ಶುಕ್ರವಾರ, ಜನವರಿ 24, 2020
21 °C

ಸೂಚ್ಯಂಕ ಹೊಸ ದಾಖಲೆ; ರೂಪಾಯಿ ಚೇತರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ದೇಶದ ಹಣಕಾಸು ಮಾರುಕಟ್ಟೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಷೇರುಪೇಟೆಯಲ್ಲಿ ಸೂಚ್ಯಂಕಗಳು ಭಾರಿ ಏರಿಕೆ ದಾಖಲಿಸಿದರೆ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿಯೂ ತನ್ನ ಮೌಲ್ಯವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ.ಸೋಮವಾರದ ವಹಿವಾಟಿನಲ್ಲಿ ಮುಂಬೈ ಷೇರು­ ವಿನಿಮಯ ಕೇಂದ್ರದ (ಬಿಎಸ್‌ಇ) ಸಂವೇದಿ ಸೂಚ್ಯಂಕ ಮತ್ತು ರಾಷ್ಟ್ರೀ­ಯ ಷೇರು ವಿನಿಮಯ ಕೇಂದ್ರದ (ನಿಫ್ಟಿ) ಸೂಚ್ಯಂಕ ಸೋಮವಾರ ದಾಖಲೆ ಏರಿಕೆ ಕಂಡಿವೆ.ದಿನದ ವಹಿವಾಟಿನಲ್ಲಿ ‘ಬಿಎಸ್‌ಇ’ 329 ಅಂಶಗಳಷ್ಟು ಏರಿಕೆ ತೋರಿ ಹೊಸ ದಾಖಲೆಯ ಮಟ್ಟವಾದ 21,326 ಅಂಶಗಳನ್ನು ತಲುಪಿದೆ. ವಹಿವಾಟಿನ ಒಂದು ಹಂತದಲ್ಲಿ ಸೂಚ್ಯಂಕ ಸಾರ್ವ­ಕಾಲಿಕ ದಾಖಲೆ ಮಟ್ಟವಾದ 21,483 ಅಂಶಗಳವರೆಗೂ ಏರಿಕೆ ಕಂಡಿತ್ತು. ಇದರಿಂದ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ ರೂ.75 ಸಾವಿರ ಕೋಟಿಯಷ್ಟು ಹೆಚ್ಚಿದ್ದು, ಷೇರು­ಪೇಟೆಯ ಒಟ್ಟು ಬಂಡವಾಳ ಮೌಲ್ಯ ರೂ.68.09 ಲಕ್ಷ ಕೋಟಿಗೆ ಏರಿಕೆ ಕಂಡಿದೆ.‘ನಿಫ್ಟಿ’ ಕೂಡ 104 ಅಂಶಗಳಷ್ಟು ಜಿಗಿತ ಕಂಡು ದಿನದಂತ್ಯಕ್ಕೆ 6,363 ಅಂಶಗಳಲ್ಲಿ ವಹಿವಾಟು ಕೊನೆ­ಗೊಳಿ­ಸಿತು. ನವೆಂ­ಬರ್‌ 3ರ ನಂತರ ದಾಖಲಾ­ಗಿರುವ ಗರಿಷ್ಠ ಮಟ್ಟ ಇದಾಗಿದೆ.ರೂ.ಮೌಲ್ಯವರ್ಧನೆ

ಷೇರುಪೇಟೆ ಚೇತರಿಕೆಯಿಂದ ಡಾಲರ್‌ ವಿರುದ್ಧ ರೂಪಾಯಿ ವಿನಿ­ಮಯ ಮೌಲ್ಯ ಸೋಮವಾರ 28 ಪೈಸೆಗಳಷ್ಟು ಏರಿಕೆ ಪಡೆದು ಕಳೆದ ಎರಡು ತಿಂಗಳಲ್ಲೇ ಗರಿಷ್ಠ ಮಟ್ಟವಾದ ರೂ.61.13 ತಲುಪಿತು. ವಹಿವಾಟಿನ ಒಂದು ಹಂತದಲ್ಲಿ ನಾಲ್ಕು ತಿಂಗಳಲ್ಲೇ ಗರಿಷ್ಠ ಮಟ್ಟವಾದ ರೂ.60.90ರವರೆಗೂ ಚೇತರಿಕೆ ಕಂಡಿತ್ತು.

ಪ್ರತಿಕ್ರಿಯಿಸಿ (+)