ಶುಕ್ರವಾರ, ಮೇ 27, 2022
28 °C

ಸೇನಾ ಹೆಲಿಕಾಪ್ಟರ್ ಪತನ: ಇಬ್ಬರು ಪೈಲಟ್ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇನಾ ಹೆಲಿಕಾಪ್ಟರ್ ಪತನ: ಇಬ್ಬರು ಪೈಲಟ್ ಸಾವು

ನಾಸಿಕ್ (ಮಹಾರಾಷ್ಟ್ರ), (ಪಿಟಿಐ, ಐಎಎನ್‌ಎಸ್): ಸೇನೆಯ ‘ಚೀತಾ’ ಹೆಲಿಕಾಪ್ಟರ್ ಬುಧವಾರ ಬೆಳಿಗ್ಗೆ ಪತನಗೊಂಡ ಪರಿಣಾಮ ಇಬ್ಬರು ಸೇನಾಧಿಕಾರಿಗಳು ಮೃತಪಟ್ಟಿದ್ದಾರೆ. ತಾಂತ್ರಿಕ ದೋಷ ಕಾಣಿಸಿಕೊಂಡು ನಿಯಂತ್ರಣ ಕಳೆದುಕೊಂಡ ಹೆಲಿಕಾಪ್ಟರ್ ಇಲ್ಲಿನ ಜನವಸತಿ ಪ್ರದೇಶ ಜೈಭವಾನಿ ನೆಲಕ್ಕೆ ಅಪ್ಪಳಿಸಿತು.



ಮೇಜರ್ ಅತುಲ್ ಗರ್ಜೆ ಮತ್ತು  ಕ್ಯಾಪ್ಟನ್ ಭಾನುಪ್ರತಾಪ್ ಮೃತ ದುರ್ದೈವಿಗಳು. ಬೆಳಿಗ್ಗೆ ಗಗನಕ್ಕೇರಿದ 15 ನಿಮಿಷದಲ್ಲೇ 8.55ರ ವೇಳೆಗೆ ಧರೆಗೆ ಉರುಳಿತು. ಅದರಲ್ಲಿದ್ದ ಸೇನಾಧಿಕಾರಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜನವಸತಿ ಪ್ರದೇಶದಲ್ಲಿ ಹೆಲಿಕಾಪ್ಟರ್ ಬಿದ್ದರೂ ಸಾರ್ವಜನಿಕರ ಜೀವ ಅಥವಾ ಆಸ್ತಿಗೆ ಯಾವುದೇ ಹಾನಿಯಾಗಿಲ್ಲ ಎಂದು ನವದೆಹಲಿ ಸೇನಾ ಮುಖ್ಯ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಲಿಕಾಪ್ಟರ್ ಬಿದ್ದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಮನೆಯ ಮಾಲೀಕ ಭಗವಾನ್ ತ್ರಿಂಬಕ್ ಪಾಟೀಲ್ ಮತ್ತು ಶಿಕ್ಷಕಿಯಾದ ಅವರ ಪತ್ನಿ ಇಬ್ಬರೂ ಕೆಲಸಕ್ಕೆ ಹೋಗಿದ್ದರು.



ಅಪಘಾತಕ್ಕೆ ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ. ಹೆಲಿಕಾಪ್ಟರ್ ಬ್ಲೇಡ್‌ನಲ್ಲಿ ಹಠಾತ್ತಾಗಿ ಕಂಡುಬಂದ ತಾಂತ್ರಿಕ ದೋಷದಿಂದಾಗಿ ಘಟನೆ ಸಂಭವಿಸಿದೆ ಎಂಬ ಮಾಹಿತಿ ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದು ಬಂದಿದೆ. ಕಳೆದ ಮೂರು ವರ್ಷಗಳಲ್ಲಿ ಮಿಗ್-21 ಮತ್ತು ಹೆಲಿಕಾಪ್ಟರ್‌ಗಳು ಸೇರಿದಂತೆ 60 ವಿಮಾನಗಳು ಅಪಘಾತಕ್ಕೊಳಗಾಗಿದ್ದು, 43 ಜನ ಸೇನಾ ಸಿಬ್ಬಂದಿ ಮತ್ತು ಐವರು ನಾಗರಿಕರು ಪ್ರಾಣ  ಕಳೆದುಕೊಂಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.