ಬುಧವಾರ, ಜೂನ್ 16, 2021
23 °C

ಸೂಕ್ತ ಪ್ರಾತಿನಿಧ್ಯ ಕಲ್ಪಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಆದಿ ಕರ್ನಾಟಕ (ಮಾದಿಗ) ಸಮುದಾಯಕ್ಕೆ ಸೂಕ್ತ ಸಾಮಾಜಿಕ, ರಾಜಕೀಯ ಪ್ರಾತಿನಿಧ್ಯ ಕಲ್ಪಿಸದೆ ವಂಚಿಸ­ಲಾಗು­ತ್ತಿದೆ’ ಎಂದು ರಾಜ್ಯ ಆದಿ ಜಾಂಬವ ಅಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಚಿಕ್ಕಹನುಮಂತಯ್ಯ  ಸೋಮವಾರ ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತ­ನಾಡಿ, ರಾಜ್ಯದಲ್ಲಿ  75 ಲಕ್ಷ ಮಾದಿಗ ಸಮು­ದಾಯದ­ವರಿ­ದ್ದಾರೆ. ಆದರೆ, ಸಮು­ದಾಯದ ಒಬ್ಬರು ಮಾತ್ರ ಸಚಿವರಾಗಿ ದ್ದಾರೆ. ಇದರಿಂದ ಕಾಂಗ್ರೆಸ್‌ಗೆ ನಿಷ್ಠರಾದ ಸಮುದಾಯಕ್ಕೆ ಅನ್ಯಾಯ­ವಾಗುತ್ತಿದೆ. ಹಿರಿಯ ಮುಖಂಡ  ಡಾ.ಜಿ.-ಪರ­ಮೇಶ್ವರ ಅವ­ರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.