ಬುಧವಾರ, ಏಪ್ರಿಲ್ 21, 2021
30 °C

ಹಿನ್ನೀರ ದ್ವೀಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇರಳದ ಒಂದು ಸುಂದರ ದ್ವೀಪ, ಹೆಸರು ಕುಮಾರಕೊಮ್. ವೆಂಬನಾಡ ಸರೋವರದ ನಡುವೆ ಇರುವ ಈ ದ್ವೀಪ ಗ್ರಾಮ ಕುಟ್ಟನಾಡ ಪ್ರದೇಶದ ಭಾಗವಾಗಿದೆ.ಕೊಟ್ಟಾಯಂ ಪಟ್ಟಣದಿಂದ 16 ಕಿ.ಮೀ. ಅಂತರದಲ್ಲಿ ಇರುವ ಈ ದ್ವೀಪ ಅಪರೂಪದ ಅನುಭವಗಳನ್ನು ನೀಡುತ್ತದೆ.ತೆವಳಿದಂತೆ ಹರಿಯುವ ಹಿನ್ನೀರು, ಪಕ್ಷಿಗಳ ಇನಿದನಿ, ಸಾಲು ತೆಂಗಿನ ಮರಗಳು ಈ ದ್ವೀಪಕ್ಕೆ ಅದ್ಭುತ ಸೌಂದರ್ಯ ನೀಡಿವೆ.ಇಲ್ಲಿನ 14 ಎಕರೆ ಪ್ರದೇಶದಲ್ಲಿ ಹರಡಿದೆ ಒಂದು ಸುಂದರ ಪಕ್ಷಿಧಾಮ. ಇಲ್ಲಿ ಭಾರತೀಯ ಹಕ್ಕಿಗಳಲ್ಲದೇ ವಲಸೆ ಬರುವ ಹಕ್ಕಿಗಳೂ ಇವೆ. ಅವುಗಳಲ್ಲಿ ಸೈಬೀರಿಯನ್ ಸ್ಟೊರ್ಕ್ ಬಹಳ ಸಂಖ್ಯೆಯಲ್ಲಿ ಕಂಡುಬರುತ್ತವೆ. ನೀರು ಆವರಿಸಿದ ಈ ಹಸಿರು ಊರು ತನ್ನ ಸ್ವಚ್ಛ ಪರಿಸರದಿಂದ ಮನಸೆಳೆಯುತ್ತದೆ.ಈ ಊರಿನ ಹಳೇ ಬಂಗಲೆಗಳನ್ನು ರೆಸಾರ್ಟ್‌ಗಳಾಗಿ ಪರಿವರ್ತಿಸಿ ಪ್ರವಾಸಿಗರಿಗೆ ನೀಡಲಾಗುತ್ತಿದೆ. ಅಲ್ಲದೇ ನೀರಿನ ಮೇಲೆ ತೇಲುವ ದೋಣಿಮನೆಗಳು ಕೂಡ ಲಭ್ಯ. ಸರೋವರದಲ್ಲಿ ದೋಣಿವಿಹಾರಕ್ಕೂ ಅವಕಾಶ ಇದೆ. ಜೊತೆಗೆ ಬಲೆ ಬೀಸಿ ಮೀನುಗಳನ್ನು ಕೂಡ ಹಿಡಿಯಬಹದು.ಕೇರಳ ಸರ್ಕಾರ ಈ ಗ್ರಾಮವನ್ನು ಪ್ರವಾಸಿಗರ ದೃಷ್ಟಿಯಿಂದ ಸಾಕಷ್ಟು ಅಭಿವೃದ್ಧಿಪಡಿಸಿದೆ. ಸರ್ಕಾರಿ ವಸತಿಗೃಹಗಳೂ ಇಲ್ಲಿವೆ. ಇಲ್ಲಿಗೆ ಕೊಟ್ಟಾಯಂ ಹತ್ತಿರದ ರೈಲುನಿಲ್ದಾಣ. ಕೊಚಿನ್ ಹತ್ತಿರದ ವಿಮಾನ ನಿಲ್ದಾಣ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.