ಮುಂಬೈ (ಪಿಟಿಐ): ಮಾರಾಟ ಒತ್ತಡದ ಫಲವಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು, ಮಂಗಳವಾರದ ವಹಿವಾಟಿನಲ್ಲಿ 261 ಅಂಶಗಳಷ್ಟು ಕುಸಿತ ದಾಖಲಿಸಿ 7 ತಿಂಗಳ ಹಿಂದಿನ ಮಟ್ಟಕ್ಕೆ ಇಳಿಯಿತು.ಪೇಟೆಯಲ್ಲಿ ಎಲ್ಲ ವಲಯದ ಷೇರುಗಳಲ್ಲಿಯೂ ಮಾರಾಟ ಒತ್ತಡ ಕಂಡು ಬಂದಿತು. ಗ್ರಾಹಕ ಬಳಕೆ ಉತ್ಪನ್ನ, ರಿಯಾಲ್ಟಿ, ಆಟೊ ಮತ್ತು ಬ್ಯಾಂಕ್ ವಲಯದ ಷೇರುಗಳು ಕುಸಿತದ ಮುಂಚೂಣಿಯಲ್ಲಿ ಇದ್ದವು. ದಿನದ ವಹಿವಾಟು ಆರಂಭವು ಸ್ಥಿರವಾಗಿಯೇ ಇತ್ತು. ಆದರೆ, ದಿನದ ಉಳಿದ ವಹಿವಾಟಿನ ಉದ್ದಕ್ಕೂ ಸೂಚ್ಯಂಕವು ಇದೇ ಸ್ಥಿರತೆ ಕಾಯ್ದುಕೊಳ್ಳದೇ ಹೋಯಿತು.

ಎಲ್ಲ ವಲಯದ ಷೇರುಗಳಲ್ಲಿ ಕಂಡು ಬಂದ ಮಾರಾಟ ಒತ್ತಡದ ಫಲವಾಗಿ ನಿರಂತರವಾಗಿ ಕುಸಿಯುತ್ತಲೇ ಹೋಯಿತು. ಅಂತಿಮವಾಗಿ ಸಂವೇದಿ ಸೂಚ್ಯಂಕವು 18 ಸಾವಿರ ಅಂಶಗಳಿಗಿಂತ (17,651.73) ಕೆಳ ಮಟ್ಟಕ್ಕೆ ದಿನದ ವಹಿವಾಟು ಕೊನೆಗೊಳಿಸಿತು. ಹಣದುಬ್ಬರ ಮತ್ತಿತರ ಕಾರಣಗಳಿಗೆ ಮುಂದಿನ ತ್ರೈಮಾಸಿಕದಲ್ಲಿ ಉದ್ದಿಮೆಗಳ ಹಣಕಾಸು ಸಾಧನೆ ಕುಸಿಯಲಿದೆ ಎನ್ನುವ ಆತಂಕ ಹೂಡಿಕೆದಾರರಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.