ಶುಕ್ರವಾರ, ಏಪ್ರಿಲ್ 16, 2021
31 °C

ಹಿಂದಿನ ಸೇವೆ ಪರಿಗಣಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಗ್ರಾಮೀಣ ಕೃಪಾಂಕ ಮೀಸಲಾತಿ ಅಡಿಯಲ್ಲಿ ಆಯ್ಕೆಗೊಂಡಿ ರುವ ಶಿಕ್ಷಕರ ಹಿಂದಿನ ಸೇವೆ ಪರಿಗಣಿಸಬೇಕು ಹಾಗೂ ಸೇವೆಗೆ ಅನುಗುಣವಾಗಿ ವೇತನ ಹೆಚ್ಚಳ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಕೆಗೆ ಆಗ್ರಹಿಸಿ ಗ್ರಾಮಿಣ ಕೃಪಾಂಕದಿಂದ ಆಯ್ಕೆಯಾದ ಶಿಕ್ಷಕರು ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಸರ್ಕಾರದ ವಿವಿಧ ಇಲಾಖೆಗಳಲ್ಲಿ 5017 ಜನರು ಗ್ರಾಮೀಣ ಕೃಪಾಂಕ ದಡಿ ಆಯ್ಕೆಗೊಂಡು ಕಳೆದ ಹನ್ನೆರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಅವರ ವೇತನ ಕೇವಲ 7 ವರ್ಷ ಸೇವೆ ಆಧಾರದ ಮೇಲಿರುತ್ತದೆ ಎಂದು ಶಿಕ್ಷಕರು ಅಳಲು ತೋಡಿಕೊಂಡರು.ಕೃಪಾಂಕದಡಿ ನೇಮಕಗೊಂಡವರ ಮುಂಬಡ್ತಿಗೆ ಜೇಷ್ಠತೆಯನ್ನು ಸಹ 7 ವರ್ಷದ ಸೇವೆ ಆಧಾರದಲ್ಲಿ ನೀಡ ಲಾಗಿದ್ದು, ಇದರಿಂದ ತಮಗೆ ತಾರತಮ್ಯವಾಗುತ್ತಿದೆ ಎಂದು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು.ಗ್ರಾಮೀಣ ಕೃಪಾಂಕವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಕಾರಣಕ್ಕೆ ಕೃಪಾಂಕ ಆಧಾರಿತ ನೌಕರರು 2003ರಲ್ಲಿ ಸೇವೆಯಿಂದ ಬಿಡುಗಡೆ ಗೊಂಡು ವಿಶೇಷ ನೇಮಕಾತಿ (ವಿಲೀನ) ನಿಯಮಾವಳಿ 2003ರಂತೆ ಮತ್ತೆ ಸೇವೆಯಲ್ಲಿ ಮುಂದುವರಿದಿದ್ದಾರೆ.ಈ ಸಂದರ್ಭದಲ್ಲಿ ಉಂಟಾದ ಗೊಂದಲದಿಂದ ಕೃಪಾಂಕ ಆಧಾರಿತ ನೌಕರರ ಹಿಂದಿನ ಸೇವೆಯು ವೇತನ ನಿಗದಿ ಮತ್ತು ಸೇವಾ ಜೇಷ್ಠತೆಗೆ ಅನ್ವಯಿಸದ ಸ್ಥಿತಿ ನಿರ್ಮಾಣ ಗೊಂಡಿದೆ. ಆದ್ದರಿಂದ ಸರ್ಕಾರ ಅಗತ್ಯ ತಿದ್ದುಪಡಿ ಮಾಡಿ ಹಿಂದಿನ ಸೇವೆಯನ್ನು ಪರಿಗಣಿಸಬೇಕು ಎಂದು ಶಿಕ್ಷಕರು ಒತ್ತಾಯಿಸಿದರು.ಅಪರ ಜಿಲ್ಲಾಧಿಕಾರಿ ಕಾಶಿನಾಥ ಹೊನಕೇರಿ ಮನವಿ ಸ್ವೀಕರಿಸಿದರು. ಪಿ.ಬಿ. ಹಿರೇಮಠ, ಎಸ್.ಎಸ್. ಗಡದ, ಎಲ್.ಎಸ್. ಗಿರಿತಮ್ಮಣ್ಣವರ, ಎಸ್.ಸಿ. ಮೆಣಸಗಿ, ಎಸ್.ಟಿ. ಲಮಾಣಿ, ಎಂ.ಬಿ. ತೋಟಗೇರ, ಎಸ್.ವಿ. ವಸ್ತ್ರದ, ಕೆ.ವಿ. ಗೌಡರ,  ಎಸ್.ಎಸ್. ಹಂಡಿ, ಟಿ.ಬಿ. ಹಣಗಿ, ಎಸ್.ಎಂ. ಹೊಸಗೌಡರ, ಮಲ್ಲಯ್ಯ ಬಿ.ಎಚ್., ಎಸ್.ಜಿ. ಬಿರಾದಾರ ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.