ನೀರೆಂದರೆ ಇಲ್ಲಿನ ಜನ ಭಯಭೀತರಾಗುತ್ತಾರೆ... `ಸೂಳೆಕೆರೆ ತುಂಬುವುದು ಬೇಡಪ್ಪಾ~ ಎಂದು ಪ್ರಾರ್ಥಿಸುತ್ತಾರೆ... ಹನಿಹನಿ ನೀರಿಗಾಗಿ ಹೋರಾಟ ಮಾಡುತ್ತಿರುವ ಇಂಥ ದಿನಗಳಲ್ಲಿ ನೀರೆಂದರೆ ಭಯಗ್ರಸ್ಥರಾಗುವ ಜನರಿದ್ದಾರಾ ಎಂದು ಅಚ್ಚರಿಪಡಬೇಕಿಲ್ಲ...

ಏಕೆಂದರೆ `ಕಗತೂರು~ ಸದಾ ಸೂಳೆಕೆರೆಯ ಹಿನ್ನೀರಿನಲ್ಲಿಯೇ ಬದುಕು ಸಾಗಿಸುತ್ತಾ ಬಂದಿದೆ. ಹೊನ್ನು ಬೆಳೆಯುತ್ತಿದ್ದ ಹೊಲಗಳು ಕೆರೆಯಂತಾಗಿವೆ.

ಚನ್ನಗಿರಿಯಿಂದ ಶಿವಮೊಗ್ಗಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಸ್ವಲ್ಪ ದೂರ ಹೋಗಿ ಬಲಕ್ಕೆ ತಿರುಗಿ 11 ಕಿ.ಮೀ. ದೂರ ಸಾಗಿದರೆ `ಕಗತೂರು~ ಗ್ರಾಮ ಸಿಗುತ್ತದೆ. `ಕಗತೂರು~ ಗ್ರಾಮ ಎಂಬ ಹೆಸರು ಹೇಗೆ ಬಂದಿತು ಎಂಬುದರ ಬಗ್ಗೆ ಹಿರಿಯರಲ್ಲಿ ಸ್ಪಷ್ಟ ಮಾಹಿತಿಯಿಲ್ಲ. ಆರು ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಲಿಂಗಾಯತರು ಬಹುಸಂಖ್ಯಾತರಾಗಿದ್ದು, ಉಳಿದಂತೆ ಪರಿಶಿಷ್ಟ ಜಾತಿ, ಉಪ್ಪಾರ, ನಾಯಕ ಮುಂತಾದ ಜನಾಂಗದವರು ವಾಸ ಮಾಡುತ್ತಿದ್ದಾರೆ. ಪ್ರಮುಖ ವಾಣಿಜ್ಯ ಬೆಳೆಯಾಗಿ ಅಡಿಕೆ, ಮೆಕ್ಕೆಜೋಳ, ರಾಗಿ, ಹತ್ತಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುತ್ತಾರೆ.

ಶೌಚಾಲಯ ಶೇ 50ರಷ್ಟು ಸಾಧನೆ
ಇಲ್ಲಿನ ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು 10 ಸದಸ್ಯರಿದ್ದಾರೆ. ನಾಲ್ಕು ಗ್ರಾಮಗಳು ಈ ಗ್ರಾ.ಪಂ.ಗೆ ಸೇರುತ್ತವೆ. ಹಿರೇಉಡ, ಗೊಲ್ಲರಹಟ್ಟಿ, ಹಿರೇಉಡ ತಾಂಡಾ ಈ ಗ್ರಾ.ಪಂ.ಗೆ ಸೇರುವ ಗ್ರಾಮಗಳಾಗಿವೆ. ಗ್ರಾಮದ 585 ಮಂದಿ ಜಾಬ್ಕಾರ್ಡ್ ಹೊಂದಿದ್ದು, ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ ರೂ 45 ಲಕ್ಷದ ನಾಲ್ಕು ಕಾಮಗಾರಿ ಕೈಗೊಳ್ಳಲಾಗಿದೆ. ಗ್ರಾಮದಲ್ಲಿ ಇಂದಿರಾ ಅವಾಸ್ ಯೋಜನೆಯಡಿ 36 ಹಾಗೂ ಬಸವ ಇಂದಿರಾ ಯೋಜನೆಯಡಿ 42 ಮನೆಗಳನ್ನು ಮಂಜೂರು ಮಾಡಲಾಗಿದೆ. ಒಟ್ಟು 1,250 ಕುಟುಂಬಗಳು ಈ ಗ್ರಾಮದಲ್ಲಿದ್ದು, ಶೇ. 50ರಷ್ಟು ಸಾಧನೆಯೊಂದಿಗೆ 600 ಶೌಚಾಲಯಗಳ ನಿರ್ಮಾಣ ಕಾರ್ಯ ಮಾಡಲಾಗಿದೆ. ರಸ್ತೆ, ಚರಂಡಿ ಮುಂತಾದ ಕಾಮಗಾರಿಗಳನ್ನು ಮಾಡಲಾಗಿದೆ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ತಿಪ್ಪೇಸ್ವಾಮಿ.

ಶಾಸಕರ ಅನುದಾನದಲ್ಲಿ ಚನ್ನಗಿರಿ-ಕಗತೂರು ರಸ್ತೆ ನಿಮಾರ್ಣಕ್ಕೆ ರೂ 1.80 ಕೋಟಿ, ಕಾಂಕ್ರೀಟ್ ರಸ್ತೆಗೆ ರೂ 45 ಲಕ್ಷ, ಜಿ.ಪಂ. ಅನುದಾನದಲ್ಲಿ ರೂ 9 ಲಕ್ಷ ಹಾಗೂ ತಾ.ಪಂ ಅನುದಾನಲ್ಲಿ ರೂ 1 ಲಕ್ಷ ಅನುದಾನ ಬಿಡುಗಡೆಯಾಗಿದೆ. ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ ರೂ 45 ಲಕ್ಷ ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನು ಮಾಡಲಾಗಿದೆ.

ಗ್ರಾಮದಲ್ಲಿ ಸುಸಜ್ಜಿತ ಕಾಂಕ್ರೀಟ್ ರಸ್ತೆ, ಚರಂಡಿ ಸೇರಿದಂತೆ ಹಲವಾರು ಮೂಲ ಸೌಲಭ್ಯ ್ನ ಒದಗಿಸಿದರೂ ಪ್ರಮುಖ ಸಂಪರ್ಕ ರಸ್ತೆಗಳ ಅಭಿವೃದ್ಧಿ ಕಾರ್ಯ ಅತ್ಯಂತ ಜರೂರಾಗಿ ಆಗಬೇಕಾಗಿದೆ. ಸಾಮಾನ್ಯ ವರ್ಗಕ್ಕೆ ಮೀಸಲಾದ ಈ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ `ನೀಲಮ್ಮ~ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸುಸಜ್ಜಿತ ಗ್ರಾಮಸೌಧ, ಪಶು ಚಿಕಿತ್ಸಾಲಯ ಇವೆ.

ಕೆರೆ ನುಂಗಿದ ಹಿಡುವಳಿ ಭೂಮಿ
`ನಮ್ಮ 18 ಎಕರೆ ಜಮೀನು ಸಂಪೂರ್ಣವಾಗಿ ನೀರಿನಲ್ಲಿದೆ. ಕಳೆದ ವರ್ಷ ಹೆಚ್ಚು ಮಳೆಯಾಗದೇ ಇರುವುದರಿಂದ ಒಂದಿಷ್ಟು ಬೆಳೆಯನ್ನು ಬೆಳೆದುಕೊಂಡಿದ್ದೇವೆ. ಈ ಕೆರೆಯ ವಿಸ್ತೀರ್ಣ ಹಿಂದೆ 4,535 ಎಕರೆ ಇತ್ತು. ಆದರೆ, ಕಳೆದ ಹಲವು ವರ್ಷಗಳಿಂದ 6,380 ಎಕರೆಗೆ ಹೆಚ್ಚಿದೆ.

ಹಾಗೆಯೇ, ಕೆರೆಯಲ್ಲಿ 15 ಅಡಿಗಳಷ್ಟು ಹೂಳು ತುಂಬಿರುವುದರಿಂದ ಮಳೆಗಾಲದಲ್ಲಿ ಅತಿ ಬೇಗ ಕೆರೆಯಲ್ಲಿ ನೀರು ತುಂಬಿ ಭಾರಿ ಅನಾಹುತ ಉಂಟಾಗುವಂತಾಗಿದೆ. ಜಿ.ಪಂ. ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ನೀರಾವರಿ ಇಲಾಖೆಯವರ ಮೇಲೆ ಒತ್ತಡ ತಂದು ಸರ್ವೆ ಮಾಡಿಸಿದಾಗ ಗ್ರಾಮದ 108 ಎಕರೆ 39 ಗುಂಟೆ ಜಮೀನು ಹಿನ್ನೀರಿನಲ್ಲಿ ಹೋಗುತ್ತದೆ ಎಂದು ವರದಿ ನೀಡಿದ್ದಾರೆ. ಆದರೆ, ಸಮರ್ಪಕವಾಗಿ ನೀರಾವರಿ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಸರ್ವೆ ಕಾರ್ಯ ನಡೆಸಿ ಶಾಶ್ವತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕಾಗಿದೆ.

ಈ ನಿಟ್ಟಿನಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಗ್ರಾಮದ ರೈತರ ಪರವಾಗಿ ಹೋರಾಟ ಮಾಡಿ ರೈತರಿಗೆ ಶಾಶ್ವತ ಪರಿಹಾರ ಕೊಡಿಸಿದರೆ ಈ ಗ್ರಾಮದ ಜನರು ಅವರಿಗೆ ಋಣಿಯಾಗಿರುತ್ತಾರೆ ಎಂದು ಹೇಳುತ್ತಾರೆ ಜಿ.ಪಂ. ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ.ಜಿ. ಬಸವಲಿಂಗಪ್ಪ.

ಮುಂದಿನ ದಿನಗಳಲ್ಲಿ `ಕಗತೂರು~ ಮಾದರಿ ಗ್ರಾಮ ಪಂಚಾಯ್ತಿಯಾಗಿ ಹೊರಹೊಮ್ಮುವ ದಿಸೆಯಲ್ಲಿ ಹೆಜ್ಜೆಹಾಕುತ್ತಿದೆ. ಯಾವುದೇ ಪಕ್ಷ ಅಧಿಕಾರದಲ್ಲಿ ಇದ್ದರೂ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಗ್ರಾಮದವರು ಮುಂದಿದ್ದಾರೆ. ಈ ಗ್ರಾಮದಿಂದ ಪ್ರತಿದಿನ ಕನಿಷ್ಠ ಎಂದರೂ 50ರಿಂದ 60 ವಿದ್ಯಾರ್ಥಿಗಳು ಪದವಿಪೂರ್ವ ಕಾಲೇಜಿಗೆ ಚನ್ನಗಿರಿ ಪಟ್ಟಣಕ್ಕೆ ಹೋಗುತ್ತಾರೆ. ಸರಿಯಾದ ಬಸ್ ಸೌಲಭ್ಯ ಇಲ್ಲದೇ ಇರುವುದರಿಂದ ಇಲ್ಲೊಂದು ಪಿಯು ಕಾಲೇಜು ಆಗಬೇಕು ಎನ್ನುತ್ತಾರೆ ಗ್ರಾಮದ ಮಲ್ಲಿಕಾರ್ಜುನ್.

ಸಮಯಕ್ಕೆ ಸರಿಯಾಗಿ ಚರಂಡಿಗಳನ್ನು ಸ್ವಚ್ಛಗೊಳಿಸದೇ ಇರುವುದರಿಂದ ಸೊಳ್ಳೆಗಳು ಹೆಚ್ಚಾಗಿವೆ. ಗ್ರಾ.ಪಂ. ಗ್ರಾಮ ನೈರ್ಮಲ್ಯದ ಕಡೆ ಹೆಚ್ಚು ಗಮನಹರಿಸಬೇಕು. ಗ್ರಾಮಕ್ಕೆ ಒಂದೆರಡು ಖಾಸಗಿ ಬಸ್ಗಳು ಮಾತ್ರ ಸಂಚರಿಸುತ್ತವೆ. ಉಳಿದ ಸಮಯದಲ್ಲಿ ಆಟೋಗಳಲ್ಲಿ ಹೆಚ್ಚು ಹಣವನ್ನು ತೆತ್ತು ಸಂಚರಿಸಬೇಕಾಗಿದೆ. ಪ್ರಮುಖವಾಗಿ ಸಾರಿಗೆ ಸೌಲಭ್ಯ ಒದಗಿಸಬೇಕು ಎನ್ನುತ್ತಾರೆ ದೇವೇಂದ್ರಪ್ಪ.

ಈ ಗ್ರಾಮದಲ್ಲಿನ ಪಶುವೈದ್ಯ ಆಸ್ಪತ್ರೆ ಕಟ್ಟಡ ತುಂಬಾ ಹಳೆಯದಾಗಿದ್ದು, ಹೊಸ ಕಟ್ಟಡದ ಆವಶ್ಯಕತೆ ಇದೆ. ಇನ್ನು ಒಂದಿಷ್ಟು ಕೇರಿಗಳಲ್ಲಿ ಕಾಂಕ್ರೀಟ್ ರಸ್ತೆ ಆಗಬೇಕಿದೆ. ಹಾಗೆಯೇ, ಒಂದಿಷ್ಟು ಸಂಪರ್ಕ ರಸ್ತೆಗಳು ಡಾಂಬರೀಕರಣದ ಭಾಗ್ಯ ಕಾಣಬೇಕಿದೆ ಎನ್ನುತ್ತಾರೆ ನಿವೃತ್ತ ಶಿಕ್ಷಕ ಸಿದ್ದರಾಮಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.