆದೇಶ ಪ್ರಕಟ ಮಾಡಿರುವುದು ಕಾನೂನುಬಾಹಿರ~ ಎಂದರು.
ಇದನ್ನು ಸದ್ಯ ಮಾನ್ಯ ಮಾಡಿದ ಪೀಠ, ವಿಚಾರಣೆಯನ್ನು 28ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.