ಬಾಗಲಕೋಟೆ: ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಹದ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆ ಚುರುಕುಗೊಂಡದೆ. ರೈತರು ಹೊಲವನ್ನು ಸ್ವಚ್ಛಗೊಳಿಸಿ ಹೆಸರು ಮತ್ತು ಸೋಯಾ ಬಿತ್ತನೆ ಪ್ರಾರಂಭಿಸಿದ್ದಾರೆ. ಜಿಲ್ಲೆಯ ರೈತರು ಈ ಬಾರಿ ಉತ್ತಮ ಮಳೆ-ಬೆಳೆಯ ಆಶಯ ಹೊಂದಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ 306 ಹೆಕ್ಟೇರ್ನಲ್ಲಿ ಸೋಯಾ, 706 ಹೆಕ್ಟೇರ್ನಲ್ಲಿ ಹೆಸರು, 500 ಹೆಕ್ಟೇರ್ನಲ್ಲಿ ತೊಗರಿ ಬಿತ್ತನೆಯಾಗಿದ್ದು, ಹೆಸರು ಮತ್ತು ಸೋಯಾ ಬಿತ್ತನೆಗೆ ಮುಂದಿನ ಎರಡು ವಾರಗಳ ಕಾಲಾವಕಾಶ ರೈತರಿಗೆ ಇದೆ.

ಜಿಲ್ಲೆಯಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ 81.8 ಮಿ.ಮೀ. ಮಳೆಯಾಗಿದೆ. ಅಂದರೆ, ಶೇ 92ರಷ್ಟು ಉತ್ತಮ ಮಳೆಯಾಗಿದ್ದು, ರೈತರು ಖುಷಿಯಾಗಿದ್ದಾರೆ. ಬಾದಾಮಿ ತಾಲ್ಲೂಕಿನಲ್ಲಿ 126.2 ಮಿ.ಮೀ., ಬಾಗಲಕೋಟೆ 94.9, ಬೀಳಗಿ 110.6, ಹುನಗುಂದ 72.6, ಜಮಖಂಡಿ 107.8, ಮುಧೋಳ 92.7 ಮಿ.ಮೀ.ಮಳೆ ದಾಖಲಾಗಿದೆ.

ಬಿತ್ತನೆ ಗುರಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 2.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ 1,45,900 ಹೆಕ್ಟೇರ್ ನೀರಾವರಿ ಮತ್ತು 94,100 ಹೆಕ್ಟೇರ್ ಮಳೆಯಾಶ್ರಿತ ಕ್ಷೇತ್ರದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ಸದ್ಯ 82,800 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಉಳಿದಂತೆ ಮುಂಗಾರು ಹಂಗಾಮಿನ ಬೇರೆ ಬೆಳೆಗಳ ಬಿತ್ತನೆ ಕಾರ್ಯ ಪ್ರಾರಂಭವಾಗಿದೆ.

ಬೀಜಗಳ ಕೊರತೆ ಇಲ್ಲ: ಬಿತ್ತನೆ ಬೀಜ ಪೂರೈಕೆ ಕುರಿತು `ಪ್ರಜಾವಾಣಿ'ಗೆ ಸೋಮವಾರ ಮಾಹಿತಿ ನೀಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಗುರುಮೂರ್ತಿ, `ಮುಂಗಾರು ಹಂಗಾಮಿಗಾಗಿ ಇದುವರೆಗೆ 8.97 ಕ್ವಿಂಟಾಲ್ ಹೈಬ್ರೀಡ್ ಜೋಳ, 146 ಕ್ವಿಂಟಾಲ್ ಮೆಕ್ಕೆ ಜೋಳ, 16.27 ಕ್ವಿಂಟಾಲ್ ಸಜ್ಜೆ, 6.2 ಕ್ವಿಂಟಾಲ್ ತೊಗರಿ, 67.2 ಕ್ವಿಂಟಾಲ್ ಹೆಸರು, 4.24 ಕ್ವಿಂಟಾಲ್ ಸೂರ್ಯಕಾಂತಿ ಹಾಗೂ 1182.11 ಕ್ವಿಂಟಾಲ್ ಸೋಯಾ ಅವರೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಮಾಡಲಾಗಿದೆ' ಎಂದರು.

`ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ 23.31 ಕ್ವಿಂಟಾಲ್ ಹೈಬೀಡ್ ಜೋಳ, 1876.2 ಕ್ವಿಂಟಾಲ್ ಮೆಕ್ಕೆ ಜೋಳ, 128.31 ಕ್ವಿಂಟಾಲ್ ಸಜ್ಜೆ, 113.55 ಕ್ವಿಂಟಾಲ್ ತೊಗರಿ, 209.15 ಕ್ವಿಂಟಾಲ್ ಹೆಸರು, 42.86 ಕ್ವಿಂಟಾಲ್ ಸೂರ್ಯಕಾಂತಿ ಹಾಗೂ 678.79 ಕ್ವಿಂಟಾಲ್ ಸೋಯಾ ಅವರೆ ಬೀಜ ಲಭ್ಯವಿದೆ. ಯಾವುದೇ ಬೀಜಗಳ ಕೊರತೆ ಇಲ್ಲ' ಎಂದರು.

ರಸಗೊಬ್ಬರ: `ಜಿಲ್ಲೆಗೆ ಇದುವರೆಗೆ 6508 ಮೆಟ್ರಿಕ್ ಟನ್ ಯೂರಿಯಾ, 705 ಮೆಟ್ರಿಕ್ ಟನ್ ಡಿಎಪಿ, 417 ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ಮತ್ತು 728 ಮೆಟ್ರಿಕ್ ಟನ್ ಪೊಟ್ಯಾಶ್ ಪೂರೈಕೆಯಾಗಿದೆ. ಕಾಪು ದಾಸ್ತಾನು ಯೋಜನೆಯಡಿ ಜಿಲ್ಲೆಯಲ್ಲಿ 1,14, 425 ಮೆಟ್ರಿಕ್ ಟನ್ ಯೂರಿಯಾ, 6449 ಮೆಟ್ರಿಕ್ ಟನ್ ಡಿಎಪಿ, 7800 ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ಮತ್ತು 2364 ಮೆಟ್ರಿಕ್ ಟನ್ ಎಂಒಪಿ ರಸಗೊಬ್ಬರ ದಾಸ್ತಾನಿದೆ' ಎಂದರು.

`ಜಿಲ್ಲೆಯ ಖಾಸಗಿ ಮಾರಾಟಗಾರರಲ್ಲಿ 5814 ಮೆಟ್ರಿಕ್ ಟನ್ ಯೂರಿಯಾ, 5502 ಮೆಟ್ರಿಕ್ ಟನ್ ಡಿಎಪಿ, 9333 ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ಮತ್ತು 4817 ಮೆಟ್ರಿಕ್ ಟನ್ ಎಂಒಪಿ ರಸಗೊಬ್ಬರ ದಾಸ್ತಾನಿದೆ' ಎಂದರು.

`ಜಿಲ್ಲೆಯಲ್ಲಿ ರಸಗೊಬ್ಬರ ದಾಸ್ತಾನು ಕೂಡ ಸಮರ್ಪಕವಾಗಿದ್ದು, 56,504 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರ ದಾಸ್ತಾನಿದೆ' ಎಂದು ಹೇಳಿದರು.

ಬೆಳೆಹಾನಿ ಪರಿಹಾರ: `2012-13 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಬೆಳೆಹಾನಿಗೊಳಗಾದ ರೈತರಿಗೆ ಹಂಚಲು ್ಙ3.11 ಕೋಟಿ ಪರಿಹಾರ ಧನ ಮಂಜೂರಾಗಿದ್ದು, ಅದರಲ್ಲಿ ನೀರಾವರಿ ಕ್ಷೇತ್ರದಲ್ಲಿ ಬೆಳೆ ಹಾನಿ ಪರಿಹಾರಕ್ಕೆ ್ಙ 2.44 ಕೋಟಿ ಮತ್ತು ಮಳೆಯಾಶ್ರಿತ ಕ್ಷೇತ್ರದಲ್ಲಿ ಬೆಳೆ ಹಾನಿ ಪರಿಹಾರಕ್ಕೆ ್ಙ1.6 ಕೋಟಿ ಮಂಜೂರಾಗಿದ್ದು, ಆಯಾ ತಹಶೀಲ್ದಾರರ ಮುಖಾಂತರ ಶೀಘ್ರದಲ್ಲಿ ಅರ್ಹ ಫಲಾನುಭವಿ ರೈತರ ಬ್ಯಾಂಕ್ ಅಕೌಂಟಿಗೆ ಹಂಚಿಕೆ ಮಾಡಲಾಗುತ್ತದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.