ವಿಶ್ವಸಂಸ್ಥೆ (ಪಿಟಿಐ): ನ್ಯೂಯಾರ್ಕ್ನಲ್ಲಿ `ಈಸ್ಟ್ ರಿವರ್~ಗೆ ಮುಖ ಮಾಡಿರುವ ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಸಮುಚ್ಚಯಕ್ಕೆ ಸ್ಯಾಂಡಿ ಚಂಡಮಾರುತದಿಂದಾಗಿ ಪ್ರವಾಹದ ನೀರು ನುಗ್ಗಿದ್ದು, ಅಪಾರ ಹಾನಿಯಾಗಿದೆ.

ಸ್ಯಾಂಡಿ ಹಾವಳಿಯಿಂದಾಗಿ ಮ್ಯಾನಹಟನ್ ಹೃದಯಭಾಗದಲ್ಲಿರುವ ವಿಶ್ವಸಂಸ್ಥೆಯ ಸಂಕೀರ್ಣವನ್ನು ಸೋಮವಾರದಿಂದಲೇ ಮುಚ್ಚಲಾಗಿತ್ತು. ಗುರುವಾರ ವಿಶ್ವಸಂಸ್ಥೆಯ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿವೆ.

ಆದರೆ, ಸ್ಯಾಂಡಿಯಿಂದಾಗಿ ವಿಶ್ವಸಂಸ್ಥೆಯಲ್ಲಿ ಸಂಪರ್ಕ ವ್ಯವಸ್ಥೆಗೆ ಅಡಚಣೆಯಾಗಿದೆ. ಅಲ್ಲದೇ ಮೂಲಸೌಕರ್ಯ ವ್ಯವಸ್ಥೆಯಲ್ಲೂ ಏರುಪೇರಾಗಿದೆ.

`ಈಸ್ಟ್ ರಿವರ್~ನಿಂದ ನುಗ್ಗಿದ ಪ್ರವಾಹದ ನೀರು ವಿಶ್ವಸಂಸ್ಥೆ ಕಟ್ಟಡದ ಕೆಳಮಹಡಿಗೆ ನುಗ್ಗಿದ್ದು, ಹವಾನಿಯಂತ್ರಿತ ವ್ಯವಸ್ಥೆ ಮತ್ತಿತರ ವಿದ್ಯುತ್ ಆಧರಿತ ವ್ಯವಸ್ಥೆಗಳನ್ನು ಹಾಳು ಮಾಡಿದೆ.

ಈ ಮಧ್ಯೆ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಸ್ಯಾಂಡಿಯಿಂದ ಆದ ಅನಾಹುತದ ಬಗ್ಗೆ ಕಳವಳ ವ್ಯಕ್ತಪಡಿಸಿ, ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಪತ್ರ ಬರೆದಿದ್ದಾರೆ. ಹೈಟಿ ಹಾಗೂ ಡೊಮಿನಿಕನ್ ರಿಪಬ್ಲಿಕನ್ ಅಧ್ಯಕ್ಷರ ಜತೆಗೆ ಮಾತನಾಡಿದ್ದಾರೆ. ನ್ಯೂಯಾರ್ಕ್ ಹಾಗೂ ನ್ಯೂಜೆರ್ಸಿ ನಗರಗಳ ಮೇಯರ್ ಜತೆಗೂ ಮೂನ್ ಮಾತನಾಡಿದ್ದಾರೆ.

ಸತ್ತವರ ಸಂಖ್ಯೆ 92ಕ್ಕೆ ಏರಿಕೆ
ವಾಷಿಂಗ್ಟನ್ ವರದಿ: ಅಮೆರಿಕವನ್ನು ತತ್ತರಗೊಳಿಸಿದ `ಸ್ಯಾಂಡಿ~ ಚಂಡಮಾರುತದಿಂದ ಸತ್ತವರ ಸಂಖ್ಯೆ 92ಕ್ಕೆ ಏರಿದೆ. ಈ ಪ್ರಕೃತಿ ವಿಕೋಪದಲ್ಲಿ ಸುಮಾರು 2.70 ಲಕ್ಷ ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.