ಶಿರಸಿ: ಮಳೆಗಾಲದ ಶುರುವಿನಲ್ಲಿ ನೂರಾರು ಕಾಯಿ ಕಚ್ಚಿ ಅರ್ಧದಷ್ಟೂ ಬಳಕೆಯಾಗದೆ ಬಿದ್ದು ಕೊಳೆತು ಹೋಗುವ ಹಲಸಿನಕಾಯಿಗೆ ಇತ್ತೀಚಿನ ದಿನಗಳಲ್ಲಿ ಭಾರೀ ಬೇಡಿಕೆ ಇದೆ. ಹಲಸಿಗೇ ಪ್ರತ್ಯೇಕ ಮೇಳದ ಗೌರವ ದೊರಕುತ್ತಿದೆ. ಇಷ್ಟೆಲ್ಲ ಬೆಳವಣಿಗೆ ಆದರೂ ಅರ್ಧದಷ್ಟು ಹಲಸಿನ ಫಲ ನಿರುಪಯೋಗವೇ.

ಬಿದ್ದು ಹೋಗುವ ಒಂದಿಷ್ಟನ್ನಾದರೂ ಉಳಿಸಿಕೊಳ್ಳಲು ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದವರು ಕೆಲ ಸಂರಕ್ಷಣಾ ಪ್ರಯೋಗ ನಡೆಸಿದ್ದಾರೆ. ಪ್ರಯೋಗಕ್ಕೆ ತೆಗೆದುಕೊಂಡಿದ್ದು ಸಾಮಾನ್ಯ ಗಾತ್ರದ ಒಂದು ಹಲಸಿನಕಾಯಿಯ ಕಾಲು ಭಾಗ ಮಾತ್ರ. ಕಾಯಿ ಹಲಸಿನ ತೊಳೆ, ಸಿಪ್ಪೆ, ಸೋರೆ, ಬೀಜ, ಸಿಪ್ಪೆ ಎಲ್ಲವನ್ನೂ ಪ್ರತ್ಯೇಕ ಬಾಟಲಿಯಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಎರಡೂವರೆ ತಿಂಗಳು ಕಳೆದರೂ ತಾಜಾ ಹಲಸಿನಕಾಯಿಯಂತೆ ಇದೆ.

ಒಂದಿಂಚೂ ಹಾಳು ಮಾಡದೆ ಪ್ರತಿಯೊಂದು ತುಣುಕನ್ನು ಬಳಕೆಗೆ ಬರುವಂತೆ ಬಾಟಲಿ ಮತ್ತು ಪ್ಲಾಸ್ಟಿಕ್ ಕವರ್ಗಳಲ್ಲಿ ಕಟ್ಟಿ ಇಡಲಾಗಿದೆ. ಹಲಸಿನ ತೊಳೆಯ ಮೂಲ ಬಣ್ಣದಲ್ಲಿ ಸಹ ಬದಲಾವಣೆಯಾಗಿಲ್ಲ. ಅವರು ಮಾಡಿದ್ದು ಇಷ್ಟೆ ಉಪ್ಪು ನೀರಿನ ಜೊತೆಗೆ ಶೇಕಡಾ ಎರಡರಷ್ಟು ಬ್ರೈನ್ ಸಿಟ್ರಿಕ್ ಆ್ಯಸಿಡ್ ಮಿಶ್ರಣ ಮಾಡಿ ಅದಕ್ಕೆ ಉಪಚಾರ ನಡೆಸಿ ಗಾಳಿ ಸೇರದಂತೆ ಗಟ್ಟಿಯಲ್ಲಿ ಡಬ್ಬದಲ್ಲಿ ಇಟ್ಟಿದ್ದಾರೆ. ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಹೇಮಂತ ಹೆಗಡೆ ಹೇಳುವ ಹಾಗೆ ಪ್ರೋಟಿನ್, ಶರ್ಕರ ಪಿಷ್ಠ, ಜೀವಸತ್ವ ಹೊಂದಿರುವ ಹಲಸಿನಕಾಯಿ ಮೌಲ್ಯವರ್ಧನೆ ಮಾಡಿದರೆ ಮಹಿಳೆಯರು ಮನೆಯಲ್ಲೇ ಆದಾಯ ಗಳಿಸ ಬಹುದು.

ಹಲಸಿನ ಹಂಗಾಮು ಮುಗಿದ ನಂತರವೂ ಸಂಸ್ಕರಿಸಿಟ್ಟ ಹಲಸಿನಕಾಯಿ ಬಳಕೆ ಮಾಡಲು ಸಾಧ್ಯವಿದೆ. ಶೇಕಡಾ 60ರಷ್ಟು ಬಳಸದೆ ಬಿದ್ದು ಕೊಳೆತು ಹೋಗುವ ಹಲಸಿನ ಮೌಲ್ಯವರ್ಧನೆಯಿಂದ ಉತ್ತಮ ಆದಾಯ ಗಳಿಸಬಹುದು ಎನ್ನುತ್ತಾರೆ ಅವರು.

ಹಾಳಾಗಿ ಬೀಡುವ ಹಲಸಿನ ಹಣ್ಣಿನ ರಸ ಸಂಗ್ರಹಿಸಿ ರೊಟ್ಟಿ (ಲೆದರ್) ಸಹ ತಯಾರಿಸ ಬಹುದಾಗಿದೆ. ಹಲಸಿನ ಹಣ್ಣಿನ ತಿರುಳನ್ನು ತೆಗೆದು ತೆಳುವಾದ ಪದರದ ರೂಪದಲ್ಲಿ ಒಣಗಿಸಿ ಹಣ್ಣು ದೊರೆಯದ ಕಾಲದಲ್ಲಿ ಬಳಸ ಬಹುದು ಎಂಬುದು ಅವರ ಸಲಹೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.