ಗುರುವಾರ , ಏಪ್ರಿಲ್ 22, 2021
28 °C

ಹಾಡಿನ ಹಾದಿಯಲಿ ನೆನಪಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲ್ಬಂನ ಹೆಸರು ‘ನೆನಪಲಿ’. ಇದರ ಬಿಡುಗಡೆಯ ಕಾರ್ಯಕ್ರಮ ಹಲವೂ ನೆನಪುಗಳಿಗೂ ನೆಪವಾಯಿತು. ವೇದಿಕೆಯ ಮೇಲಿದ್ದ ರಾಘವೇಂದ್ರ ರಾಜಕುಮಾರ್ ಅವರಿಗೆ ಅವರ ತಂದೆ ರಾಜಕುಮಾರ್ ನೆನಪಾಗಿದ್ದರು. ‘ಅಪ್ಪಾಜಿ ತುಂಬಾ ಸಂಕಟ ಅನುಭವಿಸುತ್ತಿದ್ದ ದಿನಗಳವು. ಸರಿಯಾಗಿ ನಡೆದಾಡಲೂ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆ ಸಂದರ್ಭದಲ್ಲಿ ಅವರ ಮಂಡಿನೋವಿಗೆ ತುಂಬಾ ಒಳ್ಳೆಯ ಚಿಕಿತ್ಸೆ ನೀಡಿದ್ದು ಇದೇ ವೈದ್ಯ ದಂಪತಿ’ ಎಂದರು.ಅವರು ಮಾತನಾಡುತ್ತಿದ್ದುದು ಡಾ.ಜಾನ್ ಎಬನೆಜರ್ ಹಾಗೂ ಡಾ.ಪ್ರಮೀಳಾ ದೇವಿ ಅವರ ಬಗ್ಗೆ. ಅಂದಹಾಗೆ, ರಾಜ್ ಅವರನ್ನು ಉಪಚರಿಸಿದ್ದ ಈ ವೈದ್ಯದಂಪತಿಯ ಕರುಳಕುಡಿಗಳಾದ ಡಾ.ರಾಕೇಶ್ ಹಾಗೂ ಪ್ರಿಯಾಂಕ ಅವರ ಹಾಡುಗಾರಿಕೆಯಲ್ಲಿ ಮೂಡಿರುವ ಆಲ್ಬಂ- ‘ನೆನಪಲಿ’. ಈ ಗೀತಗುಚ್ಛದ ಸಂಗೀತ ಎಸ್.ಪಿ.ಚಂದ್ರಕಾಂತ್ ಅವರದ್ದು.‘ನೆನಪಲಿ’ ಬಿಡುಗಡೆ ಕಾರ್ಯಕ್ರಮದ ತಾರಾಮೆರುಗು ಜೋರಾಗಿಯೇ ಇತ್ತು. ರಾಘವೇಂದ್ರ ಅವರೊಂದಿಗೆ ಪುನೀತ್ ರಾಜಕುಮಾರ್, ಸಂಗೀತ ನಿರ್ದೇಶಕ ವಿ.ಮನೋಹರ್, ಗಾಯಕಿ ಮಂಜುಳಾ ಗುರುರಾಜ್ ಕಾರ್ಯಕ್ರಮದಲ್ಲಿದ್ದರು.ರಾಘವೇಂದ್ರ ರಾಜಕುಮಾರ್ ನೆನಪು ಮತ್ತೂ ಮುಂದುವರೆಯಿತು. ‘ನಾನು ವೈದ್ಯನಾಗಬೇಕೆಂದು ಅಪ್ಪಾಜಿ ಬಯಸಿದ್ದರು. ಆದರೆ ಎಂಬಿಬಿಎಸ್ ಎರಡನೇ ವರ್ಷ ಮುಗಿಸಿದವನೇ ನಟನೆಗಿಳಿದುಬಿಟ್ಟೆ. ಈಗ ಶಿವಣ್ಣನ ಮಗಳು ವೈದ್ಯೆಯಾಗುವ ಹಾದಿಯಲ್ಲಿದ್ದಾಳೆ. ಈ ಮೂಲಕ ಅಪ್ಪಾಜಿ ಕನಸು ನನಸಾಗಲಿದೆ’ ಎಂದರು.ರಾಕೇಶ್ ಮತ್ತು ಪ್ರಿಯಾಂಕ ಅವರ ಕಂಠಮಾಧುರ್ಯವನ್ನು ಮೆಚ್ಚಿಕೊಂಡು ಇಬ್ಬರಿಗೂ ಶುಭಕೋರಿದ ರಾಘವೇಂದ್ರ, ‘ಸಂಗೀತದಲ್ಲಿ ಈ ಮಟ್ಟದ ಸಾಧನೆ ಮಾಡಲಿಕ್ಕೆ ದೇವರ ಅನುಗ್ರಹ ಬೇಕು’ ಎಂದು ಅಭಿಪ್ರಾಯಪಟ್ಟರು.ಮನೋಹರ್ ಅವರಿಗೂ ಯುವ ಗಾಯಕರ ಹಾಡುಗಾರಿಕೆ ಇಷ್ಟವಾದಂತಿತ್ತು. ಅವರು ತಮ್ಮ ಮಾತಿನ ನಡುವೆ, ಎಳೆಯ ಹಾಡುಗಾರರಿಗೆ ಸರ್ಕಾರ ಪ್ರಶಸ್ತಿ ನೀಡಿ ಗುರ್ತಿಸಬೇಕು ಎಂದು ಸಲಹೆ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.