ಸೇವಾ ಕಾರ್ಯ ತಂದ ಕುತ್ತು: ಪಾಕ್ ಅಧಿಕಾರಿ ಸೇವೆಯಿಂದಲೇ ವಜಾ

ಬುಧವಾರ, ಮೇ 22, 2019
29 °C

ಸೇವಾ ಕಾರ್ಯ ತಂದ ಕುತ್ತು: ಪಾಕ್ ಅಧಿಕಾರಿ ಸೇವೆಯಿಂದಲೇ ವಜಾ

Published:
Updated:

ಇಸ್ಲಾಮಾಬಾದ್ (ಪಿಟಿಐ): ಹಿಂದೂ ಮತ್ತು ಸಿಖ್ಖರ ಪೂಜಾ ಮಂದಿರಗಳಲ್ಲಿ ಪಾತ್ರೆ ತೊಳೆಯುವ, ನೆಲ ಒರೆಸುವ, ಶೂ ಪಾಲಿಶ್ ಮಾಡುವಂತಹ `ಸೇವಾ~ ಕೈಂಕರ್ಯ ಮಾಡಿದ್ದು ಪಾಕಿಸ್ತಾನದ ಉಪ ಅಟಾರ್ನಿ ಜನರಲ್ ಒಬ್ಬರ `ಸೇವೆ~ಗೆ ಕುತ್ತು ತಂದಿದೆ.ಪೆಶಾವರ ಮೂಲದ ಉಪ ಅಟಾರ್ನಿ ಜನರಲ್ ಖುರ್ಷಿದ್ ಖಾನ್ ಸದ್ಯ ನೇಪಾಳ ಮತ್ತು ಭೂತಾನ್‌ಗಳಿಗೆ ಖಾಸಗಿ ಭೇಟಿಗೆ ತೆರಳಿದ್ದು, ಅಲ್ಲಿನ ಮಂದಿರಗಳಲ್ಲಿ ಇಂತಹ  `ಸೇವೆ~ಗಳನ್ನು ಮಾಡಿದ್ದಾರೆ. ಇದರಿಂದ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ `ಸೇವೆ~ಯಿಂದಲೇ ವಜಾಗೊಂಡಿದ್ದಾರೆ.ಅವರ ಜಾಗಕ್ಕೆ ಮತ್ತೊಬ್ಬರನ್ನು ನೇಮಿಸಲಾಗಿದೆ ಎಂದು ದೃಢೀಕರಿಸಿರುವ ಅಟಾರ್ನಿ ಜನರಲ್ ಇರ್ಫಾನ್ ಖಾದಿರ್, ಖಾನ್ ವಜಾಕ್ಕೆ ಏನು ಕಾರಣ ಎಂದು ತಿಳಿಸಿಲ್ಲ.ಸದ್ಯ ಕಠ್ಮಂಡುವಿನಲ್ಲಿರುವ ಖಾನ್, ಸೇವೆಯಿಂದ ವಜಾಗೊಂಡಿರುವ ವಿಷಯ ತಿಳಿದು ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಪಾಕ್‌ಗೆ ಹಿಂದಿರುಗಲು ನಿರ್ಧರಿಸಿರುವುದಾಗಿ `ಎಕ್ಸ್‌ಪ್ರೆಸ್ ಟ್ರಿಬ್ಯೂನ್~ ಪತ್ರಿಕೆಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.`ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಆಗಿರುವ ನೋವನ್ನು ಇಂತಹ ಸೇವಾ ಕಾರ್ಯಗಳ ಮೂಲಕ ಹೋಗಲಾಡಿಸುವ ಪ್ರಯತ್ನ ಮಾಡುತ್ತಿದ್ದೇನೆ~ ಎಂದು ಖಾನ್ ಈ ಹಿಂದೆ ಹೇಳಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry