ಶನಿವಾರ, ಜನವರಿ 18, 2020
20 °C
ಕ್ರಿಕೆಟ್: ಮಿಂಚಿದ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್

ಸೋಲಿನತ್ತ ವಿಂಡೀಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡ್ಯುನೆಡಿನ್(ಎಎಫ್‌ಪಿ): ಟಿಮ್ ಸೌಥಿ (52 ಕ್ಕೆ 4) ಮತ್ತು ಟ್ರೆಂಟ್‌ ಬೌಲ್ಟ್ (40ಕ್ಕೆ 3) ಅವರುಗಳ ಮಾರಕ ದಾಳಿಗೆ ನಲುಗಿದ ವೆಸ್ಟ್ ಇಂಡೀಸ್ ತಂಡ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸೋಲಿನ ಭೀತಿ ಎದುರಿಸುತ್ತಿದೆ.ಇಲ್ಲಿನ ಯೂನಿವರ್ಸಿಟಿ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೂರನೇ ದಿನವಾದ ಗುರುವಾರ ವಿಂಡೀಸ್ ತನ್ನ ಮೊದಲ ಇನಿಂಗ್ಸ್‌ನಲ್ಲಿ 62.1 ಓವರ್‌ಗಳಲ್ಲಿ 213 ರನ್ ಗಳಿಸಿ ಆಲೌಟ್‌ ಆಯಿತು. ಇದರೊಂದಿಗೆ ಮೊದಲ ಇನಿಂಗ್ಸ್‌ನಲ್ಲಿ 396 ರನ್‌ಗಳ ಹಿನ್ನಡೆ ಅನುಭವಿಸಿತು.ಫಾಲೋಆನ್‌ ಪಡೆದು ಎರಡನೇ ಇನಿಂಗ್ಸ್ ಆರಂಭಿಸಿದ ವಿಂಡೀಸ್ ಗುರುವಾರದ ಆಟದ ಅಂತ್ಯಕ್ಕೆ 49 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 168 ರನ್‌ ಕಲೆ ಹಾಕಿದೆ.72 ರನ್‌ ಗಳಿಸಿರುವ ಡರೆನ್‌ ಬ್ರಾವೊ ತಂಡಕ್ಕೆ ಆಸರೆಯಾಗಿದ್ದಾರೆ. ಅವರಿಗೆ ಮರ್ಲಾನ್‌ ಸ್ಯಾಮುಯೆಲ್ಸ್‌ ಬೆಂಬಲ ನೀಡಿದ್ದಾರೆ. 

ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 153.1 ಓವರ್‌ಗಳಲ್ಲಿ 9 ವಿಕೆಟ್‌ಗೆ 609 ಡಿಕ್ಲೇರ್ಡ್‌; ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ 62.1 ಓವರ್‌ಗಳಲ್ಲಿ 231ರನ್‌ಗಳಿಗೆ ಆಲೌಟ್ (ಡರೆನ್ ಬ್ರಾವೊ 40, ಶಿವನಾರಾಯಣ ಚಂದ್ರಪಾಲ್ 76, ಡರೆನ್ ಸಮಿ ಅಜೇಯ 27, ಟಿಮ್ ಸೌಥಿ 52 ಕ್ಕೆ 4, ಟ್ರೆಂಟ್ ಬೌಲ್ಟ್ 40 ಕ್ಕೆ 3)ಹಾಗೂ 49 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 168 (ಕಿರಿಕ್ ಎಡ್ವರ್ಡ್ಸ್ 59, ಡರೆನ್ ಬ್ರಾವೊ ಬ್ಯಾಟಿಂಗ್ 72, ಮರ್ಲಾನ್ ಸ್ಯಾಮುಯೆಲ್ಸ್ ಬ್ಯಾಟಿಂಗ್ 17, ಟ್ರೆಂಟ್ ಬೌಲ್ಟ್ 26ಕ್ಕೆ 1)

ಪ್ರತಿಕ್ರಿಯಿಸಿ (+)