ಶನಿವಾರ, ಜನವರಿ 18, 2020
21 °C

ಸೆಮಿಸ್ಟರ್‌ ಪದ್ಧತಿ ರದ್ದತಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಐಟಿಐಯನ್ನು ಪದವಿಪೂರ್ವ ಕೋರ್ಸ್‌ಗೆ ಸಮಾನದ ಅರ್ಹತೆ ಎಂಬು­ದಾಗಿ ಪರಿಗಣಿಸಬೇಕು, ಸೆಮಿಸ್ಟರ್‌ ಪದ್ಧತಿಯನ್ನು ರದ್ದುಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ­ಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದಲ್ಲಿ ಬುಧವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ಗದಗ ರಸ್ತೆಯ ಖಾಸಗಿ ಐಟಿಐ ಕಾಲೇಜಿನಿಂದ ಅಶೋಕ ವೃತ್ತದ ವರೆಗೆ ಮೆರವಣಿಗೆ ನಡೆಸಿದರು.

ಸೆಮಿಸ್ಟರ್‌ ಪದ್ಧತಿಯಲ್ಲಿ ಪಠ್ಯಕ್ರಮ­ವನ್ನು ಪೂರ್ಣಗೊಳಿಸಲು ಸಾಧ್ಯವಾಗು­ವುದಿಲ್ಲ. ಅಲ್ಲದೇ, ಈ ಪದ್ಧತಿ ವಿದ್ಯಾರ್ಥಿ­ಗಳ ಮೇಲೆ ಆರ್ಥಿಕ ಹೊರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸೆಮಿಸ್ಟರ್‌ ಪದ್ಧತಿ­ಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿ­ದರು.ಪಿಯುಸಿ ಮತ್ತು ಐಟಿಐಗೆ ಪ್ರವೇಶ ಪಡೆಯಲು ಎಸ್‌ಎಸ್‌ಎಲ್‌ಸಿ ಉತ್ತೀರ್ಣ­ರಾಗಿರಬೇಕು. ಎರಡೂ ಕೋರ್ಸ್‌ಗಳ ಅವಧಿ ಎರಡು ವರ್ಷ­ಗಳೇ ಆಗಿದೆ. ಈ ಹಿನ್ನೆಲೆಯಲ್ಲಿ ಐಟಿಐ­ಯನ್ನು ಪಿಯುಸಿಗೆ ಸಮಾನವಾದ ಅರ್ಹತೆ ಎಂದು ಪರಿಗಣಿಸಿದರೆ, ಐಟಿಐ ಉತ್ತೀರ್ಣರಾದವರು ಉನ್ನತ ವ್ಯಾಸಂಗ ಕೈಗೊಳ್ಳಬಹುದಾಗಿದೆ ಎಂದೂ ಮನವಿ ಮಾಡಿದರು.ಬಸ್‌ ಪಾಸ್‌ ನೀಡಲು ಇರುವ ವಯೋಮಿತಿ­ಯನ್ನು 42 ವರ್ಷಕ್ಕೆ ಹೆಚ್ಚಿಸಬೇಕು, ಲೈನ್‌ಮೆನ್‌ ಹುದ್ದೆಗಳಿಗೆ ಐಟಿಐ ಉತ್ತೀರ್ಣರಾದವರನ್ನು ಮಾತ್ರ ಪರಿಗಣಿಸಬೇಕು ಎಂದು ಆಗ್ರಹಿಸ­ಬೇಕು ಎಂದು ಒತ್ತಾಯಿಸಿದರು.ಸಂಘಟನೆಯ ನಗರ ಕಾರ್ಯದರ್ಶಿ ಸಂಕೇತ ಪಾಟೀಲ, ರಾಕೇಶ ಪಾನಘಂಟಿ, ಅಮಿತ್ ಕಂಪ್ಲೀಕರ್ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)