ಈತ ಹಫೀಜ್ ಮೊಹ್ಮದ್ ಸಯೀದ್. ಮುಂಬೈ ಮೇಲೆ 2008ರಲ್ಲಿ ನಡೆದ ಅಮಾನುಷ ಭಯೋತ್ಪಾದಕರ ದಾಳಿಯ ರೂವಾರಿ. ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆಯ ಸಂಸ್ಥಾಪಕ. ಭಾರತ ಮತ್ತು ಅಮೆರಿಕದ ವಿರುದ್ಧ ಸದಾ ನಂಜು ಕಾರುತ್ತ ಸುದ್ದಿಯಲ್ಲಿರುವ ಈತ ಈಗ ಮತ್ತೆ ವಿಶ್ವದ ಗಮನ ಸೆಳೆದಿದ್ದಾನೆ. ಇವನ ಬಗ್ಗೆ ಸುಳಿವು ನೀಡುವವರಿಗೆ ಅಮೆರಿಕ ಸರ್ಕಾರ 1 ಕೋಟಿ ಡಾಲರ್ (ಸುಮಾರು 52 ಕೋಟಿ ರೂಪಾಯಿ) ಇನಾಮು ಘೋಷಿಸಿದೆ!

ಬಹುಮಾನದ ವಿಷಯದಲ್ಲೂ ಗೊಂದಲ ಇತ್ತು. ಹಫೀಜ್ ತಲೆಗೆ ಈ ಬಹುಮಾನ ಎಂದು ಅನೇಕರು ವ್ಯಾಖ್ಯಾನಿಸಿದ್ದರು. ಆದರೆ ಈತ ಪಾಕಿಸ್ತಾನದಲ್ಲಿ ಪ್ರಚೋದನಕಾರಿ ಭಾಷಣ ಬಿಗಿಯುತ್ತ ರಾಜಾರೋಷವಾಗಿ ತಿರುಗಾಡಿಕೊಂಡಿರುವುದರಿಂದ ನಂತರ ಅಮೆರಿಕ ಸರ್ಕಾರ ಸ್ಪಷ್ಟನೆ ನೀಡಿ ಈ ಮೊತ್ತ `ಅವನನ್ನು ಹಿಡಿದು ಒಪ್ಪಿಸುವುದಕ್ಕೆ ಅಲ್ಲ, ಅವನನ್ನು ಬಂಧಿಸಿ ಜೈಲಿಗೆ ಹಾಕಲು ಬೇಕಾದ ಸಾಕ್ಷ್ಯ ಒದಗಿಸಿಕೊಡುವವರಿಗೆ~ ಎಂದು ತಿಳಿಸಿದೆ.

ಕಳೆದ ಸೋಮವಾರ ಅಮೆರಿಕದ ವಿದೇಶಾಂಗ ಖಾತೆ ರಾಜಕೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ವೆಂಡಿ ಆರ್ ಶೆರ್ಮನ್ ಭಾರತಕ್ಕೆ ಬಂದಿದ್ದರು. ಸುದ್ದಿಗೋಷ್ಠಿಯಲ್ಲಿ ತಮ್ಮ ದೇಶದ ಸರ್ಕಾರದ ಪರವಾಗಿ ಬಹುಮಾನದ ವಿಷಯ ಪ್ರಕಟಿಸಿದರು. ಇದರ ಜತೆಗೇ ಹಫೀಜ್ನ ಮೈದುನ ಅಬ್ದುಲ್ ರೆಹ್ಮಾನ್ ಮಕ್ಕಿಯನ್ನು ಹಿಡಿದುಕೊಟ್ಟವರಿಗೆ 20 ಲಕ್ಷ ಡಾಲರ್ (ಸುಮಾರು 10 ಕೋಟಿ ರೂ) ಬಹುಮಾನ ಘೋಷಿಸಿದರು.

ಹಫೀಜ್ ಸಯೀದ್ನನ್ನು ಬಂಧಿಸುವಂತೆ ಪದೇಪದೇ ಪಾಕ್ಗೆ ಒತ್ತಾಯಿಸುತ್ತಲೇ ಬಂದ ಭಾರತಕ್ಕೆ ಇದರಿಂದ ನಿಜವಾಗಿಯೂ ಸಂತೋಷವಾಗಿದೆ. ಮುಂಬೈ ಮೇಲೆ ದಾಳಿ ಮಾಡಿ 163 ಅಮಾಯಕರ ಸಾವಿಗೆ ಕಾರಣವಾದ ಲಷ್ಕರ್ ತೊಯ್ಬಾಗೆ ಇದೊಂದು ಕಟ್ಟುನಿಟ್ಟಿನ ಎಚ್ಚರಿಕೆ ಮತ್ತು ಭಾರತ- ಅಮೆರಿಕ ನಡುವಿನ ರಕ್ಷಣಾ ಮೈತ್ರಿ ವೃದ್ಧಿಯ ಸಂಕೇತ ಎಂದು ವಿಶ್ಲೇಷಿಸಿದೆ.

ಆದರೆ ಈ ಬಹುಮಾನ ಘೋಷಣೆ ಅಮೆರಿಕ ಮತ್ತು ಪಾಕ್ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸುವ ಲಕ್ಷಣಗಳಿವೆ. ಕಳೆದ ನವೆಂಬರ್ನಲ್ಲಿ ಅಮೆರಿಕದ ಯುದ್ಧವಿಮಾನಗಳು ಹಾಕಿದ ಬಾಂಬ್ಗೆ ಪಾಕ್ನ 24 ಸೈನಿಕರು ಬಲಿಯಾಗಿದ್ದರು.

ಇದರ ನಂತರ ಎರಡೂ ದೇಶಗಳ ಸಂಬಂಧ ಹಳಸುತ್ತಲೇ ನಡೆದಿದೆ.
ಹಫೀಜ್ನ ಬೆಂಬಲಿಗರಿಂದಲೂ ವ್ಯಂಗ್ಯದ ಪ್ರತಿಕ್ರಿಯೆ ಬಂದಿದೆ. ಇದು `ಏಪ್ರಿಲ್ ಫೂಲ್~ ಎಂದು ಅವರು ಮೂದಲಿಸಿದ್ದಾರೆ. ಹಫೀಜ್ ಏನೂ ತಲೆ ಮರೆಸಿಕೊಂಡಿಲ್ಲ ಎಂದು ಅಮೆರಿಕಕ್ಕೇ ಸವಾಲೆಸೆದಿದ್ದಾರೆ. `ಹಫೀಜ್ ಭೂಗತನಾಗಿಲ್ಲ. ರಹಸ್ಯವಾಗಿ ಬದುಕುತ್ತಿಲ್ಲ. ಸ್ವತಂತ್ರ ಪ್ರಜೆಯಾಗಿ ಪಾಕ್ನಲ್ಲಿ ವಾಸವಾಗಿದ್ದಾನೆ~ ಎಂದು ಧರ್ಮಾರ್ಥ ಸಂಸ್ಥೆಯ ಮುಖವಾಡ ಹಾಕಿಕೊಂಡು ಲಷ್ಕರ್ ಎ ತೊಯ್ಬಾದ ಹಿತಾಸಕ್ತಿ ಕಾಯುತ್ತಿರುವ ಜಮಾತ್ ಉದ್ ದವ್ವಾ ಹೇಳಿದೆ.

ಅಮೆರಿಕ `ನ್ಯಾಯಕ್ಕಾಗಿ ಪುರಸ್ಕಾರ~ ಯೋಜನೆಯಡಿ 1984ರಿಂದ ಇದುವರೆಗೆ ಕ್ರಿಮಿನಲ್ಗಳ ಬಗ್ಗೆ ಸುಳಿವು ನೀಡಿದ 70 ಮಾಹಿತಿದಾರರಿಗೆ 10 ಕೋಟಿ ಡಾಲರ್ (ಸುಮಾರು 520 ಕೋಟಿ ರೂ) ಬಹುಮಾನ ವಿತರಿಸಿದೆ. ಆದರೆ ಲಷ್ಕರ್ ಎ ತೊಯ್ಬಾ ಸ್ಥಾಪಿಸುವುದಕ್ಕೂ ಮುನ್ನ ಎಂಜಿನಿಯರಿಂಗ್ ಕಾಲೇಜು ಅಧ್ಯಾಪಕನಾಗಿದ್ದ 61 ವರ್ಷದ ಹಫೀಜ್ ತಲೆಗೆ ಬಹುಮಾನ ಘೋಷಣೆ ಮಾಡಿರುವುದು ಮಾತ್ರ ಸ್ವಲ್ಪ ವಿಭಿನ್ನ. ಏಕೆಂದರೆ ಆತ ಎಲ್ಲಿದ್ದಾನೆ, ಏನು ಮಾಡುತ್ತಾನೆ ಎಂಬುದು ರಹಸ್ಯವಾಗೇನಿಲ್ಲ.

ಅಮೆರಿಕ ಬೆನ್ನುಹತ್ತಿರುವ, ತಲೆಗೆ ಇನಾಮು ಘೋಷಿಸಿರುವ ಉಗ್ರರ, ವಿಧ್ವಂಸಕರ ಪಟ್ಟಿಯಲ್ಲಿ ಅಲ್ ಖೈದಾ ಮುಖ್ಯಸ್ಥ ಅಯ್ಮನ್ ಅಲ್ ಜವಾಹರಿ (130 ಕೋಟಿ ರೂ), ತಾಲಿಬಾನ್ ಮುಖ್ಯಸ್ಥ ಮುಲ್ಲಾ ಒಮರ್ (52 ಕೋಟಿ ರೂ) ಇದ್ದಾರೆ. ಆದರೆ ಹಫೀಜ್ ಇವರಿಬ್ಬರಂತೆ ಭೂಗತನಾಗಿಲ್ಲ. ಬದಲಾಗಿ ಲಾಹೋರ್ ಪಟ್ಟಣದ ಅಂಚಿನ ಐಷಾರಾಮಿ ಬಂಗಲೆಯಿಂದ ತನ್ನ ಕಾರ್ಯ ಚಟುವಟಿಕೆ ನಡೆಸುತ್ತಿದ್ದಾನೆ.

ಅಮೆರಿಕ ಸರ್ಕಾರ ಇನಾಮು ಘೋಷಿಸಿದ ಬೆನ್ನಲ್ಲೇ ಅಂದರೆ ಮಂಗಳವಾರ ಸಂಜೆ ಆತ ಪಾಕಿಸ್ತಾನದ ಅನೇಕ ಟಿವಿ ಚಾನೆಲ್ಗಳಿಗೆ ನೇರ ಸಂದರ್ಶನ ನೀಡಿದ. `ಇದು ಹಾಸ್ಯಾಸ್ಪದ. ಪಾಕ್ನ ಬದ್ಧ ವೈರಿ ಭಾರತದ ಮಾತು ಕೇಳಿ ಅಮೆರಿಕ ತೆಗೆದುಕೊಂಡ ಮೂರ್ಖ ನಿರ್ಧಾರ~ ಎಂದು ಗೇಲಿ ಮಾಡಿದ. `ಪಾಕಿಸ್ತಾನದಲ್ಲಿ ನನ್ನ ವಿರುದ್ಧ ಒಂದೇ ಒಂದು ಪ್ರಕರಣ, ಪೊಲೀಸ್ ವರದಿ ತೋರಿಸಲಿ~ ಎಂದು ಸವಾಲು ಹಾಕಿದ.

ಉಗ್ರರು, ಜಿಹಾದಿಗಳು, ಧಾರ್ಮಿಕ ಪಕ್ಷಗಳು ಮತ್ತು ಮತೀಯವಾದಿ ರಾಜಕಾರಣಿಗಳನ್ನು ಒಂದುಗೂಡಿಸಿ ಕಳೆದ ಜನವರಿಯಿಂದ ಪಾಕ್ನ ವಿವಿಧ ಕಡೆ ರ್ಯಾಲಿ ನಡೆಸುತ್ತಿರುವ `ಡಿಫೆನ್ಸ್ ಆಫ್ ಪಾಕಿಸ್ತಾನ್ ಕೌನ್ಸಿಲ್~ನ ಚಟುವಟಿಕೆ ಹೆಚ್ಚುತ್ತಿರುವುದು ಕೂಡ ಅಮೆರಿಕದ ತೀರ್ಮಾನದ ಹಿಂದೆ ಕೆಲಸ ಮಾಡಿರಲೂಬಹುದು. ಏಕೆಂದರೆ ಈ ರ್ಯಾಲಿಗಳ ಉದ್ದೇಶವೇ ಅಮೆರಿಕ ವಿರೋಧಿ ಭಾವನೆ ಕೆರಳಿಸುವುದು, ಅಮೆರಿಕದ ಜತೆ ಪಾಕ್ ಮತ್ತೆ ಸೌಹಾರ್ದ ಸಂಬಂಧದ ಮಾತುಕತೆಗೆ ಮುಂದಾಗದಂತೆ ಹಾಗೂ ನವೆಂಬರ್ನಿಂದ ಅಮೆರಿಕ ನೇತೃತ್ವದ ನ್ಯಾಟೊ ಪಡೆಗಳಿಗೆ ಸರಕು ಸಾಗಣೆ ಮಾರ್ಗ ಸ್ಥಗಿತಗೊಳಿಸಿರುವ ಕ್ರಮವನ್ನು ಸಡಿಲಗೊಳಿಸದಂತೆ ಪಾಕ್ ಸರ್ಕಾರದ ಮೇಲೆ ಒತ್ತಡ ಹೇರುವುದು, ಪಾಕ್ ಪಾರ್ಲಿಮೆಂಟ್ನಲ್ಲಿ ನಡೆಯುತ್ತಿರುವ ಚರ್ಚೆಗಳ ಮೇಲೆ ಪ್ರಭಾವ ಬೀರುವುದು.

ಹಫೀಜ್ನ ಪೊಗರು ಇಳಿಸಿ ವರ್ಚಸ್ಸನ್ನು ಕುಂದಿಸುವುದೇ ಅಮೆರಿಕ ಘೋಷಿಸಿದ ಇನಾಮಿನ ತಕ್ಷಣದ ಗುರಿ. ಅವನಿಗೆ ಲಗಾಮು ಹಾಕುವಂತೆ ಪಾಕ್ ಮೇಲೆ ಒತ್ತಡ ಹಾಕುವ ತಂತ್ರವೂ ಇದರ ಹಿಂದಿದೆ. ರ್ಯಾಲಿಗಳಲ್ಲಿ ಹಫೀಜ್ ಭಾಗವಹಿಸುವುದರಿಂದ ಅಮೆರಿಕ ಕಳವಳಗೊಂಡಿದೆ. ಆದ್ದರಿಂದ `ಅವನನ್ನು ನಿಯಂತ್ರಿಸಿ~ ಎಂದು ಪಾಕ್ ಸೇನೆಯ ಬೇಹುಗಾರಿಕಾ ದಳ ಐಎಸ್ಐಗೆ ಸೂಚಿಸಲು ಬಯಸುತ್ತಿದೆ ಎಂದು ವ್ಯಾಖ್ಯಾನಿಸುತ್ತಾರೆ ವಾಷಿಂಗ್ಟನ್ನ ಅಮೆರಿಕನ್ ವಿವಿ ಸಹಾಯಕ ಅಧ್ಯಾಪಕ ಮತ್ತು `ಲಷ್ಕರ್ ಎ ತೊಯ್ಬಾ~ ಕೃತಿಯ ಲೇಖಕ ಸ್ಟೀಫನ್ ಟಂಕೆಲ್.

ಇದೆಲ್ಲ ಏನೇ ಇದ್ದರೂ ಪಾಕಿಸ್ತಾನದಲ್ಲಿ ಕಳೆದೊಂದು ದಶಕದಿಂದ ಸೇನೆಯ ನೇರ ಅಥವಾ ಪರೋಕ್ಷ ಕುಮ್ಮಕ್ಕಿನಿಂದ ನಾಯಿಕೊಡೆಗಳಂತೆ ಬೆಳೆದ ಉಗ್ರಗಾಮಿ ಗುಂಪುಗಳು ಸರ್ಕಾರಕ್ಕೆ ತಂದಿಟ್ಟ ತಲೆನೋವಿನ ಪ್ರಾತಿನಿಧಿಕ ಸ್ವರೂಪ ಈ ಹಫೀಜ್.

ಹಿಂದೆ ಸೇನಾ ಸರ್ವಾಧಿಕಾರಿಯಾಗಿದ್ದ ಜನರಲ್ ಪರ್ವೇಜ್ ಮುಷರಫ್ 2002ರಲ್ಲಿ ಲಷ್ಕರ್ ಎ ತೊಯ್ಬಾವನ್ನು ನಿಷೇಧಿಸಿದ್ದರು. ಆದರೂ ಅದು ಜಮಾತ್ ಉದ್ ದವ್ವಾ ಎಂಬ ಸೇವಾ ಸಂಘಟನೆ ಸೋಗಿನಲ್ಲಿ ಮತ್ತೆ ಪ್ರವರ್ಧಮಾನಕ್ಕೆ ಬಂತು. ಗೃಹ ಬಂಧನದ ಮೂಲಕ ಹಫೀಜ್ನ ಚಲನವಲನ ನಿಯಂತ್ರಿಸುವ, ವಿಫಲ ದಾಳಿಗಳಲ್ಲಿ ಆತನ ಕೈವಾಡವನ್ನು ಮುಂದಿಟ್ಟು ಜೈಲಿಗೆ ತಳ್ಳುವ ಕ್ರಮಗಳು ನಿರರ್ಥಕವಾದವು.

2008ರಿಂದಲೂ ವಿಶ್ವಸಂಸ್ಥೆಯ ನಿಷೇಧಕ್ಕೆ ಒಳಪಟ್ಟ ಭಯೋತ್ಪಾದನಾ ಸಂಘಟನೆಗಳು ಮತ್ತು ಉಗ್ರರ ಯಾದಿಯಲ್ಲಿ ಅವನ ಹೆಸರೂ ಇದೆ.

ಪಕ್ಕಾ ತಲೆನೋವು
ಅವನು ಒಂದರ್ಥದಲ್ಲಿ ಐಎಸ್ಐಗೂ ತಲೆನೋವೇ. ಏಕೆಂದರೆ ಐಎಸ್ಐ ಬಗ್ಗೆ ಅವನಿಗೆ ನಿರ್ದಿಷ್ಟ ನಿಲುವೇ ಇಲ್ಲ. ಹಾಗೆ ನೋಡಿದರೆ ಕಾಶ್ಮೀರದಲ್ಲಿ ಕಿತಾಪತಿ ನಡೆಸಲು 90ರ ದಶಕದಲ್ಲಿ ಲಷ್ಕರ್ಗೆ ಎಲ್ಲ ಬಗೆಯ ಶಕ್ತಿ ತುಂಬಿದ್ದೇ ಐಎಸ್ಐ. ಆದರೆ ನಂತರದ ಅವಧಿಯಲ್ಲಿ ಲಷ್ಕರ್ ಉಗ್ರರು ಭಾರತೀಯ ನಾಗರಿಕರು, ಪಾಶ್ಚಾತ್ಯ ಪ್ರವಾಸಿಗಳು, ಇಸ್ರೇಲಿ ಯೆಹೂದಿಗಳ ಮೇಲೆ ದಾಳಿ ಮಾಡುತ್ತಲೇ ಬಂದರು. ಆಫ್ಘಾನಿಸ್ತಾನದ ಪೂರ್ವ ಪ್ರಾಂತಗಳಲ್ಲೂ ಅವರ ಉಪದ್ರವ ಇತ್ತು.

2002ರಲ್ಲಿ ಸಂಪರ್ಕ ಕಡಿದು ಹೋದ ನಂತರ ಲಷ್ಕರ್ ಮೇಲೆ ತಮಗೆ ಪರಿಣಾಮಕಾರಿ ನಿಯಂತ್ರಣವೇ ತಪ್ಪಿಹೋಯ್ತು ಎನ್ನುವುದು ಐಎಸ್ಐ ಅಧಿಕಾರಿಗಳ ಅಳಲು. ಆದರೆ 2005ರ ಭೂಕಂಪ ಮತ್ತು 2010ರ ಭಾರೀ ಪ್ರವಾಹದ ಸಂದರ್ಭದಲ್ಲಿ ಪಾಕ್ನಲ್ಲಿ ಸಹಾಯ ಕೇಂದ್ರಗಳನ್ನು ತೆರೆದ ಲಷ್ಕರ್ ಎ ತೊಯ್ಬಾ, ಇದನ್ನೇ ಬಳಸಿಕೊಂಡು ತನ್ನ `ಉಗ್ರಗಾಮಿ~ ಚಟುವಟಿಕೆಗೆ ಚಂದಾ ಸಂಗ್ರಹಿಸಿತು, ಹೊಸ ಹೊಸ ಉಗ್ರರ ನೇಮಕಾತಿ ಮಾಡಿಕೊಂಡಿತು. ಇದನ್ನು ತಡೆಯಲು ಕೂಡ ಐಎಸ್ಐಗೆ ಸಾಧ್ಯವಾಗಲಿಲ್ಲ.

ಮುಂಬೈ ದಾಳಿ ಸಂಬಂಧ ಲಷ್ಕರ್ ಸಂಘಟನೆ ಮತ್ತು ಹಫೀಜ್ ಮೇಲೆ ಕಾಯ್ದೆ ಕ್ರಮ ಜರುಗಿಸುವ ಪ್ರಯತ್ನಗಳೂ ಫಲ ಕೊಟ್ಟಿಲ್ಲ. 2009ರಲ್ಲಿ ಏಳು ಮಂದಿ ಉಗ್ರರ ಮೇಲೆ ಮೊಕದ್ದಮೆ ದಾಖಲಿಸಿದರೂ ಇದುವರೆಗೂ ಯಾರಿಗೂ ಶಿಕ್ಷೆಯಾಗಿಲ್ಲ. ಇಡೀ ದಾಳಿಯನ್ನು ರೂಪಿಸಿದ ಲಷ್ಕರ್ನ ಕಾರ್ಯಾಚರಣೆ ಮುಖ್ಯಸ್ಥ ಜಕೀಉರ್ ರೆಹ್ಮಾನ್ ಲಕ್ವಿ ಜೈಲಿನಲ್ಲಿದ್ದಾನೆ. ಆದರೆ ಅವನ ಮೇಲಿನ ಮೊಕದ್ದಮೆಯ ವಿಚಾರಣೆ ಕೋರ್ಟ್ನಲ್ಲಿ ವಿಳಂಬ ಗತಿಯಲ್ಲಿ ನಡೆದಿದೆ.

ಲಷ್ಕರ್ನ ಅನೇಕ ಕಿರಿಯ ಕಮಾಂಡರ್ಗಳು ಆಗಾಗ ಜೈಲಿನಲ್ಲಿ ಲಕ್ವಿಯನ್ನು ಭೇಟಿ ಮಾಡಿ ಮಾರ್ಗದರ್ಶನ ಪಡೆಯುತ್ತಲೇ ಇದ್ದಾರೆ. `ಆತ ಕಂಬಿ ಎಣಿಸುತ್ತಿರುವುದು ಸಮಾಧಾನದ ಸಂಗತಿ. ಆದರೆ ಜೈಲಲ್ಲಿದ್ದರೂ ಅವನ ಮಾತು ನಡೆಯುತ್ತದೆ.

ಅಮೆರಿಕ ಈಗ ಘೋಷಿಸಿರುವ 1 ಕೋಟಿ ಡಾಲರ್ ಇನಾಮಿನಿಂದ ಹಫೀಜ್ನ ಪ್ರಭಾವ ಕಡಿಮೆಯಾಗಬಹುದೇ, ಒತ್ತಡ ತಂತ್ರ ಫಲ ಕೊಟ್ಟೀತೇ ಎಂದು ಕಾದು ನೋಡಬೇಕು~ ಎನ್ನುತ್ತಾರೆ ಟಂಕೆಲ್.

ಡಿಫೆನ್ಸ್ ಆಫ್ ಪಾಕಿಸ್ತಾನದ ಈಚಿನ ರ್ಯಾಲಿಗಳಲ್ಲಿ ಹಫೀಜ್ಗೆ ಜಮಾತ್ ಉದ್ ದವ್ವಾದ ಕಾರ್ಯಕರ್ತರು ಬೆಂಗಾವಲಾಗಿ ನಿಂತಿದ್ದರು. ವೇದಿಕೆ ಮೇಲೆ ಅವನ ಪಕ್ಕದಲ್ಲೇ ಐಎಸ್ಐನ ಮಾಜಿ ಮುಖ್ಯಸ್ಥ ಮತ್ತು ಜಿಹಾದಿಯ ಪ್ರಬಲ ಪ್ರತಿಪಾದಕ ಹಮೀದ್ ಗುಲ್ ಕೂಡ ಇದ್ದರು. ಅಮೆರಿಕದ ಬಹುಮಾನ ಘೋಷಣೆ ಇವರಿಬ್ಬರ ಹೊಂದಾಣಿಕೆಯನ್ನು ಮುರಿದೀತೆ ಎಂಬುದು ಕುತೂಹಲದ ಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.