ಆಹಾರದಲ್ಲೆಲ್ಲಾ ಸರ್ವ ಶ್ರೇಷ್ಠವಾದದ್ದು ಸೊಪ್ಪು. ನಮ್ಮ ಶರೀರಕ್ಕೆ ಬೇಕಾದ ಅನೇಕ ಆಹಾರಾಂಶಗಳನ್ನು ಸೊಪ್ಪು ಒದಗಿಸುವಲ್ಲಿ ಸಹಕಾರಿಯಾಗಿದೆ. ಆದರೆ ಕೆಲವೊಮ್ಮೆ ಈ ಸೊಪ್ಪೇ ತನ್ನದಲ್ಲದ ತಪ್ಪಿನಿಂದ ಕೆಲವು ತೊಂದರೆಗಳನ್ನು ಉಂಟು ಮಾಡುತ್ತದೆ.

ಸಾಧಾರಣವಾಗಿ ಏಪ್ರಿಲ್ ತಿಂಗಳಿನ ಈ ಬಿರುಬೇಸಿಗೆಯಲ್ಲಿ ನೀರಿನ ಅಭಾವ ಎಲ್ಲಾ ಕಡೆಯೂ ಕಂಡುಬರುತ್ತದೆ. ಸೊಪ್ಪು ಬೆಳೆಯಲು ಸಹಜವಾಗೇ ಬೇರೆ ತರಕಾರಿ ಗಿಡಗಳಿಗಿಂತ ಹೆಚ್ಚು ನೀರನ್ನು ಕೇಳುತ್ತದೆ. ಆದರೆ ಬೇಸಿಗೆಯ ನೀರಿನ ಅಭಾವವಿದ್ದರೂ ಸೊಪ್ಪನ್ನು ಬೆಳಸಲೇಬೇಕು ಎಂದು ಹೆಚ್ಚಾಗಿ ಕೃತಕವಾದ ಗೊಬ್ಬರ ಕೊಟ್ಟು ದೊಡ್ಡದಾಗಿ ಬೆಳೆಸುವಂತಹದ್ದು ಕೆಲವೆಡೆ ಸಾಮಾನ್ಯ. ಕೆಲವೊಮ್ಮೆ ಚರಂಡಿ ನೀರಿನ ಬಳಕೆಯೂ ಆಗಬಹುದು. ಹೀಗೆ ಬೆಳೆದ ಸೊಪ್ಪಿನಲ್ಲಿ ರುಚಿ. ಪರಿಮಳ ಮತ್ತು ಆಹಾರಾಂಶಗಳ ಕೊರತೆ ಇದ್ದು ಆರೋಗ್ಯಕ್ಕೆ ಪೂರಕವಾಗಿರುವುದಿಲ್ಲ. ಏಪ್ರಿಲ್ ತಿಂಗಳಿನಲ್ಲಿ ಹೀಗೆ ಬೆಳೆಯಬಹುದಾದ ಸೊಪ್ಪುಗಳೆಂದರೆ ಮೆಂತ್ಯ, ದಂಟು, ಪುದಿನ, ಪಾಲಕ್ ಮುಂತಾದವು.

ಹಾಗಂತ ಏಪ್ರಿಲ್ ತಿಂಗಳಿನಲ್ಲಿ ಬಳಸಲು ಯೋಗ್ಯವಾದ ಸೊಪ್ಪುಗಳೇ ಇಲ್ಲವೆಂದಿಲ್ಲ. ವಸಂತ ಕಾಲದಲ್ಲಿ ಅದರಲ್ಲೂ ಮರಗಿಡಗಳು ಸಹಜವಾಗಿ ಚಿಗುರೊಡೆಯುತ್ತವೆ. ವರ್ಷದ ಯಾವುದೇ ತಿಂಗಳಿಗಿಂತಲೂ ಏಪ್ರಿಲ್ ತಿಂಗಳಿನಲ್ಲಿ ಮರದ ಎಲೆಗಳು ಹಸಿರಿನಿಂದ ಕಂಗೊಳಿಸಿ ಕ್ಲೊರೊಫಿಲ್ಲಿನಿಂದ ತುಂಬಿರುತ್ತದೆ.
ಈ ಹಸಿರು ಕ್ಲೊರೊಫಿಲ್ಲಿನ ಜೊತೆ ಅಗಾದವಾಗಿ ಬಿ ಕೆರೊಟೀನ್ ಮತ್ತು ಇತರ ಉಪಯುಕ್ತ ರಸಾಯನಿಕಗಳೂ ಸೇರಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಹಾಗಾಗಿ ಮರಗಳಿಂದ ಬರುವ ಅಡುಗೆಗೆ ಬಳಸಲು ಉಪಯುಕ್ತವಾದ ಸೊಪ್ಪುಗಳನ್ನು ಈ ತಿಂಗಳುಗಳಲ್ಲಿ ಬಳಸುವುದು ಜಾಣತನ.
ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಒಣಗಿ ಚಟ್ಟೆಯಾಗಿದ್ದ ಕರಿಬೇವಿನೆಲೆ ಏಪ್ರಿಲ್ ತಿಂಗಳಲ್ಲಿ ಚಿಗುರಿ ಕಬ್ಬಿಣ, ಕ್ಯಾಲ್ಷಿಯಂ, ಫ್ಯಾಟೀ ಆಸಿಡ್ ಒದಗಿಸುತ್ತದೆ.

ಆದರೆ ಸಮಸ್ಯೆಯೇನೆಂದರೆ ಕರಿಬೇವಿನಲ್ಲಿ ಇತರ ಸೊಪ್ಪುಗಳಂತೆ ಪಲ್ಯ, ಹುಳಿಗಳನ್ನು ಮಾಡಲು ಆಗುವುದಿಲ್ಲ. ಆದರೆ ಇದರ ಚಟ್ನಿ ಪುಡಿಯನ್ನು ಕೆಲವು ತಿಂಗಳುಗಳ ಕಾಲ ಕೆಡದಂತೆ ಇಟ್ಟುಕೊಂಡು ದಿನವೂ ಊಟದಲ್ಲಿ ಬಡಿಸಿಕೊಳ್ಳಬಹುದು. ಕರಿಬೇವಿನ ಚಟ್ನಿಪುಡಿಯಲ್ಲಿ ಬಿ ಕ್ಯಾರೊಟೀನ್ ಮತ್ತು ಕ್ಯಾಲ್ಷಿಯಂಗಳ ಸಾಂದ್ರತೆ ಹೆಚ್ಚಾಗಿರುವುದರಿಂದ 2 ಚಮಚ ಚಟ್ನಿ ಪುಡಿಯು ನಮಗೆ ಒಂದು ದಿನಕ್ಕೆ ಬೇಕಾಗಿರುವ ಈ ಆಹಾರಾಂಶಗಳ ಅರ್ಧ ಭಾಗದ ಪೂರೈಕೆಯನ್ನು ಮಾಡುತ್ತದೆ.

ಗಿಣಿಹಸಿರ ಬಣ್ಣದಿಂದ ಕಂಗೊಳಿಸುವ ಕೆಲವು ತರಹದ ಉಪಯುಕ್ತವಾದ ಕೆರೊಟೀನ್ ಪಿಗ್ಮೆಂಟಿನಿಂದ ತುಂಬಿರುವ ಹುಣಸೆ ಚಿಗುರನ್ನು ತೊಗರಿಬೇಳೆ ಜೊತೆ ಬೆರಸಿ ತೊವ್ವೆ ಅಥವಾ ಹುಳಿಗಳನ್ನು ಮಾಡಿ ತಿನ್ನಬಹುದು. ಹಾಗೆ ನೋಡಿದರೆ ಈ ಹುಣಸೆ ಗಿಡಕ್ಕೆ ಯಾವುದೇ ಆದ ಕೃತಕ ಗೊಬ್ಬರ ಅಥವಾ ಕ್ರಿಮಿನಾಶಕಗಳನ್ನು ಬಳಸಿರುವುದಿಲ್ಲ.

ಹೀಗೆ ಏಪ್ರಿಲ್ ತಿಂಗಳಿನಲ್ಲಿ ಬಳಸಲು ಸೂಕ್ತವಾದ ಸೊಪ್ಪೆಂದರೆ ಚಕ್ರಮುನಿ ಸೊಪ್ಪು. ನುಗ್ಗೆ ಸೊಪ್ಪು. ಅಗಸೆ ಸೊಪ್ಪುಗಳು ಇವುಗಳನ್ನು ಬಳಸಿ ದೇಹಕ್ಕೆ ಬೇಕಾದ ಆಹಾರಾಂಶಗಳನ್ನು ಪಡೆದುಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.