ಸ್ನೇಹದ ಬೆಸುಗೆಯಲ್ಲಿ ಅರಳಿದ ಚಿತ್ರ ‘ಸ್ಟೈಲ್ರಾಜ’. ನಿರ್ದೇಶಕ ಹರೀಶ್, ನಿರ್ಮಾಪಕ ರಮೇಶ್ ಹಾಗೂ ನಾಯಕ ನಟ ಗಿರೀಶ್ ಸ್ನೇಹಿತರು. ಸಿನಿಮೋಹಿ ಹರೀಶ್ ನಿರ್ದೇಶಕನಾಗುವ ಕನಸು ಹೊತ್ತವರು. ಉದ್ಯಮಿಯಾಗಿರುವ ರಮೇಶ್ ಸದಭಿರುಚಿ ಚಿತ್ರವೊಂದನ್ನು ನಿರ್ಮಿಸುವ ಇರಾದೆ ಹೊಂದಿದ್ದವರು.

ಹೀಗಿರುವಾಗ ಒಮ್ಮೆ ಭೇಟಿಯಾದ ಸ್ನೇಹಿತರು ತಮ್ಮ ಕನಸನ್ನು ಸಿನಿಮಾ ರೂಪಕ್ಕಿಳಿಸಲು ನಿರ್ಧರಿಸಿದರು. ತಮ್ಮ ರಂಗಭೂಮಿ ಸ್ನೇಹಿತ ಗಿರೀಶ್ನನ್ನು ಚಿತ್ರದ ನಾಯಕನನ್ನಾಗಿ ಆಯ್ಕೆ ಮಾಡುವ ಮೂಲಕ ನಾಯಕನಾಗಬೇಕು ಎಂಬ ಆತನ ಆಸೆಯನ್ನು ಹರೀಶ್ ಈಡೇರಿಸಿದರು. ಎಲ್ಲರಿಗೂ ಇದು ಮೊದಲ ಯತ್ನ. ಸ್ನೇಹಿತರ ಸಮಾಗಮದ ಸಂಕೇತವಾದ ಚಿತ್ರದ ಪತ್ರಿಕಾಗೋಷ್ಠಿಯನ್ನು ‘ಸ್ನೇಹಿತರ ದಿನ’ದಂದೇ ನಡೆದಿದ್ದು ವಿಶೇಷ.

‘ಹಳ್ಳಿಯಿಂದ ನಗರಕ್ಕೆ ಬಂದ ಹುಡುಗನ ಕಥೆ ಇದು’ ಎಂದು ಚಿತ್ರದ ಒನ್ಲೈನ್ ಸ್ಟೋರಿಯನ್ನು ಹರೀಶ್ ಬಿಚ್ಚಿಟ್ಟರು. ‘ತಂದೆ ಇಲ್ಲದೆ ತಾಯಿಯ ಆಶ್ರಯದಲ್ಲಿ ಬೆಳೆಯುವ ನಾಯಕ. ಅಲ್ಲಿಯೇ ಬದುಕುವ ಆಸೆಯಿದ್ದರೂ ಉದ್ಯೋಗದ ಸಮಸ್ಯೆ.

ಕೆಲಸ ಅರಸಿ ಪಟ್ಟಣಕ್ಕೆ ಬಂದು ಸರಿಯಾದ ಬದುಕು ಕಟ್ಟಿಕೊಳ್ಳಲಾಗದ ಆತ, ಪ್ರೀತಿಯ ಸೆಳೆತಕ್ಕೆ ಸಿಗುತ್ತಾನೆ. ಈ ವೇಳೆ ಬದುಕು ಹಲವು ತಿರುವು ಪಡೆಯುತ್ತದೆ. ಕಡೆಗೆ ಆತ ತನ್ನ ಪ್ರೇಮ ಮತ್ತು ತನ್ನನ್ನೇ ನಂಬಿದ ತಾಯಿ ಇವರಿಬ್ಬರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಎನ್ನುವುದು ಚಿತ್ರದ ತಿರುಳು’ ಎಂದು ವಿವರಿಸಿದರು.

ಮೊದಲ ಚಿತ್ರದ ಪುಳಕದಲ್ಲಿದ್ದ ನಾಯಕ ಗಿರೀಶ್, ‘ಇದೇ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದೆ. ಆರಂಭದಲ್ಲಿ ಸ್ವಲ್ಪ ತಡವರಿಸಿದೆ. ಬಳಿಕ ಚಿತ್ರತಂಡದವರ ಪ್ರೋತ್ಸಾಹದೊಂದಿಗೆ ಹೊಂದಿಕೊಂಡೆ. ಚಿತ್ರ ಅಚ್ಚುಕಟ್ಟಾಗಿ ಮೂಡಿಬಂದಿದೆ. ರಂಗಭೂಮಿಯಲ್ಲಿದ್ದ ನನಗೆ ಇಲ್ಲಿಗೆ ಪ್ರಮೋಷನ್ ಸಿಗಲು ಸ್ನೇಹಿತರೇ ಕಾರಣ’ ಎಂದು ಕೃತಜ್ಞತೆಯ ಮಾತುಗಳನ್ನಾಡಿದರು.

‘ಗೆಳೆಯನಿಗಾಗಿ ಮಾಡಿದ ಚಿತ್ರವಿದು’ ಎಂದು ಮಾತು ಆರಂಭಿಸಿದ ರಮೇಶ್, ‘ನಿರೀಕ್ಷೆಗೆ ಮೋಸವಾಗದಂತೆ ಹರೀಶ್ ಚಿತ್ರವನ್ನು ತೆರೆಗೆ ತಂದಿದ್ದಾನೆ. ಅಂದುಕೊಂಡಂತೆ ಇದೊಂದು ಸದಭಿರುಚಿಯ ಚಿತ್ರವಾಗಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಸ್ನೇಹಿತರ ಈ ಚಿತ್ರ ಖಂಡಿತ ಎಲ್ಲರಿಗೂ ಇಷ್ಟವಾಗಲಿದೆ’ ಎಂದು ಚಿತ್ರದ ಕುರಿತು ಹೇಳಿದರು.

ರನುಷಾ ಕಾಶಿ ಚಿತ್ರದ ನಾಯಕಿ. ಹಾಸ್ಯನಟ ಚಿಕ್ಕಣ್ಣ ಅವರ ಕಾಮಿಡಿ ಟಾನಿಕ್ ಈ ಸಿನಿಮಾಗಿದೆ. ನಾಯಕನ ಸ್ನೇಹಿತನಾಗಿ ನಟಿಸಿರುವ ಅವರು, ‘ಎಣ್ಣೆ ಹೊಡೆದ’ ಎಂಬ ಹಾಡನ್ನೂ ಹಾಡಿದ್ದಾರಂತೆ. ಎಂ.ಬಿ. ಲೋಕೇಶ್ ಸಾಹಿತ್ಯಕ್ಕೆ ರಾಜೇಶ್ ರಾಮನಾಥ್ ಟ್ಯೂನ್ ಹಾಕಿದ್ದಾರೆ. ಸುರೇಶ್ ಅರಸ್ ಸಂಕಲನ ಕೆಲಸ ನಿರ್ವಹಿಸಿದ್ದು, ಎಂ.ಬಿ. ಹಳ್ಳಿಕಟ್ಟಿ ಚಿತ್ರದ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.

ಬೆಂಗಳೂರು, ಸಕಲೇಶಪುರ, ಮಡಿಕೇರಿ ಸೇರಿದಂತೆ ಹಲವು ಸುಂದರ ಸ್ಥಳಗಳಲ್ಲಿ ಶೂಟಿಂಗ್ ನಡೆಸಲಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಸದ್ಯದಲ್ಲೇ ಧ್ವನಿಸುರುಳಿ ಬಿಡುಗಡೆಗೊಳಿಸಲು ಚಿತ್ರತಂಡ ತಯಾರಿ ನಡೆಸಿದ್ದು, ಸೆಪ್ಟೆಂಬರ್ನಲ್ಲಿ ಚಿತ್ರವನ್ನು ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.