ಮಂಗಳವಾರ, ಮೇ 11, 2021
25 °C

ಸ್ಫೂರ್ತಿಧಾಮ ಹಾಗೂ ಅಂಬೇಡ್ಕರ್ ಶತಮಾನೋತ್ಸವ ಸಮಿತಿ ಟ್ರಸ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ಫೂರ್ತಿಧಾಮ ಹಾಗೂ ಅಂಬೇಡ್ಕರ್ ಶತಮಾನೋತ್ಸವ ಸಮಿತಿ ಟ್ರಸ್ಟ್‌ನ 2012 ನೇ ಸಾಲಿನ `ಬೋಧಿವೃಕ್ಷ~ ಪ್ರಶಸ್ತಿಗೆ ಮಹಾರಾಷ್ಟ್ರದ ದಲಿತ ಚಿಂತಕ ವಸಂತಮೂನ್ ಅವರನ್ನು ಆಯ್ಕೆ ಮಾಡಲಾಗಿದೆ.`ಬೋಧಿವರ್ಧನ~ ಪ್ರಶಸ್ತಿಗಾಗಿ ಬೆಳಗಾವಿಯ ಡಾ.ಭೀಮರಾವ್ ಘಸ್ತಿ, ಮೈಸೂರಿನ ಡಾ.ಭಾಗ್ಯಲಕ್ಷ್ಮೀ ಅವರನ್ನು ಆಯ್ಕೆ ಮಾಡಲಾಗಿದ್ದು, ಕೊಳ್ಳೇಗಾಲದ ಎಸ್.ಎಲ್.ರಾಬರ್ಟ್ ಪಾಲ್, ಮೈಸೂರಿನ ಆರ್.ರಂಗೇಗೌಡ ಮತ್ತು ಸಾಹುಕಯ್ಯ ಅವರ ಜೀವಮಾನದ ಸಾಧನೆಗಾಗಿ ಮರಣೋತ್ತರ `ಬೋಧಿವರ್ಧನ~ ಪ್ರಶಸ್ತಿಯ ಗೌರವ ಸಂದಿದೆ.`ಬೋಧಿವೃಕ್ಷ~ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ಹಾಗೂ `ಬೋಧಿವರ್ಧನ~ ಪ್ರಶಸ್ತಿಯು ತಲಾ ಇಪ್ಪತ್ತೈದು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.ದಲಿತರ ಶಿಕ್ಷಣ ಹಾಗೂ ಸಾಮಾಜಿಕ ಹೋರಾಟಗಳ ಕೊಡುಗೆಗಾಗಿ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಹಿರಿಯ ಸಾಹಿತಿ ದೇವನೂರ ಮಹಾದೇವ, ಆರ್. ಎಸ್.ದೇಶಪಾಂಡೆ, ಎಸ್.ಮರಿಸ್ವಾಮಿ ಹಾಗೂ ಪತ್ರಕರ್ತ ಇಂದೂಧರ ಹೊನ್ನಾಪುರ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದರು. ಶನಿವಾರ ನಗರದ ಸ್ಫೂರ್ತಿಧಾಮದಲ್ಲಿ ನಡೆಯುವ `ಅಂಬೇಡ್ಕರ್ ಹಬ್ಬ~ ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.