ಬುಧವಾರ, ಜನವರಿ 29, 2020
25 °C

ಸೇನಾ ಮುಖ್ಯಸ್ಥರ ಕ್ರಮ ದುರಾದೃಷ್ಟಕರ - ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ); ನಿವೃತ್ತಿ ವಯಸ್ಸಿಗೆ ಸಂಬಂಧಿಸಿದಂತೆ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿರುವ ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರ ಕ್ರಮ ದುರದೃಷ್ಟಕರ ಎಂದು ಸರ್ಕಾರ ಬುಧವಾರ ತಿಳಿಸಿದೆ.ಇದೊಂದು ಅನಾರೋಗ್ಯಕಾರಿಯಾದ ಬೆಳವಣಿಗೆ. ಸಿಂಗ್ ಅವರ ಕ್ರಮ ತೀರಾ ದುರಾದುಷ್ಟಕರ ಎಂದು ರಕ್ಷಣಾ ಖಾತೆಯ ರಾಜ್ಯ ಸಚಿವ ಎಂ.ಎಂ. ಪಲ್ಲಮ್ ರಾಜು ತಿಳಿಸಿದ್ದಾರೆ.ತಮ್ಮ ಜನ್ಮದಿನಾಂಕ 1950ಕ್ಕೆ ಬದಲಾಗಿ 1951 ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದರೂ ತಮ್ಮ ಮನವಿಯನ್ನು ಸರ್ಕಾರ ಮಾನ್ಯ ಮಾಡಿಲ್ಲ ಎಂದು ದೂರಿ ಸೇನಾ ಮುಖ್ಯಸ್ಥ ವಿ.ಕೆ. ಸಿಂಗ್ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಸರ್ಕಾರವೂ ಕೂಡ ಏಕಪಕ್ಷೀಯ ತೀರ್ಪು ನೀಡದಂತೆ ಸುಪ್ರೀಂಕೋರ್ಟ್‌ಗೆ ಕೇವಿಯಟ್ ಸಲ್ಲಿಸಿದೆ.

ಪ್ರತಿಕ್ರಿಯಿಸಿ (+)