ಭಾನುವಾರ, ಜೂನ್ 20, 2021
20 °C

ಹಣ ಸಂಪಾದನೆ ಭರಾಟೆ; ಮೌಲ್ಯಗಳ ಅಳಿವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಣನೂರು: ಹಣ ಸಂಪಾದನೆ ಭರಾಟೆಯಲ್ಲಿ ಮಾನವೀಯತೆ, ಆದರ್ಶ, ಜೀವನ ಮೌಲ್ಯಗಳು ನಶಿಸುತ್ತಿವೆ ಎಂದು ಕೆಸವತ್ತೂರು ಸಿದ್ದಲಿಂಗೇಶ್ವರ ವಿರಕ್ತ ಮಠದ ಬಸವರಾಜೇಂದ್ರ ಸ್ವಾಮೀಜಿ  ನುಡಿದರು. ಮಲ್ಲಿಪಟ್ಟಣ ಹೋಬಳಿ ದೊಡ್ಡಬೆಮ್ಮತ್ತಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೋಮವಾರಪೇಟೆ ವಲಯದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಹಂಡ್ರಂಗಿ ಮತ್ತು ದೊಡ್ಡಬೆಮ್ಮತ್ತಿ ಒಕ್ಕೂಟಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.ಜನರು ಒಳ್ಳೆಯ ನಡೆ- ನುಡಿ, ಮಹನೀಯರ ಆದರ್ಶ ಪಾಲಿಸಿ ಸನ್ಮಾರ್ಗದಲ್ಲಿ ನಡೆಯಬೇಕು. ಬಡ ವರು, ದುರ್ಬಲರ ಸೇವೆಗೆ ಬದುಕು, ಜೀವನ ಮುಡು ಪಾಗಿಡಬೇಕು. ಆಗ ಸಮಾಜ ಪರಿವರ್ತನೆ ಯಾಗಿ ಮಾನವ ಜನ್ಮ ಸಾರ್ಥಕ ಎನಿಸಿಕೊಳ್ಳುತ್ತದೆ ಎಂದರು.ದೊಡ್ಡಬೆಮ್ಮತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಲಿಂಗೇಗೌಡ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಗಾಂಧೀಜಿಯವರು ಕಂಡ ಕನಸನ್ನು ನನಸಾಗಿಸುವತ್ತ ಹೆಜ್ಜೆ ಹಾಕಿದೆ ಎಂದರು.ಪ್ರಾಂಶುಪಾಲ ಜಯದೇವಪ್ಪ ಮಾತನಾಡಿ, ಸಂಘ- ಸಂಸ್ಥೆಗಳು ಮೂಲ ಉದ್ದೇಶ ಮರೆತು ಸ್ವಹಿತಾಸಕ್ತಿಯಲ್ಲಿ ತೊಡಗಿಕೊಳ್ಳುವುದು ಒಳ್ಳೆಯ ಬೆಳವಣಿಗೆಯಲ್ಲ. ಪ್ರಸ್ತುತ ನೊಂದಾಯಿತ ಸಂಘಗಳು ಯಾವುದೇ ರಾಜಕೀಯ ಪಕ್ಷಗಳ ಮರ್ಜಿಗೆ ಒಳಗಾಗದೇ ಗುರಿ ಸಾಧನೆಯತ್ತ ಕಾರ್ಯೋನ್ಮುಖವಾಗಬೇಕು ಎಂದು ಸಲಹೆ ನೀಡಿದರು.ಯೋಜನಾಧಿಕಾರಿ ಎಂ. ಸತೀಶ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಡಿ.ಪಿ. ಶಿವರಾಜ್, ತಾ.ಪಂ. ಸದಸ್ಯೆ ಮಾಕಮ್ಮ ಜವರೇಗೌಡ, ಹೊಳಲಗೋಡು ಗ್ರಾ.ಪಂ. ಅಧ್ಯಕ್ಷೆ ಹೇಮಲತ ಸದಾಶಿವಪ್ಪ, ಉಪಾಧ್ಯಕ್ಷ ಚನ್ನಿಗರಾಮ, ಸದಸ್ಯ ರವಿ  ಇತರರ ಇದ್ದರು. ಚನ್ನವೀರಪ್ಪ ಸ್ವಾಗತಿಸಿ, ಲೋಕೇಶ್ ವರದಿ ಮಂಡಿಸಿ, ಜಗದೀಶ್ ನಿರೂಪಿಸಿ, ಕೆಸವತ್ತೂರು ಪ್ರದೀಪ್ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.