ಬುಧವಾರ, ಜುಲೈ 28, 2021
21 °C

ಹಿತ್ತಿಲು-ಹೊಸ್ತಿಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2010 ಹೇಗಿತ್ತು?

2011ರ ಕನಸುಗಳೇನು?


ಚಿತ್ರರಂಗದ ನಾಲ್ವರ ಮುಂದೆ ‘ಸಿನಿಮಾ ರಂಜನೆ’ ಮಂಡಿಸಿದ ಪ್ರಶ್ನೆಗಳಿವು. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕ ಉಪೇಂದ್ರ, ನಟ ಪುನೀತ್ ರಾಜಕುಮಾರ್ ಹಾಗೂ ನಟಿ ರಾಧಿಕಾ ಪಂಡಿತ್- ಬೇರೆ ಬೇರೆ ಕಾರಣಗಳಿಂದ 2010ರಲ್ಲಿ ಗಮನಸೆಳೆದ ಈ ನಾಲ್ವರು ಕನ್ನಡ ಚಿತ್ರರಂಗದ ಪ್ರತಿನಿಧಿಗಳೆಂದು ಭಾವಿಸಿ ಈ ಪ್ರಶ್ನೆಗಳನ್ನು ಕೇಳಲಾಯಿತು.ಆರೋಗ್ಯವೇ ಭಾಗ್ಯ

ವೃತ್ತಿ ಬದುಕಿನಲ್ಲಿ ಮತ್ತು ವೈಯಕ್ತಿಕವಾಗಿ 2010 ಎಲ್ಲಾ ರೀತಿಯಲ್ಲೂ ಚೆನ್ನಾಗಿತ್ತು. 2011ರಲ್ಲಿ ಒಳ್ಳೆಯ ಸಿನಿಮಾಗಳನ್ನು ಮಾಡಬೇಕು, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ವೈಯಕ್ತಿಕ ಬದುಕನ್ನು ಎಂಜಾಯ್ ಮಾಡಬೇಕು ಎಂಬಾಸೆ ಇದೆ. ಮಾದೇಶ ನಿರ್ದೇಶನದ ಚಿತ್ರದ ನಂತರ ಯೋಗರಾಜ್ ಭಟ್ ಮತ್ತು ಸೂರಿ ಅವರ ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಇನ್ನೊಂದು ಚಿತ್ರ ಚರ್ಚೆಯಲ್ಲಿದೆ.

-ಪುನೀತ್ ರಾಜ್‌ಕುಮಾರ್ಸೋಮಾರಿತನ ಬಿಡಬೇಕು

ನನ್ನ ವೃತ್ತಿ ಬದುಕಿಗೆ 2010 ಒಳ್ಳೆಯ ವರ್ಷ. ‘ಲವ್‌ಗುರು’ ಚಿತ್ರದ ನಟನೆಗೆ ಫಿಲ್ಮ್‌ಫೇರ್ ಪ್ರಶಸ್ತಿ ಬಂತು. ‘ಮೊಗ್ಗಿನ ಮನಸು’ ಚಿತ್ರದ ನಟನೆಗೆ ರಾಜ್ಯಪ್ರಶಸ್ತಿ ಬಂತು. ‘ಕೃಷ್ಣನ್ ಲವ್ ಸ್ಟೋರಿ’ ಯಶಸ್ವಿಯಾಯಿತು. ವಜ್ರೇಶ್ವರಿ ಕಂಬೈನ್ಸ್‌ನ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅರ್ಜುನ್ ನಿರ್ದೇಶನದ ‘ಅದ್ದೂರಿ’ ಚಿತ್ರಕ್ಕೆ ಆಯ್ಕೆಯಾದೆ. 2011 ಕೂಡ ಹೀಗೆಯೇ ಇರಲಿ ಅಥವಾ ಇದಕ್ಕಿಂತಲೂ ಒಳ್ಳೆಯದಿರಲಿ.ನಾನು ತುಂಬಾ ಸೋಮಾರಿ. ಯಾವುದೇ ಕೆಲಸವನ್ನು ಮುಂದೂಡುತ್ತಿರುತ್ತೇನೆ. 2011ರಲ್ಲಿ ಅಂದಿನ ಕೆಲಸವನ್ನು ಅಂದೇ ಮಾಡುವಾಸೆ ಇದೆ. ನಾನು ಯಾವುದನ್ನೂ ಪ್ಲಾನ್ ಮಾಡಿಲ್ಲ. ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಂತೂ ಇದೆ.

-ರಾಧಿಕಾ ಪಂಡಿತ್ಹಳೆ ಬಾಕಿ ಹೊಸ ಕನಸು

ಸೂಪರ್ ಕ್ಷಣಗಳು, ಸೂಪರ್ ಅನುಭವ, ಸೂಪರ್ ಸಿನಿಮಾ, ಸೂಪರ್ ಕಲೆಕ್ಷನ್..ಎಲ್ಲಾ ಸೂಪರ್ರೇ ಸೂಪರ್ರು. ಒಟ್ನಲ್ಲಿ ಸೂಪ್‌ಸೂಪರ್ 2010! ವರ್ಷಪೂರ್ತಿ ಸೂಪರ್‌ದೇ ಕೆಲಸ. ಇದು ಬಿಟ್ರೆ ಬೇರೇನೂ ಹೊಕ್ಕಿರಲೇ ಇಲ್ಲಾ ತಲೇಲಿ.ಹತ್ತು ವರ್ಷಗಳ ನಂತರ ನನ್ನ ಡೈರೆಕ್ಷನ್ ನಿರೀಕ್ಷೆ ಮಾಡ್ತಿರೋವ್ರಿಗೂ ಖುಷಿ ಸಿಕ್ತು.2011 ಹಳೇ ಬಾಕಿ ತೀರಿಸೋ ವರ್ಷ. ಎರಡು-ಮೂರು ಸಿನಿಮಾಗಳಲ್ಲಿ ನಟಿಸೋದಕ್ಕೆ ಒಪ್ಕೊಂಡಿದೀನಿ. ಮತ್ತೊಂದು ಫಿಲಮ್ ಡೈರೆಕ್ಷನ್ನಿಗಿದೆ. ಎಲ್ಲಕ್ಕಿಂತ ಮುಖ್ಯ ನನ್ನೆಲ್ಲಾ ಪ್ರಾಜೆಕ್ಟ್‌ಗಳಿಗೆ ಪ್ರಿಯಾ (ಪತ್ನಿ) ಮತ್ತಿನ್ನೇನು ಸಜೆಶನ್, ಐಡಿಯಾ ಕೊಡ್ತಾಳೆ ಅಂತ ಕಾಯೋದು!‘ಸೂಪರ್’ ತಲೇಲಿ ಕೆಲಸ ಮಾಡ್ತಿರಬೇಕಾದ್ರೆ ಒಂದೈದಾರು ಐಡಿಯಾಗಳು ಇಣುಕಿವೆ. ನೋಡೋಣ,ನಾನು ಸಿನಿಮಾ ನೋಡೋವಾಗೂ ಪಕ್ಕಾ ಪ್ರೇಕ್ಷಕ. ಮಾಡೋವಾಗೂ ಅಷ್ಟೇ.ಪ್ರೇಕ್ಷಕನನ್ನ ತಲೆಯೊಳಗಿಟ್ಕೊಂಬಿಟ್ರೆ ಒಂಥರಾ ಸೇಫರ್ ಸೈಡ್! ಅದರ ಆಚೆಗೂ ನನ್ನೊಳಗಿನ ವಿಮರ್ಶಕ ‘ತರ್ಕಪುರಾಣ’ ಬಿಚ್ಚತಾನೇ ಇರ್ತಾನೆ. ಅವನ ಕೆಲಸವೇ ಆದು ತಾನೆ? ನೋಡೋಣ ಹೇಗಿರತ್ತೋ 2011.

-ಉಪೇಂದ್ರ

ಎರಡು ಸ್ಕ್ರಿಪ್ಟ್‌ಗಳು ಮುಂದಿವೆ

ಇಡೀ ವರ್ಷ ಸೂಪರ್ರೇ ಆಯ್ತು. ಅಂದ್ಕೊಂಡದ್ದಕ್ಕಿಂತ ಜಾಸ್ತಿಯೇ ಸಕ್ಸಸ್ಸು. ಉಪೇಂದ್ರ, ನಾನು ಇಬ್ಬರೂ ನಿರೀಕ್ಷೆಯ ಭಾರದಲ್ಲೇ ವರ್ಷ ಕಳೆದೆವು.ಈಗ ಫಲ ಸಿಕ್ಕಿದೆ.ಮುಂದಿನ ವರ್ಷ ಎರಡು ಸಿನಿಮಾ ಮಾಡುವ ಸಾಧ್ಯತೆ ಇದೆ.ದಿಗಂತ್ ಕಳುಹಿಸಿದ್ದ ರಾಘವೇಂದ್ರ ಎಂಬುವರ ಸ್ಕ್ರಿಪ್ಟ್ ಹಿಡಿಸಿದೆ.ಇನ್ನೊಂದು ಪುನೀತ್‌ಗಾಗಿ ಸಿದ್ಧವಾಗ್ತಾ ಇದೆ. 2011ನ್ನು ನೋಡೋಣ. 

- ರಾಕ್‌ಲೈನ್ ವೆಂಕಟೇಶ್

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.