ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀರೆ ಹೋಗಿ ಪ್ಯಾಂಟು ಬಂತು

Last Updated 24 ಡಿಸೆಂಬರ್ 2010, 11:15 IST
ಅಕ್ಷರ ಗಾತ್ರ

ಸ್ತ್ರೀಯರಿಗೂ ಪ್ಯಾಂಟು ಎಂಬ ವಿಚಾರಕ್ಕೆ ಮೊದಲ ಸಾಮಾಜಿಕ ಸ್ವೀಕೃತಿ ಸಿಕ್ಕಿದ್ದು 1890ರ ನಂತರದಲ್ಲಿ ಸೈಕಲ್ ಪರಿಚಯವಾದಾಗಲೇ!ಆರಂಭದಲ್ಲಿ ಈ ‘ವಿಭಜಿತ ಸ್ಕರ್ಟ್’ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದು ಹೆಣ್ತನದ ಪ್ರತೀಕವಲ್ಲ ಎಂಬಂತಹ ದೂರುಗಳು ಬಂದದ್ದಲ್ಲದೆ ‘ಶಾಕಿಂಗ್’ ಎಂಬ ಅಸಮಾಧಾನವೂ ಇತ್ತು. ಆದರೂ ಕ್ರಮೇಣ ಸ್ವೀಕೃತವಾದದ್ದೇಕೆ ಗೊತ್ತೆ? ಆರಂಭದಲ್ಲಿ ಇದು ಹುಡುಗರ ಡ್ರೆಸ್ ಎಂಬ ಗೊಂದಲವನ್ನೇನೂ ಮೂಡಿಸುವಂತಿರಲಿಲ್ಲ.

ಈಗಿನ ನಿಜವಾದ ಟ್ರೌಶರ್‌ಗಳು ಸ್ಟ್ಯಾಂಡರ್ಡ್ ಸ್ತ್ರೀ ದಿರಿಸುಗಳಾಗಲು ಬಹಳ ದೀರ್ಘ ಕಾಲವೇ ಬೇಕಾಯಿತು ಬಿಡಿ. ಆದರೆ ಈಗಲೂ ‘ಪ್ಯಾಂಟು ಹಾಕಿದವರೆಲ್ಲ ಹಾದಿ ಬಿಟ್ಟವರು’ ಎಂಬಂತಹ ಕುಹಕ ಮಾತು ಸಿನಿಕರಲ್ಲಿ. 1920 ರವರೆಗೂ ಹುಡುಗಿಯರು ಸ್ಲ್ಯಾಕ್ಸ್ ಹಾಕಿರಲಿಲ್ಲ. ಆಟೋಟಗಳಿಗೂ ‘ಶಾರ್ಟ್ಸ್’ ಹಾಕುವಂತಿರಲಿಲ್ಲ. ಅಸಹಜ, ಲೈಂಗಿಕವಾಗಿ ಅನಾಕರ್ಷಕ, ಕುರೂಪ ವಾಗಿ ಕಾಣುತ್ತದೆ ಎಂದೇ ಪ್ಯಾಂಟಿಗೆ ಸ್ವಾಗತದ ಬದಲು ಗೇಲಿಯ ಮಾತು ಸಿಕ್ಕದ್ದು! ನಮ್ಮ ಸಂಸ್ಕೃತಿಯಲ್ಲಿ ಪ್ಯಾಂಟುಗಳು ಶತಮಾನ ಗಳವರೆಗೂ ಪುರುಷ ಅಧಿಕಾರದ ಸಾಂಕೇತಿಕ ಬಾಡ್ಜ್‌ನಂತಿದ್ದದ್ದಲ್ಲವೆ?

1930ರ ಹೊತ್ತಿಗಾಗಲೇ ಸ್ತ್ರೀಯರು ಪಿಕ್‌ನಿಕ್ ಹೊರಡಬಹುದಾಗಿತ್ತು, ಟೆನಿಸ್ ಆಡಬಹುದಿತ್ತು, ತಮ್ಮ ಕೈತೋಟದಲ್ಲಿ ನೆಲ ಅಗಿಯಬಹು ದಿತ್ತು...ಎಲ್ಲವೂ ತಮಗೆ ಅನುಕೂಲಕರವಾದ ದಿರಿಸಿನಲ್ಲಿ! ಆದರೆ ಇದೆಲ್ಲ ಖಾಸಗಿ ಕ್ಷಣಗಳಲ್ಲಿ ಮಾತ್ರ. ಕಚೇರಿಗೊ, ಪಾರ್ಟಿಗೊ, ಸ್ಲ್ಯಾಕ್ಸ್ ಹಾಕುವ ಮಾತೇ ಇಲ್ಲ. ಕಡೆಗೂ 1960ರ ಕಾಲದಲ್ಲಿ  ಪ್ಯಾಂಟುಗಳು ಲಾಸ್ಯಯುತ, ಗೌರವಪೂರ್ವಕ ದಿರಿಸುಗಳೆನಿಸಿದವು. ಆರಾಮದಾಯಕ ಮತ್ತು ಸ್ವಾತಂತ್ರ್ಯದ ಅನುಭವ ನೀಡುವ ದಿರಿಸಿಗಾಗಿ ನಡೆದ ದೀರ್ಘ ಹೋರಾಟದಲ್ಲಿ ಕಡೆಗೂ ಜಯ ಅವಳದಾಯಿತು.                                          

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT