ಶುಕ್ರವಾರ, ಜೂನ್ 25, 2021
30 °C
ನ್ಯೂಸ್‌9 ಕುಟುಕು ಕಾರ್ಯಾಚರಣೆ ಪ್ರಕರಣ

ಸಿಬಿಐ ತನಿಖೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಂಧನ ಸಚಿವ ಡಿ.ಕೆ.ಶಿವ­ಕುಮಾರ್‌ ಅವರ ನಿವಾಸದಲ್ಲಿ ಕುಟುಕು ಕಾರ್ಯಾಚರಣೆ ನಡೆಸಲು ತೆರಳಿದ್ದ ನ್ಯೂಸ್‌ 9 ಆಂಗ್ಲ ಸುದ್ದಿ­ವಾಹಿನಿಯ ವರದಿಗಾರರನ್ನು ಬಂಧಿಸಿದ ಮತ್ತು ಇಡೀ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ‘ನ್ಯಾಯ­ಕ್ಕಾಗಿ ನಾವು’ ಸಂಘಟನೆಯು ಆಗ್ರಹಿಸಿದೆ.ಈ ಕುರಿತು ಮಂಗಳವಾರ ಪತ್ರಿಕಾ­ಗೋಷ್ಠಿಯಲ್ಲಿ ಮಾತನಾಡಿದ ಸಂಘ­ಟನೆಯ ಅಧ್ಯಕ್ಷ ಇಂದೂಧರ ಹೊನ್ನಾ­ಪುರ, ‘ಪ್ರಕರಣದಲ್ಲಿ ಸರ್ಕಾರವು ಬೇಜವಾಬ್ದಾರಿ­ಯಾಗಿ ವರ್ತಿಸದೆ, ನಿಷ್ಪಕ್ಷಪಾತವಾಗಿ ಪ್ರಕರಣದ ತನಿಖೆ ನಡೆಸಬೇಕು. ಇಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಅಥವಾ ನ್ಯೂಸ್‌ 9 ಆಂಗ್ಲ ಸುದ್ದಿವಾಹಿನಿಯ ತಪ್ಪಿದೆಯೇ ಎಂಬು­ದರ ಕುರಿತು  ಸಮಗ್ರ ತನಿಖೆಯಾಗಬೇಕು’ ಎಂದರು.‘ನ್ಯೂಸ್‌ 9 ಸುದ್ದಿ­ವಾಹಿನಿಯ ಮುಖ್ಯಸ್ಥ ಮಹೇಶ್‌ ಮಿಶ್ರಾ ಅವರು ತಲೆಮರೆಸಿ­ಕೊಳ್ಳುವ ಅಗತ್ಯವಿಲ್ಲ. ಅವರು ನ್ಯಾಯವಾಗಿ, ಸಮಾಜದ ಒಳಿತಿಗಾಗಿ ಕುಟುಕು ಕಾರ್ಯಾ­ಚರಣೆ ­, ಅದರ ಕುರಿತು ಸಮರ್ಥನೆಯನ್ನು ನೀಡಲಿ. ಪ್ರಕರಣ­ವನ್ನು ಧೈರ್ಯದಿಂದ ಎದುರಿಸಲಿ’ ಎಂದರು.ಸಂಘಟನೆಯ ಕಾರ್ಯಾ­ಧ್ಯಕ್ಷ ಅಗ್ನಿ ಶ್ರೀಧರ್‌ ಮಾತನಾಡಿ, ‘ನ್ಯೂಸ್‌ 9 ಸುದ್ದಿ­ವಾಹಿನಿಯ ಮುಖ್ಯಸ್ಥ ತಲೆಮರೆಸಿ­ಕೊಂಡಿರುವುದು ಅನೇಕ ಊಹಾ ಪೋಹಗಳಿಗೆ ಕಾರಣ­ವಾಗಿದೆ. ಡಿ.ಕೆ.­ಶಿವ­ಕುಮಾರ್‌ ಅವ­ರಲ್ಲಿ ₨ 5 ಕೋಟಿ ಹಣವನ್ನು ಕೇಳ­ಲಾಗಿದೆ ಎಂಬ ಆರೋಪ ಕೇಳಿಬರು­ತ್ತಿದೆ. ಇದ­ರಿಂದ, ಒಟ್ಟಾರೆ ಪ್ರಕರಣದ ಸತ್ಯಾಂಶವು ಜನತೆಯ ಮುಂದೆ ಬರಬೇಕಿದೆ’  ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.