ವಿಜಾಪುರ: ನಗರದ ಐತಿಹಾಸಿಕ ಸ್ಮಾರಕಗಳ ಅತಿಕ್ರಮಣ ತಡೆಯಬೇಕು ಎಂದು ಹುಬ್ಬಳ್ಳಿಯ ಆರ್ಯ ಟ್ರಸ್ಟ್ನ ಗೌರವಾಧ್ಯಕ್ಷ ಡಾ.ಎಚ್.ಜಿ. ದಡ್ಡಿ, ಎಸ್ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಕಾಲೇಜಿನ ಪರಂಪರೆ ಕೂಟದ ಕಾರ್ಯದರ್ಶಿ ಪ್ರೊ.ರಾಜು ಬಿದರಿ, ಪ್ರೊ.ಸದಾಶಿವ ಪವಾರ ಇತರರು ಒತ್ತಾಯಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಅವರಿಗೆ ಮನವಿ ಸಲ್ಲಿಸಿರುವ ಅವರು, ನಗರದಲ್ಲಿ ರಾಷ್ಟ್ರೀಯ ಐತಿಹಾಸಿಕ ಸ್ಥಳಗಳೆಂದು ಗುರುತಿಸಿರುವ ಸ್ಮಾರಕಗಳ ಪುನರ್ ಸಮೀಕ್ಷೆ ನಡೆಸಬೇಕು. ಅವುಗಳ ಸುತ್ತಲೂ ಗೋಡೆ ಕಟ್ಟಿ ಭದ್ರತಾ ಸಿಬ್ಬಂದಿ ನೇಮಿಸಬೇಕು ಎಂದರು.

ಈ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಪುರಾತತ್ವ ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿ ಕೊಂಡು ಕುರಿತು ಚರ್ಚಿಸಿದರು. ಪರಂಪರೆ ಅಭಿವೃದ್ಧಿ ಮತ್ತು ಸಂರಕ್ಷಣಾ ಸಮಿತಿಯ ಸದಸ್ಯರ ಸಭೆ ಕರೆದು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಪರಂಪರೆ ಕೂಟದ ಸದಸ್ಯರಾದ ಡಾ.ಎಂ.ಬಿ. ಮೂಲಿಮನಿ , ಡಾ.ಪಿ.ಎಂ. ಬಿರಾದಾರ, ಎನ್.ಕೆ. ಜಾಹಗೀರದಾರ ಈ ಸಂದರ್ಭದಲ್ಲಿದ್ದರು ಎಂದು ಪ್ರಕಟಣೆ ತಿಳಿಸಿದೆ.

ಸ್ನೇಹ ಸಮ್ಮೇಳನ

ವಿಜಾಪುರ ತಾಲ್ಲೂಕಿನ ಜಂಬಗಿ ಗ್ರಾಮದಲ್ಲಿ ನಿಸರ್ಗ ಶಿಕ್ಷಣ ಸಂಸ್ಥೆಯ ಸಂಸ್ಕಾರ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಇತ್ತೀಚೆಗೆ ಜರುಗಿತು.

ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಡಾ.ಎ.ಜೆ. ಕುಲಕರ್ಣಿ, ರಮೆಶ ತುಂಗಾ, ಶಿಕ್ಷಣ ಸಂಸ್ಥೆಯ ಗುರುರಾಜ ಪತ್ತಾರ, ರವಿ ದೇಶಮುಖ, ಸಿದ್ಧಲಿಂಗ ದೇಶಮುಖ, ಧರ್ಮರಾಯ ಹತ್ತಳ್ಳಿ, ರೇವಣಸಿದ್ದಯ್ಯ ಸ್ವಾಮೀಜಿಗಳು ವೇದಿಕೆಯಲ್ಲಿದ್ದರು. ಶ್ರಿಶೈಲ ಹಚಡದ, ಗುರುಬಾಳಪ್ಪ ಹತ್ತಳ್ಳಿ, ಸಿದ್ದು ಗೇರಡೆ ಭಾಗವಹಿಸಿದ್ದರು.
ಸಂತೋಷ ಪತ್ತಾರ ಸ್ವಾಗತಿಸಿದರು. ಲಕ್ಷ್ಮಣ ಕಾರ್ಯಕ್ರಮ ನಿರೂಪಿಸಿದರು. ಬಿ.ಎಸ್. ಮಾನೆ ವಂದಿಸಿದರು.

ಸಾಮೂಹಿಕ ವಿವಾಹ
ಬಾಗಲಕೋಟೆ:  ಹುನಗುಂದ ತಾಲ್ಲೂಕಿನ ಗೊರಜನಾಳದ ಶ್ರೀ ವೆಂಕಟೇಶ್ವರ ಮತ್ತು ಮಾರುತೇಶ್ವರ ರಥೋತ್ಸವ ಮತ್ತು ಸಾಮೂಹಿಕ ವಿವಾಹ ಹಾಗೂ ಧರ್ಮದೇವತೆ ಇಟಗಿ ಭೀಮಾಂಬಿಕಾ ಪುರಾಣ ಮಂಗಲ ಕಾರ್ಯಕ್ರಮ ಇದೇ 22 ಮತ್ತು 23ರಂದು ನಡೆಯಲಿದೆ.

22ರಂದು ಸಂಜೆ 6ಕ್ಕೆ ನಡೆಯುವ ಧರ್ಮದೇವತೆ ಇಟಗಿ ಭೀಮಾಂಬಿಕಾ ಪುರಾಣ ಮಂಗಲ ಕಾರ್ಯಕ್ರಮ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.