ಹಾಯ್ ನಾನು ಸಚಿನ್!

7

ಹಾಯ್ ನಾನು ಸಚಿನ್!

Published:
Updated:
ಹಾಯ್ ನಾನು ಸಚಿನ್!

ಬೆಂಗಳೂರು:  ಹಾಯ್ ನಾನು ಸಚಿನ್, ಚಾಂಪಿಯನ್ ಬ್ಯಾಟ್ಸ್‌ಮನ್...ನಿಮಗೆ ಗೊತ್ತಾ!ಹೀಗೆ ಸ್ವತಃ ತಮ್ಮ ಪರಿಚಯವನ್ನು ಅಂಧ ಮಕ್ಕಳ ಮುಂದೆ ಮಾಡಿಕೊಂಡಿದ್ದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಎರಡು ದಿನಗಳ ಹಿಂದೆ ಕರ್ನಾಟಕ ಅಂಧರ ಕ್ಷೇಮಾಭಿವೃದ್ಧಿ ಸಂಸ್ಥೆ ಮಕ್ಕಳು ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದಾಗ ತಮ್ಮ ಪರಿಚಯವನ್ನು ತಾವೇ ಹೇಳಿಕೊಂಡ ರೀತಿ ಹೀಗಿತ್ತು.  ಐರ್ಲೆಂಡ್ ವಿರುದ್ಧದ ಪಂದ್ಯ ಆಡಲು ಬೆಂಗಳೂರಿಗೆ ಆಗಮಿಸಿರುವ ಸಚಿನ್ ಅಂಧ ಮಕ್ಕಳನ್ನು ಮಾತನಾಡಿಸಿ ಅಚ್ಚರಿ ಮೂಡಿಸಿದರು. ನಿಮಗೆ ಎಷ್ಟು ವರ್ಷ ಎಂದು ಅಂಧ ಮಗುವೊಂದು ಪ್ರಶ್ನಿಸಿದಾಗ 12 ವರ್ಷ ಎಂದು ಪಟಕ್ಕನೇ ಉತ್ತರಿಸಿ ಮುಖದಲ್ಲಿ ನಗೆ ಅರಳಿಸಿದರು.ಸಚಿನ್ ಜೊತೆ ತಂಡದ ಇತರ ಆಟಗಾರರು ಕೂಡ ಅಂಧ ಮಕ್ಕಳನ್ನು ಹಸ್ತಲಾಘವ ಮಾಡಿ ಸಂಭ್ರಮಿಸಿದರು. ಆಫ್ ಸ್ಪಿನ್ನರ್ ಆರ್. ಅಶ್ವಿನ್ ಅವರು ಮೊದಲು ಮಕ್ಕಳನ್ನು ಮೊದಲು ಸ್ವಾಗತಿಸಿದರು. ಯುವರಾಜ್ ಸಿಂಗ್ ಇತರ ಆಟಗಾರರು ಜೊತೆಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry