ಹೊಸಪೇಟೆ: ಚಿತ್ತಾಕರ್ಷಕ ಉಡುಗೆ ತೊಡುಗೆ ಯನ್ನು ತೊಟ್ಟು, ಗೆಳತಿಯರೊಂದಿಗೆ ಫೋಟೋ ತೆಗೆಸಿಕೊಳ್ಳುವ ಸಂಭ್ರಮ...

ಹೌದು! ಹೊಸಪೇಟೆಯ ಥಿಯೋಸಾಫಿಕಲ್ ಮಹಿಳಾ ಮಹಾವಿದ್ಯಾಲಯದ ಅಂತಿಮ ಪದವಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಮತ್ತು ಕಾಲೇಜು ವಾರ್ಷಿಕೋತ್ಸವ ಸಂಭ್ರಮದಲ್ಲಿ ಕ್ಯಾಂಪಸ್ ಕಂಗೊಳಿಸಿದ ಸುಮಧುರ ಕ್ಷಣಗಳಿವು.

ಇಲ್ಲಿನ ಶಿಕ್ಷಕರು ನಮ್ಮ ಉಜ್ವಲ ಭವಿಷ್ಯಕ್ಕೆ ಪಠ್ಯ ಶಿಕ್ಷಣ ಮತ್ತು ನೀತಿ ಬೋಧನೆಯೊಂದಿಗೆ ಪರಿಪಕ್ವ ಮಾಡಿದ್ದಾರೆ ಎಂಬ ಧನ್ಯತಾ ಭಾವ ವಿದ್ಯಾರ್ಥಿನಿ ಯರ ಮೊಗದಲ್ಲಿ ಕಾಣುತ್ತಿತ್ತು. ತಮ್ಮ ಮೂರು ವರ್ಷಗಳ ಅನುಭವವನ್ನು ಪ್ರಥಮ ಹಾಗೂ ದ್ವಿತೀಯ ವಿದ್ಯಾರ್ಥಿನಿಯರ ಜತೆ ಹಂಚಿಕೊಂಡು ಆತ್ಮೀಯತೆ ಮೆರೆದರು.

ಕಾಲೇಜಿನ ಹಳೇ ವಿದ್ಯಾರ್ಥಿನಿ ಹಾಗೂ ಸಮಾರಂಭದ ಅತಿಥಿ, ಚಿತ್ರದುರ್ಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಬಿ.ನೀಲಮ್ಮ ಅವರ ಹಿತವಾದ ಮಾತುಗಳು ಒಟ್ಟಾರೆ ಒಂದು ಕುಟುಂಬದ ಸದಸ್ಯರು ಪರಸ್ಪರ ಕುಶಲೋಪರಿ ವಿಚಾರ ವಿನಿಮಯ ನಡೆದಿದೆ ಎಂಬ ವಾತಾವರಣಕ್ಕೆ ಕಾಲೇಜು ಕ್ಯಾಂಪಸ್ ಅಣಿಯಾಗಿತ್ತು.

ಯುವ ಮನಸಿನ ಚಂಚಲತೆ, ಆಸೆ ಮತ್ತು ಆಕಾಂಕ್ಷೆಗಳು ಸಹಜವಾಗಿದ್ದರೂ ತುಂಟತನ ಹಾಗೂ ಚೇಷ್ಟೆಗಳ ನಡುವೆ ಪ್ರೌಢಿಮೆಯಿಂದ ಉಜ್ವಲ ಜೀವನಕ್ಕೆ ಅಡಿಪಾಯ ಹಾಕಿಕೊಳ್ಳ ಬೇಕೆಂಬ ಸಲಹೆಯನ್ನು ಆಕೆ ನೀಡಿದರು.
ತಮ್ಮ ಸಾಧನೆಗೆ ನೆರವಾದ ಕಾಲೇಜಿನ ಋಣ ತೀರಿಸಲು ಒಂದು ದತ್ತಿ ನಿಧಿ ನೀಡುವುದಾಗಿ ಘೋಷಿಸಿದರು. ಅಂತಿಮ ಪದವಿ ವಿದ್ಯಾರ್ಥಿನಿ ಯರು ಅನಿಸಿಕೆ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.