ಗುರುವಾರ , ಜೂನ್ 24, 2021
29 °C

ಹಾವೇರಿಗೂ ಬಂತು ನೀರು ಪರೀಕ್ಷಾ ಕೇಂದ್ರ

ಪ್ರಜಾವಾಣಿ ವಾರ್ತೆ/ವಿಜಯ್ ಹೂಗಾರ Updated:

ಅಕ್ಷರ ಗಾತ್ರ : | |

ಹಾವೇರಿ: `ಜಿಲ್ಲೆಯಲ್ಲಿ ನಾಲ್ಕು ನದಿಗಳು ಹರಿದರೂ ಸಹ ಜನತೆಗೆ ನೀರಿನ ಬವಣೆ ಮಾತ್ರ ತಪ್ಪಿಲ್ಲ. ಅಲ್ಲಲ್ಲಿ ದೊರೆಯುವ ಅಲ್ಪಸ್ವಲ್ಪ ನೀರು ಸಹ ಕುಡಿಯಲು ಯೋಗ್ಯವೇ ಎಂಬ ಪ್ರಶ್ನೆಗೆ ಜಿಲ್ಲೆಯಲ್ಲಿ ಉತ್ತರ ದೊರೆಯುತ್ತಿರಲಿಲ್ಲ.

ನೀರು ಕುಡಿಯಲು ಯೋಗ್ಯವಾಗಿದೆಯೇ ಎಂಬುದನ್ನು ತಿಳಿಯಲು ದೂರದ ದಾವಣಗೆರೆ ಇಲ್ಲವೇ ಹುಬ್ಬಳ್ಳಿಯನ್ನು ಅವಲಂಬಿಸಬೇಕಿತ್ತು.

 

ಇದರಿಂದ ಯಾವುದಾದರೂ ಗ್ರಾಮದ ನೀರಿನ ಪರೀಕ್ಷೆಗೆ ಕಳುಹಿಸಿದರೆ ಅದರ ಫಲಿತಾಂಶ ಬರುವವರೆಗೆ ಜನರು ಯೋಗ್ಯವಿಲ್ಲದಿದ್ದರೂ ಅದೇ ನೀರನ್ನು ಬಳಸುವ ಪರಿಸ್ಥಿತಿ ಜಿಲ್ಲೆಯಲ್ಲಿತ್ತು.ಜಿ.ಪಂ. ಎಂಜಿನಿಯರಿಂಗ್ ವಿಭಾಗ ಇಂತಹ ಹತ್ತು ಹಲವು ಸಮಸ್ಯೆಗಳನ್ನು ಕಂಡು ಇಡೀ ಜಿಲ್ಲೆಗೆ ಅನುಕೂಲವಾಗಲುವ ನೀರಿನ ಗುಣಮಟ್ಟ ಪರೀಕ್ಷಿಸುವ ಕೇಂದ್ರವನ್ನು ಹಾವೇರಿ ನಗರದ ಹಳೇ ಜಿ.ಪಂ.ಕಚೇರಿ ಆವರಣದಲ್ಲಿ ಸ್ಥಾಪಿಸಿದೆ.ಕೇವಲ ಕೇಂದ್ರ ಸ್ಥಾಪನೆಯನ್ನಷ್ಟೇ ಮಾಡದೇ ಅದಕ್ಕೆ ಬೇಕಾದ ಸಿಬ್ಬಂದಿಯನ್ನು ಸಹ ನೇಮಕ ಮಾಡಿಕೊಂಡಿದೆ. ಕೇಂದ್ರಕ್ಕೆ ಬರುವ ನೀರಿನ ಮಾದರಿಗಳನ್ನು ಪರೀಕ್ಷಿಸಿ ಕೇವಲ 10 ನಿಮಿಷದಲ್ಲಿ ಅದು ಕುಡಿಯಲು ಯೋಗ್ಯವಿದೆಯೇ ಅಥವಾ ಇಲ್ಲವೋ ಎಂಬುದನ್ನು ಆ ಸಿಬ್ಬಂದಿ ತಿಳಿಸುತ್ತಾರೆ. ಆ ನೀರಿನಲ್ಲಿ ಹೆಚ್ಚಾಗಿರುವ ಅಂಶ ಯಾವುದು. ಅದಕ್ಕೆ ಬೇರೆ ನೀರು ಮಿಶ್ರಣ ಮಾಡಿ ದರೆ, ಅದರಲ್ಲಿನ ಅಂಶವನ್ನು ಕಡಿಮೆ ಮಾಡಬ ಹುದೆಂಬ ವರದಿಯನ್ನು ಸಹ ನೀಡುತ್ತಾರೆ.ಕೊಳವೆ ನೀರಿನ ಬಳಕೆ ಹೆಚ್ಚು: ಜಿಲ್ಲೆಯಲ್ಲಿ ನದಿಗಳ ನೀರು ಪ್ರಮುಖ ನೀರಿನ ಮೂಲ ವಾಗಿ ್ದದರೂ ಸಹ ಬಹುತೇಕ ಗ್ರಾಮೀಣ ಪ್ರದೇಶ ಗಳಲ್ಲಿ ಕೊಳವೆ ಬಾವಿಗಳ ನೀರಿನ ಮೂಲವನ್ನು ಹೆಚ್ಚು ಬಳಕೆ ಮಾಡುತ್ತಾರೆ. ಕೊಳವೆ ಬಾವಿಯ ನೀರು ಕುಡಿಯಲು ಯೋಗ್ಯ ಎಂದು ಹೇಳುತ್ತಾರೆ. ಆದರೆ, ಎಲ್ಲ ಕಡೆಗಳಲ್ಲಿ ಇದು ಅನ್ವಯವಾಗು ವುದಿಲ್ಲ. ಭೂಮಿಯೊಳಗಿನ ಕೆಲ ಅಂಶಗಳು ನೀರಿನಲ್ಲಿ ಸೇರುವುದರಿಂದ ಅದರ ಪರೀಕ್ಷೆ ಅತ್ಯವಶ್ಯ ಎನ್ನುತ್ತಾರೆ  ಭೂವಿಜ್ಞಾನಿ ಬಾಲಕೃಷ್ಣ.ಜಿಲ್ಲೆಯಲ್ಲಿ  ಕೆಲವಡೆ ಕ್ಲೋರೈಡ್, ಪ್ಲೋರೈಡ್ ಹಾಗೂ ಕಬ್ಬಿಣಾಂಶ ಇದೆ. ಹೀಗಾಗಿ ನೀರಿನಲ್ಲಿರುವ ಅಂಶವನ್ನು ಪತ್ತೆ ಮಾಡಿ ಕುಡಿ ಯಲು ಯೋಗ್ಯವಾಗಿದೆಯೋ ಇಲ್ಲವೋ ಎಂಬು ದನ್ನು ತಿಳಿಸುವುದೇ ಈ ಕೇಂದ್ರದ ಮೂಲ ಉದ್ದೇಶ ವಾಗಿದ್ದು, ಪ್ರತಿ ವರ್ಷ ಎರಡು ಬಾರಿ ನೀರಿನ ಗುಣಮಟ್ಟವನ್ನು ಪರೀಕ್ಷೆ ಮಾಡಲಾಗು ತ್ತದೆ. ಮಳೆಗಾಲಕ್ಕೂ ಮುನ್ನ ಒಂದು ಸಾರಿ, ಮಳೆಗಾಲದ ನಂತರ ಮತ್ತೊಂದು ಸಾರಿ ನೀರನ್ನು ಪರೀಕ್ಷಿಸಲಾಗುತ್ತದೆ ಎಂದು ಅವರು ತಿಳಿಸುತ್ತಾರೆ.ನೀವು ನೀರು ತನ್ನಿ: ಕೇವಲ ಜಿ.ಪಂ. ಎಂಜಿನಿ ಯರಿಂಗ್ ವಿಭಾಗಕ್ಕೆ ಗಮನಕ್ಕೆ ಬಂದ ನೀರಿನ ಪರೀಕ್ಷೆ ಮಾಡಲಿಕ್ಕೆ ಮಾತ್ರ ಕೇಂದ್ರವನ್ನು ಸ್ಥಾಪಿ ಸಿಲ್ಲ. ಸಾರ್ವಜನಿಕರು ಸಹ ತಾವು  ಬಳಕೆ ಮಾಡುವ ನೀರಿನ ಮೇಲೆ ಏನೇ ಸಂಶಯ ವಿದ್ದರೂ ಅದನ್ನು ತಂದು ಪರೀ ಕ್ಷಿಸಿಕೊಳ್ಳ ಬಹುದು ಎನ್ನು ತ್ತಾರೆ ಕೇಂದ್ರದ ಉಸ್ತು ವಾರಿ ನೋಡಿಕೊಳ್ಳುವ ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಮುಖ್ಯ ಎಂಜಿನಿಯರ್ ಶ್ರೀಕಾಂತ ಮೈಸೂರು.ಆದರೆ, ನಗರದಲ್ಲಿ ಆರಂಭಿಸಲಾದ ನೀರು ಗುಣಮಟ್ಟ ಪರೀಕ್ಷಾ ಕೇಂದ್ರದಲ್ಲಿ ಕೇವಲ ರಾಸಾಯನಿಕ ವಸ್ತುಗಳ ಪರೀಕ್ಷೆ ಮಾತ್ರ ಮಾಡಲಾಗುತ್ತದೆ. ಆದರೆ ನೀರಿನಲ್ಲಿರುವ ಬ್ಯಾಕ್ಟರಿಯಾ ಪತ್ತೆ ಮಾಡುವ ವ್ಯವಸ್ಥೆಯನ್ನು ಇನ್ನೂ ಈ ಕೇಂದ್ರದಲ್ಲಿ ಅಳವಡಿಸಿಲ್ಲ. ಶೀಘ್ರ ದಲ್ಲಿಯೇ ಇದೇ ಕೇಂದ್ರದಲ್ಲಿ ಬ್ಯಾಕ್ಟೇರಿಯಾ ಪತ್ತೆ ಮಾಡುವ ವ್ಯವಸ್ಥೆ ಆರಂಭಿಸುವ ಬಗ್ಗೆಚಿಂತನೆ ನಡೆದಿದೆ ಎಂದು ಹೇಳುತ್ತಾರೆ ಅವರು.ಜಿಲ್ಲೆಯ ಏಕೈಕೆ ನೀರು ಪರೀಕ್ಷಾ ಕೇಂದ್ರವಾಗಿ ರುವ ಜಿ.ಪಂ. ಆವರಣದಲ್ಲಿರುವ ನೀರು ಗುಣಮಟ್ಟ ಪರೀಕ್ಷಾ ಕೇಂದ್ರ ಜಿಲ್ಲೆಯ ಜನರ ಪಾಲಿಗೆ ವರದಾನವಾಗಿದೆ. ಆದರೆ, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಜನರು ಮುಂದೆ ಬರಬೇಕೆನ್ನುವುದು ಮೈಸೂರ ಅವರ ಆಶಯವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.