ಸೋಮವಾರ, ಮೇ 10, 2021
21 °C

ಸೋತರೂ ಅರ್ಹತೆ ಪಡೆದ ಕೋಲ್ಕತ್ತ ನೈಟ್ ರೈಡರ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಕೋಲ್ಕತ್ತ ನೈಟ್ ರೈಡರ್ಸ್ ತಂಡ ಇಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ಸಾಮರ್ಸೆಟ್ ಎದುರು 11 ರನ್‌ಗಳ ಸೋಲು ಅನುಭವಿಸಿದರೂ, ಪ್ರಧಾನ ಹಂತ ಪ್ರವೇಶಿಸಿತು.ಉಪ್ಪಳದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಾಮರ್ಸೆಟ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 166 ರನ್ ಗಳಿಸಿತು. ಕೋಲ್ಕತ್ತ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 155 ರನ್ ಗಳಿಸಲಷ್ಟೇ ಯಶಸ್ವಿಯಾಯಿತು.ಆದರೆ ಕೋಲ್ಕತ್ತ ತಂಡ (-0.225) ರನ್‌ರೇಟ್‌ನಲ್ಲಿ ಶ್ರೀಲಂಕಾದ ರುಹುನಾ ಇಲೆವೆನ್‌ನ್ನು (-0.275) ಹಿಂದಿಕ್ಕಿ ಮೂರನೇ ತಂಡವಾಗಿ ಪ್ರಧಾನ ಹಂತ ಪ್ರವೇಶಿಸಿತು. ಈ ಎರಡು ತಂಡಗಳು ತಲಾ ಒಂದು ಗೆಲುವು ಪಡೆದಿವೆ. ನಾಲ್ಕು ಪಾಯಿಂಟ್ ಕಲೆಹಾಕಿದ ಸಾಮರ್ಸೆಟ್ `ಎ~ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಪ್ರಧಾನ ಹಂತಕ್ಕೆ ಅರ್ಹತೆ ಗಿಟ್ಟಿಸಿತು. `ಬಿ~ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಟ್ರಿನಿಡಾಡ್ ಅಂಡ್ ಟೊಬಾಗೊ ಈಗಾಗಲೇ ಅರ್ಹತೆ ಪಡೆದಿತ್ತು.ರುಹುನಾ ಅಲ್ಲದೆ, ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿದ ಲೀಸ್ಟರ್‌ಷೈರ್ ಮತ್ತು ಆಕ್ಲೆಂಡ್ ತಂಡಗಳು ಆರ್ಹತಾ ಹಂತದಲ್ಲೇ ಹೊರಬಿದ್ದಿವೆ.ಸಂಕ್ಷಿಪ್ತ ಸ್ಕೋರ್: ಸಾಮರ್ಸೆಟ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 166 (ಪೀಟರ್ ಟ್ರೆಗೊ 70, ವಾನ್ ಡರ್ ಮೆರ್ವ್ 40; ಬ್ರೆಟ್‌ಲೀ 34ಕ್ಕೆ2); ಕೋಲ್ಕತ್ತ ನೈಟ್ ರೈಡರ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 155 (ರ‌್ಯಾನ್ ಟೆನ್ ಡಾಶೆಟ್ 46, ಮನೋಜ್ ತಿವಾರಿ 27, ರಜತ್ ಭಾಟಿಯ 19, ವಾನ್ ಡರ್ ಮೆರ್ವ್ 23ಕ್ಕೆ 2) ಫಲಿತಾಂಶ: ಸಾಮರ್ಸೆಟ್‌ಗೆ 11 ರನ್ ಜಯ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.