ಮಂಗಳವಾರ, ಜನವರಿ 21, 2020
19 °C

ಸ್ವಾಸ್ಥ್ಯ ಬೀಮಾ ಯೋಜನೆ: ಹೊಸ ಸಮೀಕ್ಷೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ಸ್ವಾಸ್ಥ್ಯ ಬೀಮಾ ಯೋಜನೆಯಡಿ ಫಲಾನುಭವಿಗಳ ಪಟ್ಟಿಯಲ್ಲಿ ಕೂಲಿಕಾರ್ಮಿಕರ ಹೆಸರನ್ನು ಕೈಬಿಟ್ಟಿದ್ದು ಹೊಸದಾಗಿ ಸಮೀಕ್ಷೆ ನಡೆಸಬೇಕು ಎಂದು  ಒತ್ತಾಯಿಸಿ ಆವಿನಹಳ್ಳಿ ಹಾಗೂ ಮತ್ತಿಕೊಪ್ಪ ಗ್ರಾಮಸ್ಥರು ಸೋಮವಾರ ಉಪ ವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.ಈ ಹಿಂದೆ ಮಾಡಿರುವ ಸಮೀಕ್ಷೆಯಲ್ಲಿ ಆಗಿರುವ ಲೋಪ- ದೋಷಗಳಿಂದ ಅರ್ಹ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗುವಂತಾಗಿದೆ. ಇದೇ ಪಟ್ಟಿಯನ್ನು ಆಧರಿಸಿ ಯೋಜನೆಯ ಫಲಾನುಭವಿಗಳನ್ನು ಗುರುತಿಸಿದರೆ ಯೋಜನೆಯ ಉದ್ದೇಶವೇ ನಿರರ್ಥಕವಾದಂತೆ ಎಂದು ಗ್ರಾಮಸ್ಥರು ದೂರಿದರು.ಹೊಸದಾಗಿ ಸಮೀಕ್ಷೆ ನಡೆಸುವ ಮೂಲಕ ಅರ್ಹ ಫಲಾನುಭವಿಗಳ ಭಾವಚಿತ್ರ ತೆಗೆದು ಕಾರ್ಡ್ ವಿತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಮಂಜಪ್ಪ, ಕೃಷ್ಣಪ್ಪ, ಕಲಾವತಿ, ಫಕೀರಪ್ಪ, ಸವಿತಾ, ಬಂಗಾರಪ್ಪ, ಮಲ್ಲಮ್ಮ, ರಾಮಚಂದ್ರ, ಶಾರದಾ, ಗೀತಾ, ಚನ್ನಬಸಪ್ಪ ಹಾಜರಿದ್ದರು.ಸ್ಪಷ್ಟನೆ

ಇಲ್ಲಿನ ದಲಿತ ಮುಖಂಡ ಅರಮನೆಕೇರಿ ನಾರಾಯಣ ಅವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿರುವ ಸಂಬಂಧ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಯಾವುದೇ ಮುಖಂಡರ ಬಗ್ಗೆ ಆರೋಪ ಮಾಡಿಲ್ಲ ಎಂದು ಪುರಸಭೆ ಮಾಜಿ ಸದಸ್ಯೆ ಲಲಿತಮ್ಮ ಸ್ಪಷ್ಟೀಕರಣ ನೀಡಿದ್ದಾರೆ.ಕೆಲವು ದಲಿತ ಮುಖಂಡರಿಂದ ಮುಗ್ಧರ ಶೋಷಣೆಯಾಗುತ್ತಿದೆ ಎಂದು ಹೇಳಿದ್ದೇನೆಯೇ ಹೊರತು ಡಿಎಸ್‌ಎಸ್ ಹೆಸರು ಪ್ರಸ್ತಾಪ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

 

ಪ್ರತಿಕ್ರಿಯಿಸಿ (+)