ಮುಂಬೈ (ಪಿಟಿಐ): ಸತತ ಮೂರು ದಿನಗಳಿಂದ ಏರಿಕೆ ಹಾದಿಯಲ್ಲಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಶುಕ್ರವಾರದ ವಹಿವಾಟಿನಲ್ಲಿ 298 ಅಂಶಗಳಷ್ಟು ಇಳಿಕೆ ದಾಖಲಿಸಿ, ಮೊತ್ತೊಮ್ಮೆ 17 ಸಾವಿರದ ಗಡಿ ಇಳಿದಿದೆ.

ಅಮೆರಿಕ ಮತ್ತು ಯೂರೋಪ್ ಒಕ್ಕೂಟದ ಸಾಲದ ಬಿಕ್ಕಟ್ಟಿನ ಕುರಿತ ವಿಶ್ಲೇಷಣೆಗಳು ಮಾರಾಟದ ಒತ್ತಡ ಹೆಚ್ಚುವಂತೆ ಮಾಡಿದವು. ದಿನದಂತ್ಯಕ್ಕೆ ಸೂಚ್ಯಂಕ 16,867 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ಆರ್ಥಿಕ ಹಿಂಜರಿಕೆಯ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರ 447 ದಶಲಕ್ಷ ಉದ್ಯೋಗಾವಕಾಶಗಳ ಪ್ಯಾಕೇಜ್ ಪ್ರಕಟಿಸಲು ಮುಂದಾಗಿರುವ ಸಂಗತಿ ಕೂಡ ಪೇಟೆ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿತು.

ಅಮೆರಿಕದ ಸೆಂಟ್ರಲ್ ಬ್ಯಾಂಕ್ನ ಅಧ್ಯಕ್ಷ ಬೆನ್ ಬರ್ನೆಕ್ ಕೂಡ ಗುರುವಾರ ತಮ್ಮ ಭಾಷಣದಲ್ಲಿ ಯಾವುದೇ ಆರ್ಥಿಕ ಉತ್ತೇಜನ ಕೊಡುಗೆಗಳ ಬಗ್ಗೆ ಪ್ರಸ್ತಾಪಿಸದಿರುವುದು ಕೂಡ ಹೂಡಿಕೆದಾರರ ಆತ್ಮವಿಶ್ವಾಸ ಕುಸಿಯುವಂತೆ ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.