ಶನಿವಾರ, ಏಪ್ರಿಲ್ 10, 2021
32 °C

ಹಕ್ಕುಗಳಿಗೆ ಹೋರಾಡಲು ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿರಿಯಾಪಟ್ಟಣ: ಸಮಾಜದಲ್ಲಿ ಸ್ತ್ರೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತೊಲಗಿಸಿ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಲು ಸಂಘಟನೆಗಳು ಮುಂದಾಗಬೇಕು ಎಂದು ಧರ್ಮಾಧ್ಯಕ್ಷ ರೆ.ಫಾ.ಡಾ.ಬಿಷಪ್‌ಜಾರ್ಜ್ ಞರಳ್‌ಕ್ಕಾಟ್ ತಿಳಿಸಿದರು.ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಮಂಗಳವಾರ ಚೈತನ್ಯ ಚಾರಿಟಬಲ್ ಟ್ರಸ್ಟ್, ಹರ್ಡ್ಸ್ ಫೌಂಡೇಶನ್ ಮತ್ತು ರಾಜಾಪುರ ರಿಕ್ರಿಯೇಷನ ಕ್ಲಬ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಈಗಿನ ಜನರು ಹೆಣ್ಣು ಮಗು ಜನಿಸಿದಾಗ ನಿರ್ಲಕ್ಷ್ಯ ತೋರುತ್ತಾರೆ. ಆದರೆ ಗಂಡು ಮಗು ಹುಟ್ಟಿದರೆ  ಸಂತೋಷಪಡುತ್ತಾರೆ. ಇದು ವಿಷಾದನೀಯ ಸಂಗತಿ ಎಂದರು.

ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದ ವಕೀಲರು ಮತ್ತು ಮಹಿಳಾಪರ ಹೋರಾಟಗಾರ್ತಿ ಬಿ.ರಾಧ ಮಾತನಾಡಿ ಮಹಿಳೆಯರಿಗೆ ಸಂಘಟನೆ ಅತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ತಮ್ಮ ಸ್ಥಾನಗಳನ್ನು ಪಡೆಯಲು  ಅಂತರಾಷ್ಟ್ರೀಯ ಮಟ್ಟಗಳಲ್ಲಿ ಸಾಮಾಜಿಕವಾಗಿ ಹಾಗೂ ಸಂಘಟಿತವಾಗಿ ಹೋರಾಟ ನಡೆಸಿದ್ದಾರೆ. ಸ್ತ್ರೀಯರು  ಸಾಮಾಜಿಕವಾಗಿ ಬದ್ಧತೆಯನ್ನು ರೂಪಿಸಿಕೊಂಡು ಆರ್ಥಿಕವಾಗಿ ಶಿಸ್ತು ಅಳವಡಿಸಿಕೊಂಡು ದೌರ್ಜನ್ಯದ ವಿರುದ್ಧ  ಹೋರಾಟ ನಡೆಸಬೇಕು ಎಂದರು.ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್.ನಟರಾಜ್ ಮಾತನಾಡಿ ಸಮಾಜದಲ್ಲಿ ಗಂಡು, ಹೆಣ್ಣು ಎಂಬ ಭೇದಭಾವವನ್ನು ಬಿಡಬೇಕು. ಮಹಿಳೆಯರಿಗೆ ಶಿಕ್ಷಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಚೈತನ್ಯ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷೆ ಸಿಸ್ಟರ್ ಫಿಲೋಜಾನ್ ಮತ್ತು ಪುಷ್ಪ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಫಾ.ರೆ.ಜೋಸ್ ಮಾತನಾಡಿದರು. ಸಮಾರಂಭದಲ್ಲಿ ರಾಜಾಪುರ ರಿಕ್ರಿಯೇಷನ್  ಕ್ಲಬ್ ಕಾರ್ಯದರ್ಶಿ ಧನಪಾಲ್, ಖಜಾಂಚಿ ಸ್ವಾಮಿ, ಸಹಕಾರ್ಯದರ್ಶಿ ಧನಂಜಯ, ಹರ್ಡ್ಸ್ ಫೌಂಡೇಶನ್ ಸಂಸ್ಥೆಯ ಕಾರ್ಯದರ್ಶಿ ಡಿ.ಪರೀಕ್ಷಿತ್ ಕುಮಾರ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.