ಸೋಮವಾರ, ಏಪ್ರಿಲ್ 19, 2021
25 °C

ಸುರಕ್ಷತಾ ಸಾಧನ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಕ್ಷತೆ ಮತ್ತು ಕಣ್ಗಾವಲು ಸಾಧನಗಳ ಬೃಹತ್ ಪ್ರದರ್ಶನ ‘ಇಫ್‌ಸೆಜ್ ಸೌಥ್ ಇಂಡಿಯಾ 2011’ ಇದೇ ಮೊದಲ ಸಲ ಜೂನ್ 1 ರಿಂದ 3ರ ವರೆಗೆ ತುಮಕೂರು ರಸ್ತೆಯ ಬೆಂಗಳೂರು ಅಂತರ್ರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಏರ್ಪಾಟಾಗಿದೆ.ಏಷ್ಯನ್ ವೃತ್ತಿಪರ ಸುರಕ್ಷತಾ ಸಂಸ್ಥೆಯ ಭಾರತೀಯ ಘಟಕದ ಸಹಯೋಗದಲ್ಲಿ ನಡೆಯುವ ಈ ಮೇಳದಲ್ಲಿ ದೇಶವಿದೇಶಗಳ ಪ್ರತಿಷ್ಠಿತ ಸುರಕ್ಷತಾ ಸಾಧನಗಳ ತಯಾರಕರು ಭಾಗವಹಿಸಲಿದ್ದಾರೆ.ಇಲ್ಲಿ ಸಾಮೂಹಿಕ ಸುರಕ್ಷತಾ ಸಾಧನಗಳು, ವಿಮಾನ ನಿಲ್ದಾಣ, ಕಾರ್ಪೊರೇಟ್ ಮತ್ತು ಸರ್ಕಾರಿ ಕಟ್ಟಡಗಳು, ಐಟಿ ಕೇಂದ್ರಗಳು ಮುಂತಾದವುಗಳಲ್ಲಿ ಬಳಸಬಹುದಾದ ಸಾಧನಗಳನ್ನು ಪ್ರದರ್ಶಿಸಲಾಗುತ್ತದೆ. ಆಂತರಿಕ ಭದ್ರತೆಯ ಹೊಣೆ ಹೊತ್ತ ವಿವಿಧ ರಾಜ್ಯಗಳ ಪೊಲೀಸ್ ಅಧಿಕಾರಿಗಳು, ಖಾಸಗಿ ಭದ್ರತಾ ಮೇಲ್ವಿಚಾರಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.