ಸೋಮವಾರ, ಜೂನ್ 21, 2021
22 °C

ಸ್ವಂತ ವೆಬ್‌ಸೈಟ್: ಸರ್ಕಾರಿ ಪ್ರೌಢಶಾಲೆ ಸಾಧನೆ

ಪ್ರಜಾವಾಣಿ ವಾರ್ತೆ ಆರ್.ವೀರೇಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ಸ್ವಂತ ವೆಬ್‌ಸೈಟ್: ಸರ್ಕಾರಿ ಪ್ರೌಢಶಾಲೆ ಸಾಧನೆ

ಗದಗ: ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಮೇವುಂಡಿ ಗ್ರಾಮದ ಶ್ರೀಮತಿ ಶಾಂತಾಬಾಯಿ ಮಲ್ಲಪ್ಪ ಕೊರ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯೂ ಸ್ವಂತ ವೆಬ್‌ಸೈಟ್‌ವೊಂದನ್ನು ರೂಪಿಸಿದೆ.ಸರ್ಕಾರಿ ಶಾಲೆಗಳೆಂದರೆ ನಕಾರಾತ್ಮಕ ದೃಶ್ಯಗಳೇ ಕಣ್ಣ ಮುಂದೆ ಬರುವ ಈ ದಿನಗಳಲ್ಲಿ ಸರ್ಕಾರ ಕೊಟ್ಟಿರುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ವೆಬ್‌ಸೈಟ್ ರೂಪಿಸಿ, ಅಲ್ಲಿಗೆ ತಮ್ಮ ಶಾಲೆಯ ಪೂರ್ಣ ಮಾಹಿತಿಯನ್ನು ತುಂಬಿದ್ದಾರೆ ಶಾಲೆಯ ಮುಖ್ಯೋಪಾಧ್ಯಾಯ ಶರಣು ಗೋಗೇರಿ.ಶಾಲೆಯ ಸ್ಥಾಪನೆಗೆ ನಡೆದ ಪತ್ರ ವ್ಯವಹಾರದಿಂದ ಹಿಡಿದು ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಮಾಹಿತಿವರೆಗೂ ಸುಮಾರು 28 ವಿವಿಧ ವಿಭಾಗಗಳಿಗೆ ವಿಷಯವನ್ನು ಅಪ್‌ಲೋಡ್ ಮಾಡಲು ಒಂದು ವರ್ಷ ಅವಿರತ ವಾಗಿ ಶ್ರಮ ಪಟ್ಟಿದ್ದಾರೆ ಶಾಲೆಯ ಸಿಬ್ಬಂದಿ ಹಾಗೂ ಶಿಕ್ಷಕರು. ಇದರ ಫಲವಾಗಿಯೇ ಈಗ     www.ghsmevundi.weebly.com   ಹೆಸರಿನ ವೆಬ್‌ಸೈಟ್ ಶಾಲೆಯ ಮಾಹಿತಿ ಕಣಜವಾಗಿದೆ.ವೆಬ್‌ಸೈಟ್‌ನಲ್ಲಿ ಏನಿದೆ? ಮೇವುಂಡಿ ಸರ್ಕಾರಿ ಶಾಲೆ ರೂಪಿಸಿರುವ ವೆಬ್‌ಸೈಟ್‌ನಲ್ಲಿ ಶಾಲೆ ಪ್ರಾರಂಭವಾಗಲು ನಡೆದ ಪ್ರಕ್ರಿಯೆ, ಶಾಲೆ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಛಾಯಾಚಿತ್ರಗಳು, ಶಾಲೆಯ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ ಬಂದಿರುವ ವರದಿಗಳು, ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರ ಮಾಹಿತಿ, ವಿದ್ಯಾರ್ಥಿಗಳ ಮಾಹಿತಿ, ಶೈಕ್ಷಣಿಕ ಸಂಘ, ಸಂಸತ್ತಿನ ಮಾಹಿತಿ, ಬಾಲಮೇಳ, ವಿದ್ಯಾರ್ಥಿಗಳ ಸಾಂಸ್ಕೃತಿಕ ಸಂಘಗಳ ಕಾರ್ಯಕ್ರಮಗಳ ಮಾಹಿತಿ ಹಾಗೂ ಛಾಯಾಚಿತ್ರಗಳು ಇವೆ. ಇವುಗಳಲ್ಲದೇ ಶೈಕ್ಷಣಿಕ ವರ್ಷದ ಪಠ್ಯ ಬೋಧನಾ ಯೋಜನೆ, ಶಿಕ್ಷಕರ ಕಲಿಕೋಪಕರಣಗಳ ತಯಾರಿ, ಮಕ್ಕಳು ಮಂಡಿಸಿದ ವಿಷಯಗಳನ್ನು ಸಹ ಅಪ್‌ಲೋಡ್ ಮಾಡಲಾಗಿದೆ.ಇದಲ್ಲದೇ ಈ ಪ್ರೌಢಶಾಲೆಯಲ್ಲಿ ಇರುವ 133 ವಿದ್ಯಾರ್ಥಿಗಳಿಗೂ ವೈಯಕ್ತಿಕ ಇ-ಮೇಲ್ ಐಡಿಯನ್ನು ರೂಪಿಸಲಾಗಿದೆ. ಜೊತೆಗೆ 9 ಮಂದಿ ಶಿಕ್ಷಕರೂ ಇ-ಮೇಲ್ ಐಡಿ ಹೊಂದಿದ್ದಾರೆ. ಶಾಲೆಯಲ್ಲಿ 14 ಕಂಪ್ಯೂಟರ್, 2 ಲ್ಯಾಪ್‌ಟಾಪ್ ಇವೆ. ಖಾಸಗಿ ದೂರವಾಣಿ ಸಂಸ್ಥೆಯ ಡಾಟಾಕಾರ್ಡ್ ಉಪಯೋಗಿಸಿಕೊಂಡು ಇಂಟರ್‌ನೆಟ್ ಸೌಲಭ್ಯ ಪಡೆದುಕೊಳ್ಳಲಾಗಿದೆ.`ವಿದ್ಯಾರ್ಥಿಗಳಿಗೆ ಇ-ಮೇಲ್ ಐಡಿ ರೂಪಿಸಿಕೊಟ್ಟಿರುವುದರಿಂದ ಅವರಿಗೆ ನೂತನ ತಂತ್ರಜ್ಞಾನದ ಅರಿವು ಆಗುತ್ತಿದೆ. ಸ್ನೇಹಿತರಿಗೆ ಅಂತರ್ಜಾಲದಲ್ಲೇ ಪತ್ರ ಬರೆಯುತ್ತಿದ್ದಾರೆ. ಪಠ್ಯಕ್ಕೆ ಬೇಕಾಗಿರುವ ಪೂರಕ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದಾರೆ~ ಎಂದು ಮುಖ್ಯೋಪಾಧ್ಯಾಯ ಶರಣು ಗೋಗೇರಿ `ಪ್ರಜಾವಾಣಿ~ಗೆ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.