ಹಣದುಬ್ಬರ ಶೇ9.87ಕ್ಕೆ
ನವದೆಹಲಿ(ಪಿಟಿಐ): ತರಕಾರಿ ಧಾರಣೆಯಲ್ಲಿ ಗಣನೀಯ ಏರಿಕೆ ಆಗಿದ್ದರಿಂದ ಜೂನ್ನಲ್ಲಿನ ಚಿಲ್ಲರೆ ಹಣದುಬ್ಬರ ಶೇ 9.87ರ ಮಟ್ಟಕ್ಕೇರಿದೆ. ಮೇ ತಿಂಗಳಲ್ಲಿ ಇದು ಶೇ 9.31ರಲ್ಲಿತ್ತು.
ವರ್ಷದ ಹಿಂದಿನ ಸ್ಥಿತಿಗೆ ಹೋಲಿಸಿದರೆ ಜೂನ್ನಲ್ಲಿ ತರಕಾರಿಗಳು ಶೇ 14.55ರಷ್ಟು ತುಟ್ಟಿಯಾಗಿವೆ ಎಂಬುದನ್ನು ಹಣದುಬ್ಬರ ಅಂಕಿ-ಅಂಶಗಳು ಎತ್ತಿತೋರುತ್ತಿವೆ.
ಇದೇ ವೇಳೆ, ಆಹಾರ ಪದಾರ್ಥಗಳನ್ನು ಆಧರಿಸಿದ ಹಣದುಬ್ಬರ ಮೇ ತಿಂಗಳಲ್ಲಿ ಶೇ 10.65ರಷ್ಟಿದ್ದುದು, ಜೂನ್ನಲ್ಲಿ ಶೇ 11.84ಕ್ಕೇರಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.