ಮುಂಬೈ(ಪಿಟಿಐ): `ಮುಂಬರುವ ದಿನಗಳಲ್ಲಿ ಬಡ್ಡಿ ದರ ಏರಿಕೆಯು ಹಣದುಬ್ಬರ ಅವಲಂಬಿಸಿಯೇ ಇರುತ್ತದೆ~ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಡಿ.ಸುಬ್ಬರಾವ್ ಬುಧವಾರ ಹೇಳಿದ್ದಾರೆ.
ಮೂರು ವರ್ಷಗಳ ನಂತರ ಮೊದಲ ಬಾರಿಗೆ `ಆರ್ಬಿಐ~ ರೆಪೊ ದರವನ್ನು ಮಂಗಳವಾರ ಹೊರಡಿಸಿದ ವಾರ್ಷಿಕ ಸಾಲ ನೀತಿಯಲ್ಲಿ ಶೇ. 0.50ರಷ್ಟು ತಗ್ಗಿಸಿತ್ತು.

ಮಾರ್ಚ್ನಲ್ಲಿ ಒಟ್ಟಾರೆ ಹಣದುಬ್ಬರ ದರ ಶೇ. 6.89ಕ್ಕೆ ತಗ್ಗಿದೆ. ಇದು `ಆರ್ಬಿಐ~ ಅಂದಾಜು ಮಾಡಿದ್ದ ಹಿತಕರ ಮಟ್ಟವಾದ ಶೇ. 7ಕ್ಕಿಂತಲೂ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಬಡ್ಡಿ ದರ ತಗ್ಗಿಸಲಾಗಿದೆ. ಆದರೆ, ಭವಿಷ್ಯದ ದಿನಗಳಲ್ಲಿ ಬಡ್ಡಿ ದರ ಏರಿಕೆಯು ಹಣದುಬ್ಬರದ ಏರಿಳಿತ ಅವಲಂಬಿಸಿರುತ್ತದೆ ಎಂದು ಅವರು ಹೇಳಿದ್ದಾರೆ.

2011-12ನೇ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ವೃದ್ಧಿ ದರ(ಜಿಡಿಪಿ) ಮೂರು ವರ್ಷಗಳ ಹಿಂದಿನ(ಶೇ. 6.9) ಮಟ್ಟಕ್ಕೆ ಕುಸಿದಿತ್ತು. `ಆರ್ಬಿಐ~ ಅನುಸರಿಸಿದ ಬಿಗಿ ವಿತ್ತೀಯ ಧೋರಣೆಯಿಂದ ದೇಶದ ಕೈಗಾರಿಕೆ ಪ್ರಗತಿಗೆ ಹಿನ್ನಡೆ ಉಂಟಾಗಿದೆ ಎಂದು ತಜ್ಞರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ವಾರ್ಷಿಕ ಸಾಲ ನೀತಿ ಸಂದರ್ಭದಲ್ಲಿ ಅಲ್ಪಾವಧಿ ಬಡ್ಡಿ ದರ ತಗ್ಗಿಸಿರುವುದನ್ನು ಉದ್ಯಮ ವಲಯ ಸ್ವಾಗತಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.