ನವದೆಹಲಿ (ಪಿಟಿಐ): ಸುಮಾರು 1,400 ಸಿಬ್ಬಂದಿಯ ಕೊರತೆ ಎದುರಿಸುತ್ತಿರುವ ಸಿಬಿಐಗೆ ಪ್ರತಿಭಾವಂತರನ್ನು ಆಕರ್ಷಿಸಲು ಅತ್ಯುತ್ತಮ ಉತ್ತೇಜನಗಳನ್ನು ನೀಡಬೇಕು ಮತ್ತು ನೇಮಕಾತಿ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂದು ಕೇಂದ್ರೀಯ ಜಾಗೃತ ಆಯೋಗ (ಸಿವಿಸಿ) ಶಿಫಾರಸು ಮಾಡಿದೆ.

`ವಿಶೇಷವಾಗಿ ಪೊಲೀಸ್ ಉಪ ಅಧೀಕ್ಷರು ಮತ್ತು ಇನ್ಸ್ಪೆಕ್ಟರ್ಗಳು ಸೇರಿದಂತೆ ತನಿಖಾ ಅಧಿಕಾರಿಗಳ ಹಂತದಲ್ಲಿ ಅನೇಕ ಹುದ್ದೆಗಳು ಖಾಲಿ ಇದೆ. ಇದು ಸಿಬಿಐ ಕೈಗೆತ್ತಿಕೊಂಡ ಪ್ರಕರಣಗಳ ತನಿಖೆಯ ಪ್ರಗತಿಗೆ ತೀವ್ರ ಅಡಚಣೆ ಉಂಟು ಮಾಡುತ್ತಿದೆ~ ಎಂದು ಸಿವಿಸಿ ಹೇಳಿದೆ.

2010ರ ಡಿಸೆಂಬರ್ 31ರ ಅಧಿಕೃತ ಅಂಕಿಅಂಶದ ಪ್ರಕಾರ, ವಿವಿಧ ಹಂತಗಳಲ್ಲಿ ಒಟ್ಟು 1,379 ಹುದ್ದೆಗಳು ಖಾಲಿ ಇವೆ. ಈ ಪೈಕಿ ಕಾರ್ಯನಿರ್ವಾಹಕ ಅಧಿಕಾರಿಗಳ ಹಂತದಲ್ಲೇ ಅತಿ ಹೆಚ್ಚು ಅಂದರೆ 946 ಹುದ್ದೆಗಳು ಖಾಲಿ ಉಳಿದಿವೆ. ಕಳೆದ ವರ್ಷ ಸಿಬಿಐ 1,173 ಪ್ರಕರಣಗಳ ತನಿಖೆ ಪೂರ್ಣಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.