ಮೈಸೂರು: ಕೇಂದ್ರ ಸರ್ಕಾರ 2020ರ ವೇಳೆಗೆ ತಂಬಾಕು ಬೆಳೆಯನ್ನು ಶೇ 50ರಷ್ಟು ತಗ್ಗಿಸಬೇಕು ಎಂದು ಸೂಚಿಸಿರುವ ಹಿನ್ನೆಲೆಯಲ್ಲಿ ಹಾಗೂ ರಾಜ್ಯ ಸರ್ಕಾರ ಗುಟ್ಕ ನಿಷೇಧ ಮಾಡಿದ್ದರಿಂದ ಎಚ್ಚೆತ್ತುಕೊಂಡಿರುವ ರೈತರು ತೋಟಗಾರಿಕೆ ಬೆಳೆ ಬೆಳೆಯುವತ್ತ ಆಸಕ್ತಿ ವಹಿಸುತ್ತಿದ್ದಾರೆ.

ಉತ್ಕೃಷ್ಟ ದರ್ಜೆಯ `ವರ್ಜೀನಿಯಾ' ತಂಬಾಕು ಬೆಳೆಯುವಲ್ಲಿ ಜಿಲ್ಲೆಯ ಎಚ್.ಡಿ. ಕೋಟೆ, ಪಿರಿಯಾಪಟ್ಟಣ ಮತ್ತು ಹುಣಸೂರು ತಾಲ್ಲೂಕುಗಳು ಪ್ರಸಿದ್ಧಿ ಪಡೆದಿವೆ. ಕೇಂದ್ರ ತಂಬಾಕು ಮಂಡಳಿ ಈಗಾಗಲೇ ಹಲವು ಬಾರಿ ಸಭೆಗಳನ್ನು ನಡೆಸಿ, ಪರ್ಯಾಯ ಬೆಳೆಗಳತ್ತ ಚಿತ್ತ ಹರಿಸುವಂತೆ ಜಿಲ್ಲೆಯ ರೈತರ ಮನವೊಲಿಸುತ್ತ ಬಂದಿದೆ. ಅಂತೆಯೇ, ನಷ್ಟದಿಂದ ಪಾರಾಗಲು ಮುಂದಾಗಿರುವ ರೈತರು ಪಪ್ಪಾಯ, ಬಾಳೆಹಣ್ಣು, ತರಕಾರಿ ಹಾಗೂ ಗುಲಾಬಿ ಬೆಳೆಗಳತ್ತ ಚಿತ್ತ ಹರಿಸಿದ್ದಾರೆ.

ಜಿಲ್ಲಾ ತೋಟಗಾರಿಕಾ ಇಲಾಖೆಯು `ಸಮಗ್ರ ತೋಟಗಾರಿಕೆ ಅಭಿವೃದ್ಧಿ ಕಾರ್ಯಕ್ರಮ' (ಸಿಎಚ್ಡಿಪಿ) ಯೋಜನೆಯಡಿ ತೋಟಗಾರಿಕಾ ಬೆಳೆಗಳನ್ನು ಬೆಳೆಯುವಂತೆ ಕಳೆದ ಎರಡು ವರ್ಷಗಳಿಂದ ರೈತರ ಮನವೊಲಿಸುವ ಕೆಲಸದಲ್ಲಿ ನಿರತವಾಗಿದೆ. ಹೀಗಾಗಿ, ಕೆ.ಆರ್. ನಗರ ತಾಲ್ಲೂಕು ಸಾಲಿಗ್ರಾಮ ಹೋಬಳಿಯ 33 ಹಳ್ಳಿಗಳ ಪೈಕಿ ಐದು ಹಳ್ಳಿಗಳಾದ ಪಶುಪತಿ, ಮಾವನೂರ, ಗುಮ್ಮನಹಳ್ಳಿ, ಕೇದಗ ಮತ್ತು ಶಿಗವಾಳು ಗ್ರಾಮದ ರೈತರು ಈಗಾಗಲೇ ಬಾಳೆ ಫಸಲು ಬೆಳೆಯುತ್ತಿದ್ದಾರೆ. ಸಾಲಿಗ್ರಾಮ ಹೋಬಳಿಯು 1109.49 ಹೆಕ್ಟೇರ್ ಭೂಮಿಯನ್ನು ಹೊಂದಿದ್ದು, ಇದರಲ್ಲಿ 308 ಎಕರೆ ಒಣಭೂಮಿ ಇದೆ. ಸದ್ಯ 130ಕ್ಕೂ ಹೆಚ್ಚು ಎಕರೆಯಲ್ಲಿ ಬಾಳೆ ಹಾಗೂ ಹುಣಸೂರು, ಪಿರಿಯಾಪಟ್ಟಣದಲ್ಲಿ 50ಕ್ಕೂ ಹೆಚ್ಚು ಎಕರೆಯಲ್ಲಿ ಪಪಾಯ ಬೆಳೆಯಲಾಗುತ್ತಿದೆ.

ತೋಟಗಾರಿಕಾ ಇಲಾಖೆಯು ಕ್ಲಸ್ಟರ್ಗಳನ್ನು (ಗುಂಪುಗಳು) ರಚಿಸಿದ್ದು, ಆ ಮೂಲಕ ರೈತರಿಗೆ ಅಗತ್ಯ ಮಾಹಿತಿ ನೀಡುತ್ತಿದೆ. ಕೆ.ಆರ್. ನಗರದಲ್ಲಿ ಬಾಳೆ ಕ್ಲಸ್ಟರ್, ಹುಣಸೂರಿನಲ್ಲಿ ಪಪಾಯ ಮತ್ತು ತರಕಾರಿ ಕ್ಲಸ್ಟರ್ ಹಾಗೂ ಪಿರಿಯಾಪಟ್ಟಣದಲ್ಲಿ ಬಾಳೆಹಣ್ಣಿನ ಕ್ಲಸ್ಟರ್ ರಚಿಸಲಾಗಿದೆ. ಇದರಿಂದಾಗಿ ರೈತರಿಗೆ ವಿಪುಲ ಮಾಹಿತಿ ದೊರೆಯುತ್ತಿದ್ದು, ಪರ್ಯಾಯ ಬೆಳೆಗಳಿಂದ `ಕೈತುಂಬ ಹಣ' ಸಂಪಾದಿಸಬಹುದು ಎಂಬುದು ಮನವರಿಕೆಯಾಗಿದೆ.

`ಬಾಳೆ ಬೆಳೆಯಿಂದ ಒಂದು ಎಕರೆಯಲ್ಲಿ ವಾರ್ಷಿಕ ರೂ. 2 ಲಕ್ಷವರೆಗೆ ಲಾಭ ಬರುತ್ತದೆ. ಆದರೆ, ತಂಬಾಕು ಬೆಳೆದರೆ ರೂ. 1 ಲಕ್ಷ ಲಾಭ ಬರುವುದೂ ಕಷ್ಟ. ಅಲ್ಲದೇ, ತಂಬಾಕು ಬೆಳೆಯಲು ಹೆಚ್ಚಿನ ಕೂಲಿಕಾರ್ಮಿಕರು, ಕಟ್ಟಿಗೆ ಬೇಕಾಗುತ್ತದೆ. ಹೀಗಾಗಿ, ತಂಬಾಕು ಬದಲಿಗೆ ಬಾಳೆ ಬೆಳೆಯುವುದೇ ಲೇಸು ಎಂಬ ಅಭಿಪ್ರಾಯಕ್ಕೆ ಕೆಲವು ರೈತರು ಬಂದಿದ್ದಾರೆ' ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

`ರೈತರಿಗೆ ತೋಟ-ನೋಟ ಕಾರ್ಯಕ್ರಮದ ಮೂಲಕ ಮಾಹಿತಿ ನೀಡಲಾಗುತ್ತಿದೆ. ಗುಂಪು ರಚನೆ ಮಾಡಿ ರೈತರಿಗೆ ಅರಿವು ಮೂಡಿಸಲಾಗುತ್ತಿದೆ. ಬಾಳೆ, ಪಪಾಯ, ಗುಲಾಬಿ ಮತ್ತು ತರಕಾರಿ ಬೆಳೆಯುವಂತೆ ಸೂಚಿಸಲಾಗಿದೆ. ಇದಕ್ಕೆಂದೇ, ಪ್ರತಿ ತಾಲ್ಲೂಕಿನಲ್ಲಿ ಎರಡು ಕ್ಲಸ್ಟರ್ಗಳನ್ನು ರಚಿಸಲಾಗುತ್ತಿದೆ. ಹನಿ ನೀರಾವರಿ ಮೂಲಕ ಇಳುವರಿ ಹೆಚ್ಚಿಸಿ, ಆರ್ಥಿಕವಾಗಿ ರೈತರನ್ನು ಸಬಲರನ್ನಾಗಿಸುವ ಪ್ರಯತ್ನ ನಡೆದಿದೆ' ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ನಾಗರಾಜ್ `ಪ್ರಜಾವಾಣಿ'ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.