ಹಿರಿಯೂರು: ಕೇಂದ್ರ ಸರ್ಕಾರದಿಂದ ಹಿರಿಯೂರಿಗೆ ್ಙ 3.50 ಕೋಟಿ ವೆಚ್ಚದ 30 ಹಾಸಿಗೆಗಳ ಆಸ್ಪತ್ರೆಗೆ ಅನುಮೋದನೆ ಸಿಕ್ಕಿದೆ ಎಂದು ಶಾಸಕ ಡಿ.ಸುಧಾಕರ್ ಸುದ್ದಿಗಾರರಿಗೆ ತಿಳಿಸಿದರು.

ಪ್ರಸ್ತುತ ನಗರದಲ್ಲಿ ನೂರು ಹಾಸಿಗೆಗಳ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆಯಿದ್ದು. ಸದರಿ ಆಸ್ಪತ್ರೆ ನಗರದ ಮಧ್ಯ ಭಾಗದಲ್ಲಿ ಇರುವ ಕಾರಣ ಕೆಲವು ಸಮಸ್ಯೆಗಳಿದ್ದು, ಪ್ರಸ್ತುತ ಮಂಜೂರಾಗಿರುವ ಆಸ್ಪತ್ರೆಯನ್ನು ನಗರಕ್ಕೆ ಹೊಂದಿಕೊಂಡಂತೆ ಸರ್ಕಾರಿ ಭೂಮಿ ಇದ್ದರೆ ಅಲ್ಲಿ, ಇಲ್ಲವಾದಲ್ಲಿ ಖಾಸಗಿಯವರ ಭೂಮಿ ಖರೀದಿಸಿ ವ್ಯವಸ್ಥಿತವಾಗಿ ನಿರ್ಮಿಸುವ ಯೋಜನೆ ಇದೆ ಎಂದು ಅವರು ಹೇಳಿದ್ದರು.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಬಿ. ಶ್ರೀರಾಮುಲು ಅವರಿಗೆ ಹಿರಿಯೂರಿಗೆ ಇನ್ನೊಂದು ಆಸ್ಪತ್ರೆಯ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಅವರು ಕೇಂದ್ರಕ್ಕೆ ಶಿಫಾರಸು ಮಾಡಿದ್ದರ ಮೇರೆಗೆ ಜುಲೈ 2 ರಂದು ಆಸ್ಪತ್ರೆ ಮಂಜೂರಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವೆಂಕಟೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆನಂದ ಪ್ರಕಾಶ್ ಜತೆ ಮಾತುಕತೆ ನಡೆಸಿ ನೂತನ ಆಸ್ಪತ್ರೆ ನಿರ್ಮಾಣ ಕುರಿತು ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದು ಸುಧಾಕರ್ ಹೇಳಿದರು.

ಅವ್ಯವಸ್ಥೆಯ ಆಗರವಾಗಿರುವ ಆಸ್ಪತ್ರೆ: ನಗರದಲ್ಲಿರುವ ನೂರು ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ ಎನ್ನುವುದು ನಾಗರಿಕರ ಆರೋಪ. ಆಸ್ಪತ್ರೆಗೆ ಬರುವ ಹೊರರೋಗಿಗಳಿಗೆ ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಆಸ್ಪತ್ರೆಯ ಆವರಣದ ಗೋಡೆಯೇ ಇವರಿಗೆ ಮೂತ್ರ ವಿಸರ್ಜನಾ ಸ್ಥಳವಾಗಿದೆ. ಮಳೆಯ ನೀರು ಹೋಗಲು ನಿರ್ಮಿಸಿರುವ ಚರಂಡಿಯನ್ನು ರಾತ್ರಿ ವೇಳೆ ರಸ್ತೆಯಲ್ಲಿ ಓಡಾಡುವವರು ಬಯಲು ಶೌಚಾಲಯ ಮಾಡಿ ಕೊಂಡಿದ್ದಾರೆ.

ಆಸ್ಪತ್ರೆಯ ಹಿಂಭಾಗದಲ್ಲಿ ವಾಸಿಸುತ್ತಿರುವ ನಿವಾಸಿಗಳು ಮನೆಯ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಆವರಣದ ಒಳಗೆ ಬಿಸಾಡುವ ಕಾರಣ ತ್ಯಾಜ್ಯ ವಸ್ತು ಸಂಗ್ರಹದ ಘಟಕದಂತೆ ಕಾಣುತ್ತದೆ. ಆಸ್ಪತ್ರೆಯ ಆವರಣದ ಒಳಭಾಗಕ್ಕೆ ಡಾಂಬರು ಅಥವಾ ಕಾಂಕ್ರೀಟ್ ಹಾಕಿಸುವಂತೆ ನೂರಾರು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎನ್ನುವುದು ಸಾರ್ವಜನಿಕರ ದೂರು.

ಈ ಬಗ್ಗೆ ಆಸ್ಪತ್ರೆಯ ವೈದ್ಯರೊಬ್ಬರು ಪ್ರತಿಕ್ರಿಯಿಸಿ, ನಾಗರೀಕರ ಆರೋಪಗಳಲ್ಲಿ ಪೂರ್ಣ ಸತ್ಯಾಂಶವಿದೆ. ಈಗಿರುವ ಸ್ಥಳದಲ್ಲಿ ನೂರು ಹಾಸಿಗೆಗಳ ಆಸ್ಪತ್ರೆಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲು ಸಾಧ್ಯವಾಗದು. ಪ್ರಧಾನ ರಸ್ತೆಯ ಅಂಗಡಿಗಳಲ್ಲಿ ಕೆಲಸಕ್ಕಿರುವ ಎಷ್ಟೋ ಜನ ಶೌಚಕ್ಕೆ ಆಸ್ಪತ್ರೆಯ ವಾರ್ಡ್ಗಳಿಗೆ ಬರುತ್ತಿದ್ದಾರೆ. ಹೀಗಾಗಿ ಶುಚಿತ್ವದ ಸಮಸ್ಯೆ ಎದುರಾಗಿದೆ.

ಆಸ್ಪತ್ರೆಯ ಎಡಭಾಗದಲ್ಲಿರುವ ಮುಖ್ಯ ದ್ವಾರವನ್ನು ತೆರೆದರೆ ಇಡೀ ಆವರಣ ಬಯಲು ಮೂತ್ರಾಲಯವಾಗುತ್ತದೆ. ಬಿಸಿಲು ಹೆಚ್ಚಿದ್ದಾಗ ಆವರಣ ಗೋಡೆ ಪಕ್ಕದಲ್ಲಿರುವ ಕೊಠಡಿಗಳಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲದಷ್ಟು ದುರ್ವಾಸನೆ ಬರುತ್ತದೆ. ಸಿಬ್ಬಂದಿಗೆ ನಿರ್ಮಿಸಿರುವ ವಸತಿ ಗೃಹಗಳು ಹಳೆಯದಾಗಿವೆ.

ನಗರದ ಹೊರಭಾಗದಲ್ಲಿ ಕನಿಷ್ಠ ಹತ್ತು ಎಕರೆ ಜಾಗದಲ್ಲಿ ಸಿಬ್ಬಂದಿಗೆ ಅಗತ್ಯವಿರುವ ವಸತಿಯೊಂದಿಗೆ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿದರೆ ಮಾತ್ರ ನಾಗರಿಕರಿಗೆ ಉತ್ತಮ ಸೇವೆ ನೀಡಬಹುದು. ಹಳೆಯ ಆಸ್ಪತ್ರೆಯನ್ನು ಬೇಕಾದರೆ ಹಾಗೆಯೇ ಉಳಿಸಿಕೊಳ್ಳಬಹುದು ಎಂದು ಸಲಹೆ ಕೊಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.