ಗುರುವಾರ , ಮೇ 6, 2021
27 °C

ಸೊರಬ: ದಸರಾ ಕ್ರೀಡಾಕೂಟಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ದಸರಾ, ಮಹಿಳಾ ಕ್ರೀಡಾಕೂಟ ಹಾಗೂ ಪಂಚಾಯತ್ ಯುವ ಕ್ರೀಡಾ ಖೇಲ್ ಅಭಿಯಾನ ಕ್ರೀಡಾಕೂಟಕ್ಕೆ ಜಿ.ಪಂ. ಉಪಾಧ್ಯಕ್ಷ ಎಚ್.ಬಿ. ಗಂಗಾಧರಪ್ಪ ಸೋಮವಾರ ಚಾಲನೆ ನೀಡಿದರು.ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಮೀನಾಕ್ಷಮ್ಮ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷೆ ಆರ್.ಕೆ. ಹೇಮಾವತಿ, ತಾಲ್ಲೂಕು ಪಂಚಾಯ್ತಿ ಇಒ ಪುಷ್ಪಾ ಕಮ್ಮಾರ್, ಕ್ರೀಡಾಧಿಕಾರಿ ಎಸ್.ಎಸ್. ಬಣಕಾರ್, ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಎಸ್.ಆರ್. ಕುಮಾರಸ್ವಾಮಿ, ಸ್ಪಂದನ ರೂರಲ್ ಡೆವಲೆಪ್‌ಮೆಂಟ್ ಸಂಸ್ಥೆಯ ಕೆ.ಪಿ. ಜಯಪ್ಪ, ಕರವೇ ಅಧ್ಯಕ್ಷ ಸಿ.ಕೆ. ಬಲೀಂದ್ರಪ್ಪ ಉಪಸ್ಥಿತರಿದ್ದರು.

ಗ್ರಾಮೀಣ ಯುವಕ ಯುವತಿಯರು ಕೊಕ್ಕೊ, ಕಬಡ್ಡಿ, ವಾಲಿಬಾಲ್, ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.ದೈಹಿಕ ಶಿಕ್ಷಕರಾದ ಬಸವಣ್ಯಪ್ಪ, ಮೃತ್ಯುಂಜಯ ಗೌಡ, ವಿಜಯಕುಮಾರ್, ಈಶ್ವರಪ್ಪ, ಧರ್ಮಪ್ಪ, ತುಳಜಾ ವಿ. ನಾಯಕ್, ಯಂಕ್ಯಾನಾಯ್ಕ, ಪರಮೇಶ್ವರಪ್ಪ, ಮುರುಗೇಂದ್ರಪ್ಪ ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.