ಮಂಗಳವಾರ, ಮೇ 18, 2021
22 °C

ಸಿಡಿಲು ಬಡಿದು ಎರಡು ಎತ್ತು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ಸೋಮವಾರ ಗಾಳಿ-ಮಳೆ ಸುರಿದ ಪರಿಣಾಮ ಗಿಡ-ಮರಗಳು ನೆಲಕ್ಕೆ ಉರುಳಿವೆ. ಮೊಳಕಾಲ್ಮುರು ತಾಲ್ಲೂಕಿನ ಜೆ.ಬಿ.ಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಪಕೃತಿ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಎತ್ತುಗಳು ಮೃತಪಟ್ಟಿವೆ.ನಗರದಲ್ಲಿ ಸಂಜೆ 5.30ರ ಸುಮಾರಿಗೆ 20 ನಿಮಿಷ ಕಾಲ ಮಳೆ ಸುರಿಯಿತು. ನಗರದ ವಿ.ಪಿ. ಬಡಾವಣೆ ಹಾಗೂ ನ್ಯಾಷನಲ್ ಶಾಲೆ ಬಳಿ ಮಳೆ ಗಾಳಿಗೆ ಬೃಹತ್ ಮರಗಳು ನೆಲಕ್ಕೆ ಉರುಳಿಬಿದ್ದು, ಸಂಚಾರಕ್ಕೆ ಅಡ್ಡಿಯಾಯಿತು. ಈ ಘಟನೆಯಲ್ಲಿ ವಾಹನವೊಂದು ಜಖಂಗೊಂಡಿವೆ. ನಗರದ ಹೊರವಲಯದ ಪಿಳ್ಳೇಕೆರೆನಹಳ್ಳಿಯಲ್ಲಿ ಮನೆಯೊಂದರ ಶೀಟ್‌ಗಳು ಹಾರಿ ಹೋಗಿವೆ. ಇದೇ ಗ್ರಾಮದ ಬಳಿಯ ಎನ್.ಎಚ್.-13ರಲ್ಲಿ ಬೇವಿನಮರವೊಂದು ಬಿದ್ದಿದೆ.ಹೊಸದುರ್ಗ ತಾಲ್ಲೂಕು ಎನ್.ಜಿ.ಹಳ್ಳಿ ಕಬ್ಬಳ ಗ್ರಾಮದಲ್ಲಿ ಎಂ.ಎಚ್. ಮೂರ್ತಿ ಎನ್ನುವವರ ಮನೆ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಇದೇ ಗ್ರಾಮದಲ್ಲಿ ತೆಂಗಿನಮರವೊಂದು ಬಿದ್ದಿದೆ.ಜಾನುವಾರು ಸಾವು

ಮೊಳಕಾಲ್ಮುರು: ತಾಲ್ಲೂಕಿನ ಜೆ.ಬಿ. ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಕ್ಕುರ್ತಿ ಗ್ರಾಮದಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ಎರಡು ಎತ್ತು ಮೃತಪಟ್ಟಿರುವ ಘಟನೆ ನಡೆದಿದೆ.ಗ್ರಾಮದ ನಾಯಕ ಜನಾಂಗದ ತಿಪ್ಪೇಸ್ವಾಮಿ (60) ಎಂಬುವವರಿಗೆ ಸೇರಿದ ಈ ಎತ್ತುಗಳನ್ನು ಹೊಲದಲ್ಲಿ ಮರಕ್ಕೆ ಕಟ್ಟಿ ಹಾಕಿದ್ದಾಗ ಘಟನೆ ನಡೆದಿದೆ. ಸ್ಥಳಕ್ಕೆ ತಹಶೀಲ್ದಾರ್ ವಿ.ಆರ್. ನಾಯ್ಕ ಅವರು ಭೇಟಿ ನೀಡಿದ್ದರು.ರಾಂಪುರ ಸುತ್ತಮುತ್ತ ಗ್ರಾಮಗಳಲ್ಲಿ ಸೋಮವಾರ ಸಂಜೆ ಅಂದಾಜು ಒಂದುವರೆ ಗಂಟೆ ಕಾಲ ಉತ್ತಮ ಮಳೆ ಸುರಿದಿದ್ದು, ಬೇಸಿಗೆ ದಗೆಯಿಂದ ಬೇಸತ್ತಿದ್ದ ಜನತೆಗೆ ತುಸು ಸಮಾಧಾನ ಮೂಡಿಸಿದೆ ಎಂದು ವರದಿಯಾಗಿದೆ.ಲಕ್ಷಾಂತರ ನಷ್ಟ

ಹೊಸದುರ್ಗ: ಮಳೆ ಗಾಳಿಗೆ ಸಿಲುಕಿ ಎರಡು ಕೋಳಿ ಫಾರ್ಮ್ ಹೌಸ್‌ಗಳು ಚಾವಣಿಗಳು ಬಿದ್ದುಹೋಗಿ ಸುಮಾರು ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ಸೋಮವಾರ ಕರ‌್ಲಮಾವಿನಹಳ್ಳಿ ಸಮೀಪ ಜರುಗಿದೆ.ತಾಲ್ಲೂಕಿನ ಕಸಬಾ ಹೋಬಳಿ ವೇದಾವತಿ ನದಿ ದಂಡೆಯಲ್ಲಿ ಬರುವ ಕರ‌್ಲಮಾವಿನಹಳ್ಳಿ ಸಮೀಪದ ಜಮೀನಿನ್ಲ್ಲಲಿದ್ದ ಎಂ.ಎಸ್. ರಾಮಪ್ಪ ಹಾಗೂ ಕೆಂಚಪ್ಪ ಎಂಬವರಿಗೆ ಸೇರಿದ ಎರಡು ಕೋಳಿ ಫಾರ್ಮ್‌ಗಳು ಬಿರುಸಾದ ಗಾಳಿಯಿಂದ ಹಾನಿಗೆ ಒಳಗಾಗಿವೆ. ಕಲ್ಲು ಚಪ್ಪಡಿ ಬಿದ್ದು ಸುಮಾರು ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.