ಕಲಾಪ

ಭಾವನೆಗಳಿಗೆ ಅಕ್ಷರ ರೂಪ ಕೊಟ್ಟರೆ ಕವಿತೆ, ಕವನ, ಚಿತ್ರಪಟ, ಲೇಖನ, ಕಾದಂಬರಿ ಏನು ಬೇಕಾದರೂ ಮೂಡಬಹುದು. ಆದರೆ ಕುಂಚಕ್ಕೆ ಭಾವನೆಗಳನ್ನು ತುಂಬಿದಾಗ ಅದು ಚಿತ್ರಕಲೆಯಾಗಲು ಮಾತ್ರ ಸಾಧ್ಯ.

ಆ ಭಾವನೆಗಳ ನೆರಳಲ್ಲೇ ಕಲಾವಿದರು ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳಲು ಇಚ್ಛಿಸುತ್ತಾರೆ. ಅವಕ್ಕೊಂದು ರೂಪ ಕೊಟ್ಟು ಸುಂದರ ಕಲಾಕೃತಿ ಮೂಡಿದಾಗ ಸಾರ್ಥಕತೆಯ ಭಾವ ಮೂಡುವುದು ಸಹಜ. ಇಂಥ ಕೆಲವು ಮಹತ್ವಾಕಾಂಕ್ಷಿ ಕಲಾವಿದರ ಕಲಾಕೃತಿಗಳು ರಿನೈಸನ್ಸ್ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳುತ್ತಿವೆ. ಕಲಾವಿದರ ಕಲೆಗಳ ಕುರಿತು ಅವರ ಮಾತುಗಳಲ್ಲೇ ಕೇಳಿ:

`ನನ್ನ ಕೊಠಡಿ ತುಂಬೆಲ್ಲಾ ಹಳೆಯ, ಕಸದ ತೊಟ್ಟಿಗೆ ಹೊಗಬಹುದಾದಂಥ ವಸ್ತುಗಳೇ ಇವೆ. ಒಡೆದ ಗಾಜುಗಳು, ಹಾಳೆಗಳು, ಎಣ್ಣೆ ಡಬ್ಬಗಳು, ಮುರಿದ ಮರದ ಭಾಗಗಳು ಹೀಗೆ. ಇದನ್ನೆಲ್ಲಾ ನನ್ನ ಸ್ನೇಹಿತರು ಕೆಲಸಕ್ಕೆ ಬಾರದ ವಸ್ತುಗಳು ಎಂದು ಗೇಲಿ ಮಾಡುತ್ತಾರೆ. ಆದರೆ ಅವೇ ನನ್ನ ಕಲೆಯ ವಸ್ತುಗಳು. ಕಸದಿಂದ ರಸ ಮಾಡುವುದೇ ನನ್ನ ಕಾಯಕ~ ಎನ್ನುತ್ತಾ ನಗುತ್ತಾರೆ ಹವ್ಯಾಸಿ ಕಲಾವಿದೆ ಜಯಸ್ಮಿತಾ ದತ್ತ.

ಕಳೆದ 12 ವರ್ಷಗಳಿಂದ ಚಿತ್ರಕಲೆಯಲ್ಲಿ ತೊಡಗಿಕೊಂಡಿರುವ ಇವರು ವಸ್ತುಗಳನ್ನು ಪುನರ್ಬಳಕೆ ಮಾಡಿ ಅದರಲ್ಲಿ ಕಲೆ ಮೂಡಿಸುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾರೆ. `ಸಾಮಾನ್ಯವಾಗಿ ಪುರಾಣ ಕತೆಗಳನ್ನು ಸಾರುವ ವಸ್ತು ವಿಷಯಗಳು ನನ್ನ ಕಲೆಯ ಭಾಗ~ ಎನ್ನುವ ಜಯಸ್ಮಿತಾ, ತಮ್ಮ ಇತ್ತೀಚಿನ ಕಲಾಕೃತಿಗಳಿಗೆ `ಎನ್ಲೈಟನ್~ ಅರ್ಥಾತ್ `ಸಾಕ್ಷಾತ್ಕಾರ~ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ.

`ಪ್ರಕೃತಿಯಲ್ಲಿನ ಸೌಂದರ್ಯವನ್ನು ಯಥಾವತ್ತಾಗಿ ಕುಂಚದಿಂದ ಮೂಡಿಸುವುದೆಂದರೆ ನನಗೆ ಅಚ್ಚುಮೆಚ್ಚು. ನಾನಾಬಗೆಯ ಬಣ್ಣಗಳನ್ನು ಒಂದೇ ಚಿತ್ರಕ್ಕೆ ಬಳಸಿ ಅದು ಎಲ್ಲಿಯೂ ಅತಿಯಾಗದಂತೆ ಬಿಡಿಸುವುದು ನನ್ನ ಕಲೆಯ ವೈಶಿಷ್ಟ್ಯ. ನಿತ್ಯದ ಅನುಭವಗಳಿಗೆ ಕುಂಚದಿಂದ ಜೀವ ತುಂಬುತ್ತೇನೆ~ ಎನ್ನುತ್ತಾರೆ ಎನ್. ಲೋಕೇಶ್.

ಕೇರಳ ಮೂಲದವರಾದ ಯಾಮಿನಿ ನಾಯರ್ ವೃತ್ತಿಯಲ್ಲಿ ಬರಹಗಾರರು. ಸುತ್ತಲೂ ನೀರು. ಮಧ್ಯದಲ್ಲಿ ದ್ವೀಪದಂತೆ ಮೈಚಾಚಿರುವ ಮರ. ಆ ಮರದ ತುಂಬೆಲ್ಲಾ ಬದುಕಿನ ವಾಸ್ತವತೆಯನ್ನು ಸಾರುವ ಚಿತ್ರಗಳು. ಇವೆಲ್ಲಾ ಇವರ ಕುಂಚದಿಂದ ಮೂಡಿರುವ ಕಲಾಕೃತಿಗಳಲ್ಲಿ ಅಡಕವಾಗಿವೆ. `ಚಿಕ್ಕವಯಸ್ಸಿನಿಂದಲೂ ನನಗೆ ಕಲೆ ಎಂದರೆ ಪ್ರೀತಿ. ಆ ಪ್ರೀತಿಗೆ ಅಂದಿನಿಂದ ನೀರೆರೆಯುತ್ತಾ ಬಂದಿದ್ದೇನೆ. ಅದರ ಸಾಕಾರರೂಪವಾಗಿ ಇಂದು ನನ್ನ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ~ ಎನ್ನುತ್ತಾರೆ ಯಾಮಿನಿ.

ಪ್ರಸ್ತುತ ನಗರದ ಜಾಹೀರಾತು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಇದಕ್ಕೂ ಮೊದಲು ದೇಶದ ಹಲವು ಮಹಾನಗರಗಳಲ್ಲಿ ಕೆಲಸ ಮಾಡಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೊ ಕಲಾ ಸಂಸ್ಥೆಯಲ್ಲಿ ಪದವಿ ಪಡೆದಿದ್ದಾರೆ.

ಇವರೆಲ್ಲರ ಕಲಾಕೃತಿಗಳು ಏಪ್ರಿಲ್ 27ರವರೆಗೆ ಪ್ರತಿದಿನ ಬೆಳಿಗ್ಗೆ 11ರಿಂದ ರಾತ್ರಿ 7ರ ವರೆಗೆ ಪ್ರದರ್ಶನಗೊಳ್ಳಲಿವೆ. ಸ್ಥಳ: ರಿನೈಸನ್ಸ್ ಗ್ಯಾಲರೀಸ್, ವೆಸ್ಟ್ ಮಿನ್ಸ್ಟರ್ 13, ಕನ್ನಿಂಗ್ ಹ್ಯಾಮ್ ರಸ್ತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.