ಸೋಮವಾರ, ಜೂನ್ 21, 2021
29 °C

ಸುರಪುರ: ನೂತನ ಕಟ್ಟಡಕ್ಕೆ ಬ್ಯಾಂಕ್ ಸ್ಥಳಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ:  ಕರ್ಣಾಟಕ ಬ್ಯಾಂಕ್ ಈ ಮಾಸಾಂತ್ಯಕ್ಕೆ 503 ಶಾಖೆಗಳನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ. 4.84 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಬ್ಯಾಂಕ್‌ಗೆ 86,868 ಶೇರುದಾರರು ಇದ್ದಾರೆ. 2011ರ ವರೆಗೆ ರೂ. 2370.84 ಕೋಟಿ ಬಡ್ಡಿ ಬಂದಿದ್ದು, ರೂ. 204.61 ಕೋಟಿ ನಿವ್ವಳ ಲಾಭಗಳಿಸಿದೆ. ಆರು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಬ್ಯಾಂಕ್‌ನ ಮಹಾಪ್ರಬಂಧಕ ಪಿ. ಜೈರಾಮ ಹಂದೆ ವಿವರಿಸಿದರು.ಭಾನುವಾರ ಬ್ಯಾಂಕ್‌ನ್ನು ಬಸ್ ನಿಲ್ದಾಣದ ಹತ್ತಿರ ಇರುವ ಭೀಮಪ್ಪ ಬಡಿಗೇರ್ ಕಟ್ಟಡಕ್ಕೆ ಸ್ಥಳಾಂತರಗೊಳಿಸಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇಂಟರ್‌ನೆಟ್ ಬ್ಯಾಂಕಿಂಗ್, ಕೋರ್ ಬ್ಯಾಂಕಿಂಗ್ ಸೇವೆ, ಎ.ಟಿ.ಎಂ., ಮಲ್ಟಿ ಬ್ರ್ಯಾಂಚ್ ಬ್ಯಾಂಕಿಂಗ್, ವಿವಿಧ ಸಾಲಗಳು ಇತರ ಸೇವೆಗಳನ್ನು ಬ್ಯಾಂಕ್ ಗ್ರಾಹಕರಿಗೆ ಒದಗಿಸುತ್ತಿದೆ. ಒಂದು ವಾರದೊಳಗೆ ಇಲ್ಲಿ ಎ.ಟಿ.ಎಂ. ಆರಂಭಗೊಳ್ಳಲಿದೆ.

 

ಯಾದಗಿರಿಯಲ್ಲಿ ಶೀಘ್ರದಲ್ಲಿ ಸ್ಥಾನಿಕ ಕೇಂದ್ರ ಸ್ಥಾಪನೆಯಾಗಲಿದೆ. ಗ್ರಾಹಕರ ಸೇವೆಯೆ ನಮ್ಮ ಗುರಿ ಎಂದು ನುಡಿದರು.ರೈತರು ಮತ್ತು ಉದ್ಯಮಿಗಳ ಸಹಯೋಗದಲ್ಲಿ 1924ರಲ್ಲಿ ಆರಂಭವಾದ ಕರ್ಣಾಟಕ ಬ್ಯಾಂಕ್ ಇಂದು ದೇಶದ ವಿವಿಧೆಡೆ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲೂ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿದೆ. ದೇಶದಲ್ಲಿ 334 ಎ.ಟಿ.ಎಂ. ಕೇಂದ್ರಗಳನ್ನು ಹೊಂದಿದೆ. ಸುರಪುರದ ಶಾಖೆ ರೂ. 51 ಕೋಟಿ ವಹಿವಾಟು ಹೊಂದಿದ್ದು ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದರು.ಸಹಾಯಕ ಮಹಾಪ್ರಬಂಧಕ ಎಚ್. ಎಸ್. ರುದ್ರಯ್ಯ, ಸ್ಥಳಾಂತರ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ನ್ಯಾಯವಾದಿ ಬಸವಲಿಂಗಪ್ಪ ಪಾಟೀಲ ಮಾತನಾಡಿದರು.ಗುರುರಾಜ ವೈದ್ಯ ಪ್ರಾರ್ಥಿಸಿದರು. ಇಲ್ಲಿನ ಶಾಖೆಯ ವ್ಯವಸ್ಥಾಪಕ ಸಂಜೀವಕುಮಾರ್ ವಂಶಿ ಸ್ವಾಗತಿಸಿದರು. ಶಿಕ್ಷಕ ಪಂಡಿತ ನಿಂಬೂರ್ ನಿರೂಪಿಸಿ ವಂದಿಸಿದರು. ವಿಠಲ ಯಾದವ್, ವೆಂಕೋಬ ಮಂಗಳೂರ, ಎಸ್. ಗೋಪಾಲನಾಯಕ್, ಕಟ್ಟಡ ಮಾಲಿಕ ಶರಣಪ್ಪ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.