ಹಾಪ್ಕಿನ್ಸ್ನಲ್ಲಿ ವಿಶೇಷ ಶಿಕ್ಷಣ
ದೇಶದ ಆರ್ಥಿಕತೆಯ ಜತೆಜತೆಗೇ ಶೈಕ್ಷಣಿಕ ವ್ಯವಸ್ಥೆಯೂ ಅಗಾಧವಾಗಿ ಬೆಳೆಯುತ್ತಿದೆ. ದೇಶದಲ್ಲಿ ಸುಮಾರು 15 ಸಾವಿರ ಕಾಲೇಜುಗಳು ಇದ್ದು 1 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಎಂಜಿನಿಯರಿಂಗ್, ವೈದ್ಯಕೀಯ, ಆಡಳಿತ, ವ್ಯವಹಾರ ವಿಷಯಗಳನ್ನು ಕಲಿಯುತ್ತಿದ್ದಾರೆ. ತರಬೇತಿ ಹೊಂದಿದ ಮತ್ತು ಪರಿಣತ ಉದ್ಯೋಗಿಗಳಿಗೆ ಬೇಡಿಕೆಯೂ ಹೆಚ್ಚಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕೆಲವು ವ್ಯವಹಾರ ಶಿಕ್ಷಣ ಶಾಲೆಗಳು (ಬಿಸಿನೆಸ್ ಸ್ಕೂಲ್) ಮತ್ತು ಕಾಲೇಜುಗಳು ಕೈಗಾರಿಕೆಯ ಪ್ರಾಮುಖ್ಯತೆ ಗ್ರಹಿಸಿಕೊಂಡು ಪ್ರಾಯೋಗಿಕ ಅನುಭವವನ್ನು ಪಠ್ಯಕ್ರಮದ ಭಾಗವಾಗಿ ಅಳವಡಿಸಿವೆ.
ಇದೇ ರೀತಿ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿರುವ ಸೇಂಟ್ ಹಾಪ್ಕಿನ್ಸ್ ಕಾಲೇಜ್ ಮತ್ತು ಮ್ಯೋನೇಜ್ಮೆಂಟ್ ಕೂಡ ತನ್ನ ಬಿಸಿನೆಸ್ ಪದವಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದ ಪ್ರಾಯೋಗಿಕ ತರಬೇತಿ ನೀಡುತ್ತಿದೆ.
ಪದವಿ ನಂತರ ಅವರು ಉದ್ಯೋಗ ಕ್ಷೇತ್ರಕ್ಕೆ ಬೇಗ ಹೊಂದಿಕೊಳ್ಳುವಂತೆ ಮಾಡುವುದು, ಕಾರ್ಪೊರೇಟ್ ಜಗತ್ತಿಗೆ ಬೇಕಾದ ಕೌಶಲ್ಯಗಳನ್ನು ಕಾಲೇಜು ಮಟ್ಟದಿಂದಲೇ ಕಲಿಸುವ ಮೂಲಕ ನಾಳಿನ ನಾಯಕರನ್ನಾಗಿ ರೂಪುಗೊಳಿಸುವುದು ಇದರ ಉದ್ದೇಶ.
ಇದಲ್ಲದೆ ಓದಿನ ಅವಧಿಯಲ್ಲೇ ಕೆಲಸ ಮಾಡುತ್ತ ಕಲಿಯವ ಚಟುವಟಿಕೆಯನ್ನು ಕಾಲೇಜು ಪ್ರೋತ್ಸಾಹಿಸುತ್ತಿದೆ. ಮೊದಲನೇ ತ್ರೈಮಾಸಿಕದಲ್ಲೆೀ ವಿದ್ಯಾರ್ಥಿಗಳನ್ನು ಮಲೇಷ್ಯಕ್ಕೆ ಇಂಟರ್ನಿಯಾಗಿ ಕಳುಹಿಸಿಕೊಡುತ್ತಿದೆ. ಈ ಮೂಲಕ ಅಂತರರಾಷ್ಟ್ರೀಯ ಮಟ್ಟದ ಅನುಭವ ಒದಗಿಸುತ್ತಿದೆ.
ಅಮೆರಿಕದ ಯುಎಸ್ಎ ಮತ್ತು ಆಸ್ಟನ್ ಕಾಲೇಜ್ಗಳ ಜೊತೆ ಒಪ್ಪಂದ ಮಾಡಿಕೊಂಡು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ ನಡೆಸುತ್ತಿದೆ. ಬ್ಯಾಂಕಾಕ್ನಲ್ಲಿ ಕಡಲಾಚೆಯ ಅನುಭವ ಕಲ್ಪಿಸುತ್ತಿದೆ. ವಿದ್ಯಾರ್ಥಿಗಳಿಗೆ ವಿಸಿಟಿಂಗ್ ಕಾರ್ಡ್ ನೀಡುವ ಪರಿಪಾಠವನ್ನು ಆರಂಭಿಸಿದ ಮೊದಲ ಬಿಸಿನೆಸ್ ಶಾಲೆಯಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.