ಮಂಗಳವಾರ, ಮೇ 18, 2021
28 °C

ಹಾಕಿ: ಏರ್ ಇಂಡಿಯಾಗೆ ಮಣಿದ ಐಎಎಫ್ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇವಿಂದರ್ ವಾಲ್ಮೀಕಿ ತಂದಿತ್ತ ಮೂರು ಗೋಲುಗಳ ನೆರವಿನಿಂದ ಏರ್ ಇಂಡಿಯಾ ತಂಡದವರು ಇಲ್ಲಿ ನಡೆಯುತ್ತಿರುವ ಕೆಎಸ್‌ಎಚ್‌ಎ ಆಶ್ರಯದ `ಓಜೋನ್ ಗ್ರೂಪ್ ರಾಷ್ಟ್ರೀಯ ಹಾಕಿ ಲೀಗ್ ಚಾಂಪಿಯನ್‌ಷಿಪ್~ನ ಪಂದ್ಯದಲ್ಲಿ ಸುಲಭ ಭರ್ಜರಿ ಜಯ ಪಡೆದರು.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಏರ್ ಇಂಡಿಯಾ 5-1 ಗೋಲುಗಳಿಂದ ಐಎಎಫ್ ತಂಡವನ್ನು ಮಣಿಸಿತು.ದೇವಿಂದರ್ ಅವರು ಪಂದ್ಯದ 15, 41 ಮತ್ತು 47ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು. ತಂಡದ ಇತರ ಎರಡು ಗೋಲುಗಳನ್ನು ಅರ್ಜುನ್ ಹಾಲಪ್ಪ (22 ಮತ್ತು 43) ಗಳಿಸಿದರು.ದಿನದ ಮತ್ತೊಂದು ಪಂದ್ಯದಲ್ಲಿ ಒಎನ್‌ಜಿಸಿ 5-1 ಗೋಲುಗಳಿಂದ ಫೋರ್ಟಿಸ್ ವಿರುದ್ಧ ಜಯ ಸಾಧಿಸಿತು. ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ವಿರಾಮದ ವೇಳೆಗೆ ವಿಜೇತ ತಂಡ 2-0 ಗೋಲುಗಳಿಂದ ಮುನ್ನಡೆಯಲ್ಲಿತ್ತು. ಗಗನ್‌ದೀಪ್ ಸಿಂಗ್ (12 ಮತ್ತು 60ನೇ ನಿ.) ಎರಡು ಗೋಲುಗಳನ್ನು ಗಳಿಸಿದರೆ, ರಮಣ್‌ದೀಪ್ ಸಿಂಗ್ (16), ಇಜುಪ್ ಎಕ್ಕಾ (63) ಹಾಗೂ ನವ್‌ದೀಪ್ (67) ತಲಾ ಒಂದು ಗೋಲು ತಂದಿತ್ತರು.

ಬಿಪಿಸಿಎಲ್ ಮತ್ತು ಪಿಎನ್‌ಬಿ ತಂಡಗಳ ನಡುವಿನ ಪಂದ್ಯ 2-2 ಗೋಲುಗಳ ಡ್ರಾದಲ್ಲಿ ಅಂತ್ಯ ಕಂಡಿತು. ರವಿಪಾಲ್ ಸಿಂಗ್ (25) ಮತ್ತು ಅಮೀರ್ ಖಾನ್ (69) ಅವರು ಬಿಪಿಸಿಎಲ್‌ಗೆ ಗೋಲು ತಂದಿತ್ತರೆ, ಪಿಎನ್‌ಬಿ ತಂಡದ ಎರಡೂ ಗೋಲುಗಳನ್ನು ಅಜಿತೇಶ್ ರಾಯ್ (49 ಮತ್ತು 66) ಗಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.