ಭಾನುವಾರ, ಏಪ್ರಿಲ್ 18, 2021
24 °C

ಸೌಹಾರ್ದ ಫುಟ್‌ಬಾಲ್: ಯೆಮೆನ್-ಭಾರತ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಯೆಮೆನ್ ವಿರುದ್ಧ ನವೆಂಬರ್ 14ರಂದು ಗುವಾಹಟಿಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್ ಪಂದ್ಯಕ್ಕೆ 20 ಮಂದಿ ಆಟಗಾರರ ಭಾರತ ತಂಡವನ್ನು ಕೋಚ್ ವಿಮ್ ಕೋವರ್‌ಮನ್ಸ್ ಪ್ರಕಟಿಸಿದ್ದಾರೆ.ಈ ಪಂದ್ಯ ಭಾರತಕ್ಕೆ ತುಂಬಾ ಮುಖ್ಯವಾಗಿದೆ ಎಂದು ಕೋವರ್‌ಮನ್ಸ್ ನುಡಿದಿದ್ದಾರೆ. `ಇಂತಹ ಪಂದ್ಯಗಳು ಭಾರತಕ್ಕೆ ತುಂಬಾ ಮುಖ್ಯ. ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯಗಳನ್ನು ಆಡುವುದರಿಂದ ಆಟಗಾರರಿಗೆ ಹೆಚ್ಚಿನ ಅನುಭವ ಲಭಿಸಲಿದೆ~ ಎಂದು ಅವರು ಹೇಳಿದ್ದಾರೆ. ತಂಡ ಇಂತಿದೆ: ಗೋಲ್‌ಕೀಪರ್ಸ್‌: ಸುಬ್ರತಾ ಪಾಲ್, ಸುಭಾಶಿಷ್ ರಾಯ್‌ಚೌಧುರಿ, ಕರಣ್‌ಜೀತ್ ಸಿಂಗ್.

ಡಿಫೆಂಡರ್ಸ್: ನಿರ್ಮಲ್ ಚೆಟ್ರಿ, ಡೆಂಜಿಲ್ ಫ್ರಾಂಕೊ, ಗೌರಮಾಂಗಿ ಸಿಂಗ್, ಗುರ್ವಿಂದರ್ ಸಿಂಗ್, ಶೌವಿಕ್ ಘೋಷ್, ಸೈಯದ್ ರಹೀಮ್ ನಬಿ.ಮಿಡ್‌ಫೀಲ್ಡರ್ಸ್: ಲೆನಿ ರಾಡ್ರಿಗಾಸ್, ಮೆಹ್ತಾಬ್ ಹೊಸೇನ್, ಜೆವೆಲ್ ರಾಜಾ, ಫ್ರಾಂಕಿ ಫರ್ನಾಂಡಿಸ್, ಅಲ್ವಿನ್ ಜಾರ್ಜ್, ಆಂಟನಿ ಪೆರೆರಾ, ಸಂಜು ಪ್ರಧಾನ್, ಕ್ಲಿಫರ್ಡ್ ಮಿರಾಂಡ. ಫಾರ್ವರ್ಡ್ಸ್: ರಾಬಿನ್ ಸಿಂಗ್, ಸುನಿಲ್ ಚೆಟ್ರಿ, ಮನದೀಪ್ ಸಿಂಗ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.