ಶುಕ್ರವಾರ, ಮಾರ್ಚ್ 5, 2021
18 °C

ಸೇನಾ ತುಕಡಿಗಳ ತಾಲೀಮು: ಜನರಲ್ ಸಿಂಗ್ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇನಾ ತುಕಡಿಗಳ ತಾಲೀಮು: ಜನರಲ್ ಸಿಂಗ್ ಸ್ಪಷ್ಟನೆ

ನವದೆಹಲಿ (ಪಿಟಿಐ): ಜನವರಿ ಮಧ್ಯ ಭಾಗದಲ್ಲಿ ಸೇನೆಯ ಎರಡು ಪ್ರಮುಖ ವಿಭಾಗಗಳು ದೆಹಲಿಯತ್ತ ಸಾಗಿದ್ದರಲ್ಲಿ ವಿಶೇಷವೇನೂ ಇಲ್ಲ ಮತ್ತು ಇಂತಹ ತಾಲೀಮಿನ ಬಗ್ಗೆ ಸರ್ಕಾರಕ್ಕೆ ಮುಂಚಿತವಾಗಿ ತಿಳಿಸುವ ಅಗತ್ಯವೂ ಇಲ್ಲ ಎಂದು ಭೂಸೇನಾ ಮುಖ್ಯಸ್ಥ ಜನರಲ್ ವಿ. ಕೆ. ಸಿಂಗ್ ಸ್ಪಷ್ಟಪಡಿಸಿದ್ದಾರೆ.ಸೇನೆಯ ವಿಭಾಗಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗುವುದು ಮಾಮೂಲು. ಅದನ್ನೇಕೆ ಸರ್ಕಾರಕ್ಕೆ ತಿಳಿಸಬೇಕು ಎಂದು ಮರುಪ್ರಶ್ನೆ ಹಾಕಿದ್ದಾರೆ.ಸಿಂಗ್ ಅವರ ಹುಟ್ಟಿದ ದಿನಾಂಕದ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ ರಾತ್ರಿ, ಅಂದರೆ ಜನವರಿ 16 ಮತ್ತು 17ರಂದು ಸೇನೆಯ ಎರಡು ವಿಭಾಗಗಳು ದೆಹಲಿಯತ್ತ ಸಾಗಿರುವ ವಿಚಾರವನ್ನು ಪತ್ರಿಕೆಯೊಂದು ವರದಿ ಮಾಡಿದ್ದು, ಭಾರಿ ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ. ವರದಿ ಪ್ರಕಟವಾಗುತ್ತಿದ್ದಂತೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಕ್ಷಣಾ ಸಚಿವ ಎ. ಕೆ. ಅಂಟನಿ ಅವರು ಸೇನಾ ಕ್ಷಿಪ್ರ ಕ್ರಾಂತಿಯ ವರದಿಯನ್ನು `ಆಧಾರರಹಿತ~ ಎಂದು ತಳ್ಳಿಹಾಕಿದ್ದರು.ಸೇನೆಯ ಒಂದೆರಡು ತುಕಡಿಗಳು ಸಾಗಿದ್ದನ್ನು ಇಡೀ ಸೇನೆಯೇ ರಾಜಧಾನಿಯತ್ತ ಸಾಗಿತ್ತು ಎಂಬಂತೆ ಬಿಂಬಿಸಲಾಗಿದೆ. ಜನ್ಮದಿನ ವಿವಾದದ ಬಗ್ಗೆ ನಾನೇ ನ್ಯಾಯಾಲಯದ ಮೊರೆ ಹೋಗಿದ್ದೆ. ಹೀಗಾಗಿ ಸರ್ಕಾರವನ್ನು ಬೆದರಿಸುವ ಪ್ರಶ್ನೆ ಇನ್ನೆಲ್ಲಿಂದ ಬರುತ್ತದೆ ಎಂದರು.ಈ ಬಗ್ಗೆ ಸರ್ಕಾರ ವಿವರಣೆ ಬಯಸಿತ್ತೇ ಎಂದು ಕೇಳಿದಾಗ, `ಅದೊಂದು ಮಾಮೂಲು ಕ್ರಮವಾಗಿರುವುದರಿಂದ ವಿವರಣೆ ಕೇಳಲಿಲ್ಲ~ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.