ಭಾರತದಲ್ಲಿ ಸ್ಮಾರ್ಟ್ಫೋನ್ ಮಾರಾಟ 2013ರಲ್ಲಿ ಮೂರು ಪಟ್ಟು ಹೆಚ್ಚಿದ್ದು, 440 ಲಕ್ಷಕ್ಕೆ ಏರಿಕೆ ಕಂಡಿದೆ ಎಂದು ಮಾರುಕಟ್ಟೆ ಅಧ್ಯಯನ ಸಂಸ್ಥೆ ‘ಐಡಿಸಿ’ ಹೇಳಿದೆ.

ಸ್ಥಳೀಯ ಹ್ಯಾಂಡ್ಸೆಟ್ ತಯಾರಿಕಾ ಕಂಪೆನಿಗಳಾದ ಮೈಕ್ರೊಮ್ಯಾಕ್ಸ್ ಮತ್ತು ಕಾರ್ಬನ್ ಕಂಪೆನಿಗಳ ಅಗ್ಗದ ದರದ ಸ್ಮಾರ್ಟ್ಫೋನ್ಗಳಿಗೆ ಬೇಡಿಕೆ ಗರಿಷ್ಠ ಮಟ್ಟದಲ್ಲಿದೆ. ಆದರೂ, ಕೊರಿಯಾ ಮೂಲದ ಸ್ಯಾಮ್ಸಂಗ್ ಶೇ 38ರಷ್ಟು ಪಾಲಿನೊಂದಿಗೆ ಭಾರತದ ಸ್ಮಾರ್ಟ್-ಫೋನ್ ಮಾರುಕಟ್ಟೆ ಯಲ್ಲಿ ಮುಂಚೂಣಿಯಲ್ಲಿದೆ ಎಂದು ವರದಿ ವಿಶ್ಲೇಷಿಸಿದೆ.

2012ರಲ್ಲಿ ಒಟ್ಟು 162 ಲಕ್ಷ ಸ್ಮಾರ್ಟ್ಫೋನ್ ಮಾರಾಟವಾಗಿದ್ದವು. 2013ನೇ ಸಾಲಿನ ನಾಲ್ಕನೇ ತ್ರೈಮಾಸಿ ಕದ ಅಂಕಿ ಅಂಶದಂತೆ ಸ್ಮಾರ್ಟ್ಪೋನ್ ಮಾರುಕಟ್ಟೆಯಲ್ಲಿ ಮೈಕ್ರೊಮ್ಯಾಕ್ಸ್ ಶೇ 16ರಷ್ಟು, ಕಾರ್ಬನ್ ಶೇ 10ರಷ್ಟು, ಸೋನಿ ಶೇ 5ರಷ್ಟು ಮತ್ತು ಲಾವಾ ಶೇ 4.7ರಷ್ಟು ಪಾಲು ಹೊಂದಿವೆ. ಸ್ಮಾರ್ಟ್ಫೋನ್ಗಳಿಗಿಂತ ಸ್ವಲ್ಪ ದೊಡ್ಡ ದಿರುವ 5ರಿಂದ 6.99 ಇಂಚು ದೃಶ್ಯ ಪರದೆಯ ಫ್ಯಾಬ್ಲೆಟ್ಗಳ ಮಾರುಕಟ್ಟೆ ಪಾಲು ನಾಲ್ಕನೇ ತ್ರೈಮಾಸಿದಲ್ಲಿ ಶೇ 20ಕ್ಕೆ ಏರಿಕೆ ಕಂಡಿದೆ.

ಫೀಚರ್ ಫೋನ್-ಗಳಿಂದ ಸ್ಮಾರ್ಟ್ಫೋನ್ನತ್ತ ವಲಸೆ ಬರುತ್ತಿರುವ ಗ್ರಾಹ ಕರ ಸಂಖ್ಯೆ ಕಳೆದ ಒಂದು ವರ್ಷದಲ್ಲಿ ದ್ವಿಗುಣಗೊಂಡಿದೆ. ದರ ಇಳಿಕೆಯೂ ಈ ಸಂಖ್ಯೆ ಹೆಚ್ಚಲು ಪ್ರಮುಖ ಕಾರಣ’ ಎಂದು ‘ಐಡಿಸಿ’ಯ ಭಾರತೀಯ ಮುಖ್ಯಸ್ಥರಾದ ಮಾನಸಿ ಯಾದವ್ ಅಭಿಪ್ರಾಯಪಟ್ಟಿದ್ದಾರೆ.

2013ರಲ್ಲಿ ಒಟ್ಟಾರೆ ಮೊಬೈಲ್ ಹ್ಯಾಂಡ್ಸೆಟ್ಗಳ ಮಾರಾಟ ಶೇ 18 ರಷ್ಟು ಹೆಚ್ಚಿದ್ದು 2,570 ಲಕ್ಷ ತಲುಪಿದೆ. 2012ರಲ್ಲಿ 2,180 ಲಕ್ಷದಷ್ಟಿತ್ತು.

ಒಟ್ಟಾರೆ ದೇಶೀಯ ಮೊಬೈಲ್ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ ಶೇ 19 ರಷ್ಟು, ಮೈಕ್ರೊಮ್ಯಾಕ್ಸ್ ಶೇ 13ರಷ್ಟು ಮತ್ತು ನೋಕಿಯಾ ಶೇ 12ರಷ್ಟು ಪಾಲು ಹೊಂದಿವೆ.

ಬ್ಲ್ಯಾಕ್ಬೆರಿ ಬೆಲೆ ಭಾರಿ ಇಳಿಕೆ
ಮಾರಾಟ ಗಣನೀ ಯವಾಗಿ ಕುಸಿತ ಕಂಡಿರುವುದರಿಂದ ಬ್ಲ್ಯಾಕ್ಬೆರಿ ತನ್ನ ‘ಜೆಡ್ 10’ ಸರಣಿಯ ಸ್ಮಾರ್ಟ್ಪೋನ್ಗಳ ಬೆಲೆಯನ್ನು ಮತ್ತೆ ತಗ್ಗಿಸಿದೆ.

ಈ ಫೋನ್ ಮಾರುಕಟ್ಟೆಗೆ ಬಿಡುಗಡೆಯಾದಾಗ ಬೆಲೆ ₨43,490 ಇತ್ತು. ಸೆಪ್ಟೆಂಬರ್ನಲ್ಲಿ ₨29,990ಕ್ಕೆ ತಗ್ಗಿಸಲಾಗಿತ್ತು. ಮತ್ತೆ ಈಗ ₨17,990ಕ್ಕೆ ಇಳಿಸ ಲಾಗಿದೆ. ಈ ಕೊಡುಗೆ 60 ದಿನಗಳಿಗೆ ಸೀಮಿತ ಎಂದು ಕಂಪೆನಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.