ಉಡುಪಿ: ‘ಸ್ವದೇಶಿ ಸಂಸ್ಕೃತಿ ಹಾಗೂ ಸಾಮಾಜಿಕ ಚಿಂತನೆಯಲ್ಲಿ ಯುವಕರು ತೊಡಗಿಸಿಕೊಳ್ಳಲು ರೋಟರ್ಯಾಕ್ಟ್ ನಂತಹ ಸಂಘಟನೆ ಉತ್ತಮ ವೇದಿಕೆಯಾಗಿದೆ’ ಎಂದು ಶೀರೂರು ಮಠದ ಲಕ್ಷ್ಮೀವರ ಸ್ವಾಮೀಜಿ ಹೇಳಿದರು.

ಸಗ್ರಿ ರೋಟರ್ಯಾಕ್ಟ್ ಸಂಸ್ಥೆ ಕುಂಜಿಬೆಟ್ಟು ಶಾರದಾ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ 32ನೇ ಕರಾವಳಿ ವಲಯ ಸಮ್ಮೇಳನ `ಸ್ನೇಹಲೋಕ’ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಗ್ರಿ ರೋಟರ್ಯಾಕ್ಟ್ ಸಂಸ್ಥೆಗೂ ಅಷ್ಟಮಠಕ್ಕೂ ಅವಿನಾಭಾವ ಸಂಬಂಧವಿದೆ.

ಪ್ರತೀ ಪರ್ಯಾಯದ ಅವಧಿಯಲ್ಲಿ ಹೆಚ್ಚಿನ ಜವಬ್ದಾರಿಯಿಂದ ಸಂಸ್ಥೆಯ ಸದಸ್ಯರು ಕೆಲಸ ನಿರ್ವಹಿಸುವರು ಎಂದರು. ವಲಯ ಪ್ರತಿನಿಧಿ ಮಂಜುನಾಥ ಕಾರಂತ್ ಮಾತನಾಡಿ, ಸ್ನೇಹ ಹಾಗೂ ಸೇವೆಯ ಮೂಲಕ ರೋಟರ್ಯಾಕ್ಟ್ ಸದಸ್ಯರು ಸಮಾಜದಲ್ಲಿ ತೊಡಗಿಸಿಕೊಳ್ಳಲು ಸ್ನೇಹಲೋಕ ಸೇತುವಾಗಲಿ ಎಂದರು.

ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿ ಕೆ.ಆರ್.ರಾಜೀವ್, ರೋಟರಿ ಉಡುಪಿ ಮಣಿಪಾಲದ ಅಧ್ಯಕ್ಷೆ ಡಾ.ಎ.ಗಿರಿಜ, ಮಾಜಿ ಜಿಲ್ಲಾ ಪ್ರತಿನಿಧಿ ನಾಗರಾಜ ತಂತ್ರಿ, ಕ್ಲಬ್ ಸಭಾಪತಿ ಶ್ರೀಪತಿ ಪೆರಂಪಳ್ಳಿ, ಮಾಜಿ ವಲಯ ಪ್ರತಿನಿಧಿ ಶಿವಾನಂದ ನಾಯರಿ, ವಲಯ ಕಾರ್ಯದರ್ಶಿ ಸುನಿಲ್ ಕುಮಾರ್, ಕ್ಲಬ್ ಕಾರ್ಯದರ್ಶಿ ಮಹೇಶ್ ಕಲ್ಗಾರ್ ಮತ್ತಿತರರು ಉಪಸ್ಥಿತರಿದ್ದರು.

ಸಗ್ರಿ ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಅರುಣ್ ಎಸ್. ಆಚಾರ್ಯ ಸ್ವಾಗತಿಸಿದರು. ಸಮ್ಮೇಳನ ಸಭಾಪತಿ ನಾಗರಾಜ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರತ್ನಾಕರ್ ಇಂದ್ರಾಳಿ, ರಾಜೇಶ್ ಪಣಿಯಾಡಿ ಕಾರ್ಯಕ್ರಮ ನಿರೂಪಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.