ಬುಧವಾರ, ಜೂನ್ 16, 2021
28 °C

ಸ್ಫೂರ್ತಿ ಶುಭಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಕರ್ನಾಟಕದ ಯುವ ಆಟಗಾರ್ತಿ ಸ್ಫೂರ್ತಿ ಶಿವಲಿಂಗಯ್ಯ ಮಲೇಷ್ಯಾದಲ್ಲಿ ನಡೆಯುತ್ತಿರುವ ಐಟಿಎಫ್ ಚೀಫ್ ಮಿನಿಸ್ಟರ್ ಕಪ್ ಟೆನಿಸ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದರು.

ಐಟಿಎಫ್‌ನಲ್ಲಿ 245ನೇ ರ‌್ಯಾಂಕ್ ಹೊಂದಿರುವ ಸ್ಫೂರ್ತಿ ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 7-6ರಲ್ಲಿ ಉಜ್ಬೇಕಿಸ್ತಾನದ ಅರಿನಾ ಫೋಲ್ಟ್ಸ್ ಎದುರು ಜಯಿಸಿದರು.

ಕೋಲ್ಕತ್ತದಲ್ಲಿ ಕಳೆದ ತಿಂಗಳು ನಡೆದ ಐಟಿಎಫ್ ಟೂರ್ನಿಯಲ್ಲಿ ಈ ಆಟಗಾರ್ತಿ ಅರಿನಾ ಎದುರು ಪೈಪೋಟಿ ನಡೆಸಿದ್ದರು.

ಎರಡನೇ ಸುತ್ತಿನಲ್ಲಿ ಸ್ಫೂರ್ತಿ 39ನೇ ರ‌್ಯಾಂಕ್‌ನ ಜೆಕ್ ಗಣರಾಜ್ಯದ ಬರ್ಬೊರಾ ಕ್ರೆಜಿಸಿಕೊವಾ ಎದುರು ಸೆಣಸಲಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.